Ad Widget

ಐವರ್ನಾಡು ಅಡಿಕೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು – ಮಂಡೆಕೋಲಿನ ಯುವಕನ ಬಂಧನ

ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ, ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ್ದ 5 ಗೋಣಿ ಚೀಲ ಅಡಿಕೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 30-2024 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿ ಮಂಡೆಕೋಲು ಗ್ರಾಮ, ಸುಳ್ಯ ನಿವಾಸಿ ಸುಪೀತ್‌ ಕೆ (20) ಎಂಬಾತನನ್ನು ವಶಕ್ಕೆ ಪಡೆದು, 83,000/ ರೂ ಮೌಲ್ಯದ 209 ಕೆ ಜಿ ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ರೂ 1,00,000/ ಮೌಲ್ಯದ ಆಟೋ ರಿಕ್ಷಾ ವನ್ನು ಸ್ವಾಧೀನಪಡಿಸಲಾಗಿದೆ.

ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಬೆಳ್ಳಾರೆ ಪೊಲೀಸ್‌ ಠಾಣಾ ಉಪನಿರೀಕ್ಷಕರಾದ ಬಿ.ಪಿ ಸಂತೋಷ್ ಹಾಗೂ ಠಾಣಾ ಸಿಬ್ಬಂಧಿಗಳಾದ ನವೀನ ಕೆ , ಕೃಷ್ಣಪ್ಪ , ದೇವರಾಜ್‌, ಸಂತೋಷ್‌ ಕೆ ಜಿ, ಸುಭಾಸ್‌ ಕಿತ್ತೂರ, ಪುರಂದರ ರವರುಗಳ ತನಿಖಾ ತಂಡ ಕಾರ್ಯಚರಣೆ ನಡೆಸಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!