Ad Widget

ಸುಳ್ಯಕ್ಕೆ ಕ್ಯಾ. ಬ್ರಿಜೇಶ್ ಚೌಟ ಭೇಟಿ – ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ – ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿಗೆ ಆದ್ಯತೆ : ಕ್ಯಾ. ಬ್ರಿಜೇಶ್ ಚೌಟ 

ಸುಳ್ಯ: ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಮಾತ್ರ ಜಯ ಗಳಿಸಲು ಸಾಧ್ಯ ಎಂಬ ಅರಿವು ನನಗಿದೆ. ನಾನು 8 ವರ್ಷ ಸೈನ್ಯದಲ್ಲಿ ಕೆಲಸ ಮಾಡಿದ್ದೇನೆ. ಸಂಘಟಿತವಾಗಿ ಕೆಲಸ ಮಾಡುವುದನ್ನು ನನಗೆ ಸೈನ್ಯ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕಲಿಸಿದೆ.  ಕಳೆದ 10 ವರ್ಷಗಳಿಂದ ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಹಿಂದುತ್ವ ನನ್ನ ಆದ್ಯತೆ. ಹಿಂದುತ್ವ ನನ್ನ ಬದ್ಧತೆ. ಬದ್ಧತೆ ಇಟ್ಟುಕೊಂಡೇ ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ ಎಂದು ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ‌.
ಅವರು ಸುಳ್ಯ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ  ಸುಳ್ಯ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು‌. ಎಲ್ಲರ ಅಭಿಪ್ರಾಯ, ವಿಶ್ವಾಸ ಪಡೆದು ಕಾರ್ಯಕರ್ತರ ಮತ್ತು ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ  ಕೆಲಸ ಮಾಡುತ್ತೇನೆ ಎಂದವರು ಹೇಳಿದರು.  500 ವರ್ಷಗಳ ಹೋರಾಟದ ಬಳಿಕ ಶ್ರೀ ರಾಮ ಮಂದಿರ ಕಟ್ಟಿದ್ದೇವೆ. ಇದರಿಂದ ಭಾರತಕ್ಕೆ ವಿಶೇಷ ಶಕ್ತಿ ಬಂದಿದೆ ಎಂದ ಅವರು ವಿಕಸಿತ ಭಾರತದ ನಿರ್ಮಾಣ ನಮ್ಮ ಸಂಕಲ್ಪ ಎಂದರು.
ಚುನಾವಣಾ ಕಚೇರಿಯನ್ನು  ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ 60 ಸಾವಿರ ಮತಗಳ ಬಹುಮತವನ್ನು ಗಳಿಸಿಕೊಡಲು ಕಟಿ ಬದ್ಧರಾಗಿ ಕೆಲಸ ಮಾಡೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಎನ್.ಮನ್ಮಥ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಹರೀಶ್ ಕಂಜಿಪಿಲಿ, ಜಿಲ್ಲಾ
ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು,ಜಿಲ್ಲಾ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು,ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ,  ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಎ.ವಿ.ತೀರ್ಥರಾಮ, ಎಸ್.ಎನ್.ಮನ್ಮಥ, ಸೀತಾರಾಮ ಬೆಳಾಲು, ವೆಂಕಟ್ ದಂಬೆಕೋಡಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

ದೈವ, ದೇವರ ದರ್ಶನ-ಪ್ರಮುಖರ ಭೇಟಿ:

ಬೆಳಿಗ್ಗೆ ಸುಳ್ಯಕ್ಕೆ ಆಗಮಿಸಿದ ಬ್ರಿಜೇಶ್ ಚೌಟ
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಹಾಗೂ  ಕಲ್ಕುಡ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹಳೆ ಬಸ್ ನಿಲ್ದಾಣದಲ್ಲಿರುವ ಡಾ. ಕುರುಂಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ,  ನಗರ ಪಂಚಾಯತ್ ಮುಂಭಾಗದಲ್ಲಿರುವ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ. ಚಿದಾನಂದ ಕೆ.ವಿ,‌ ಮಾಜಿ ಸಚಿವ ಎಸ್.ಅಂಗಾರ, ಆರ್‌ಎಸ್‌ಎಸ್‌ ತಾಲೂಕು ಸಂಘ ಚಾಲಕ್ ಚಂದ್ರಶೇಖರ ತಳೂರು ಅವರನ್ನು ಭೇಟಿ ಮಾಡಿದರು.  ಮಾವಿನಕಟ್ಟೆ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!