Ad Widget

ಎನ್ನೆಂಸಿ ಸುಳ್ಯ ಹಾಗೂ ಜಿಲ್ಲಾ ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ



ಮತದಾನ ಯಾಕೆ ಬೇಕು? – ಬೀದಿ ನಾಟಕ:


ನೆಹರೂ ಮೆಮೋರಿಯಲ್ ಕಾಲೇಜು ಮತ್ತು ಜಿಲ್ಲಾ ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಮತದಾನದ ಕುರಿತು ಬೀದಿನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಯಿತು.

  ಮಾರ್ಚ್ 15, ಶುಕ್ರವಾರ “ಮತದಾನ ಯಾಕೆ ಬೇಕು?” ಎಂಬ ಬೀದಿನಾಟಕವನ್ನು ಕೆವಿಜಿ ವೃತ್ತ ಕುರುಂಜಿಭಾಗ್ ನಲ್ಲಿ   ಪ್ರದರ್ಶಿಸಲಾಯಿತು.

ಈ ಬೀದಿನಾಟಕವನ್ನು ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಮಮತಾ ಕೆ ನಿರ್ದೇಶಿಸಿದ್ದು, ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಭವ್ಯ ಪಿ.ಎಂ ಮತ್ತು ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಎ.ಎನ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ., ಶೈಕ್ಷಣಿಕ ಸಲಹೆಗಾರರಾದ ಪ್ರೊ.ಬಾಲಚಂದ್ರ ಎ.ಎಂ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ ಡಿ, ವರ್ತಕ ಸಂಘದ ಅಧ್ಯಕ್ಷರಾದ ಸುದಾಕರ ರೈ, ಸುಳ್ಯದ ಬೂತ್ ಮಟ್ಟದ ಚುನಾವಣಾಧಿಕಾರಿಗಳಾಗಿರುವ ಶಿವಪ್ರಸಾದ್, ಕಮಲಾಕ್ಷ, ವರ್ಷಿತಾ ಇನ್ನಿತರರು ಉಪಸ್ಥತರಿದ್ದರು.


ಜಿಲ್ಲಾ ಮಟ್ಟದ ಸ್ವೀಪ್ ತರಬೇತುದಾರರಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶಿವಾನಂದ ಜಿ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪಿ.ಪಿ. ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಬೀದಿ ನಾಟಕದ ಕಲಾವಿದರ ತಂಡದಲ್ಲಿ ಅಂತಿಮ ಬಿಕಾಂನ ರತ್ನಸಿಂಚನ, ರಕ್ಷಾ, ಅಂತಿಮ ಬಿ.ಎ ವಿಭಾಗದ ಹರ್ಷಿತಾ, ಅಂತಿಮ ಸಮಾಜಕಾರ್ಯ ವಿಭಾಗದ ಸುಶ್ಮಿತಾ, ರೋಹಿತ್, ಯಶಸ್ವಿ, ದ್ವಿತೀಯ ಸಮಾಜಕಾರ್ಯದ ಅಕ್ಷಯ್, ಚಂದನ್, ಪ್ರಥಮ ಸಮಾಜ ಕಾರ್ಯದ ಪ್ರಮಿತಾ, ಸಾತ್ವಿಕ್, ಜಿತೇಶ್, ಪ್ರಥಮ ಬಿಎ ವಿಭಾಗದ ಮಂಜುನಾಥ್ ಮೊದಲಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೆ ಕಾಲೇಜಿನ ಆಡಳಿತ ಮಂಡಳಿ ಪ್ರೋತ್ಸಾಹ ನೀಡಿದ್ದು, ಕಾಲೇಜಿನ ಬೋದಕ ಬೋದಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಲವಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದು, ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!