Ad Widget

ಸುಬ್ರಹ್ಮಣ್ಯ : ಅಡಿಕೆ ಕೃಷಿಕರಿಗೆ ಉಚಿತ ಹೋಮಿಯೋಪತಿ ಔಷಧ ವಿತರಣಾ ಕಾರ್ಯಕ್ರಮ

ಶ್ರೀ ಪಯಸ್ವಿನಿ ಸಾವಯುವ ಕೃಷಿ ಪರಿವಾರ(ರಿ.) ಸುಳ್ಯ ಮತ್ತು ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ಮಾ.11 ರಂದು ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಡಿಕೆ ಕೃಷಿಕರಿಗೆ ಉಚಿತ ಹೋಮಿಯೋಪತಿ ಔಷಧ ವಿತರಣಾ ಕಾರ್ಯಕ್ರಮ ನಡೆಯಿತು.
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಶ್ರೀ ಪಯಸ್ವಿನಿ ಸಾವಯುವ ಕೃಷಿ ಪರಿವಾರ(ರಿ.) ಸುಳ್ಯ ಇದರ ಕಾರ್ಯದರ್ಶಿಯಾದ ಜಯಪ್ರಕಾಶ್ ಕೂಜುಗೋಡು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲೆಚುಕ್ಕಿ ರೋಗದ ಔಷಧ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಪಯಸ್ವಿನಿ ಸಾವಯುವ ಕೃಷಿ ಪರಿವಾರ(ರಿ.) ಸುಳ್ಯ ಇದರ ಅಧ್ಯಕ್ಷರಾದ ಪರಮೇಶ್ವರ ಮನೋಳಿತ್ತಾಯ ಉಪಸ್ಥಿತರಿದ್ದು ಕೃಷಿ ಸ್ವಾನುಭವದ ಬಗ್ಗೆ ಮಾಹಿತಿ ನೀಡಿದರು. ಶಿವರಾಮ ರೈ ಸುಬ್ರಹ್ಮಣ್ಯ ಕೃಷಿ ಮಾಹಿತಿ ನೀಡಿದರು. ನಿವೃತ್ತ ಪ್ರಾಂಶುಪಾಲರಾದ ಪ್ರಭಾಕರ ಕಿರಿಭಾಗ ಹಾಗೂ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸೋಮಸುಂದರ ಕೂಜುಗೋಡು ಶುಭ ಹಾರೈಸಿದರು.
ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ 129 ರೈತರಿಗೆ 1,73,825 ಅಡಿಕೆ ಮರಗಳಿಗೆ ಆಗುವಷ್ಟು ಹೋಮಿಯೋಪತಿ ಔಷಧವನ್ನು ವಿತರಣೆ ಮಾಡಲಾಯಿತು.

Related Posts

error: Content is protected !!