Ad Widget

ಡಿ.09 : ಗುತ್ತಿಗಾರಿನಲ್ಲಿ ಸೌಜನ್ಯಳ ಪರವಾಗಿ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ

ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ಇದರ ನೇತೃತ್ವದಲ್ಲಿ  ಡಿಸೆಂಬರ್ 9 ರಂದು ಗುತ್ತಿಗಾರಿನಲ್ಲಿ ಸೌಜನ್ಯ ನ್ಯಾಯ ಪರವಾಗಿ ಬೃಹತ್ ಹೋರಾಟ ನಡೆಯಲಿದೆ. ನ.11 ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಗುತ್ತಿಗಾರು ಭಾಗದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸರಕಾರಿ ಪ್ರೌಢ ಶಾಲೆ ಎಣ್ಮೂರು: ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ; ಜನ ಸಾಗರದ ಮಧ್ಯೆ ವಿಜಯ ಕುಮಾರ್ ಕೊಡಿಯಾಲ್ ಬೈಲ್ ರವರಿಗೆ ಅಭಿನಂದನೆ

ಸರಕಾರಿ ಪ್ರೌಢಶಾಲೆ ಎಣ್ಮೂರು ಶಾಲಾ ಬಯಲು ರಂಗಮಂದಿರ ನಿರ್ಮಾಣದ ಪ್ರಯುಕ್ತ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾ ಸಂಗಮ ಕಲಾವಿದರಿಂದ ಈ ವರ್ಷದ ವಿಶಿಷ್ಟ ತುಳು ನಾಟಕ ಶಿವಧೂತೆ ಗುಳಿಗೆ ನಾಟಕ ನವೆಂಬರ್ 10ರಂದು ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ದಾಖಲೆ ಸೃಷ್ಟಿಸಿದ ಈ ನಾಟಕದ ನಿರ್ದೇಶಕರಾದ ಶ್ರೀ ವಿಜಯಕುಮಾರ್...
Ad Widget

ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ.

ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನ ೧೧ ರಂದು ನಡೆಯಿತು. ವಿಜೇತರಿಗೆ ಅಮರ ಸುದ್ದಿ ಪತ್ರಿಕೆಯ ಸಂಪಾದಕರಾದ ಮುರಳೀಧರ ಅಡ್ಡನಪಾರೆ, ಮುಖಪುಟ ವಿನ್ಯಾಸಗೊಳಿಸಿದ ಶಿಶಿರ್ ಪೆರಾಜೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಪದ್ಮನಾಭ ಅಂರಬೂರು, ಮಿಥುನ್ ಕರ್ಲಪ್ಪಾಡಿ, ಹರ್ಷಿತಾ ಮುರಳೀಧರ ಅಡ್ಡನಪಾರೆ,...

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ

ಸುಬ್ರಹ್ಮಣ್ಯ: ದೀನ ದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವ ನಮ್ಮ ಅಂತರಾಷ್ಟ್ರೀಯ ಲಯನ್ಸ್ ನ ಉದ್ದೇಶದೊಂದಿಗೆ ಬಡವರ ಸೇವೆಯನ್ನು ನಿರಂತರವಾಗಿ ಮುಂದುವರಿಸೋಣ, ಹಾಗೆಯೇ ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನು ಅರ್ಥೈಸಿಕೊಂಡು ಅವುಗಳಿಗೆ ಬೇಕಾದ ಆಹಾರವನ್ನು ಕಾಡಿನ ಅಂಚಿನಲ್ಲಿ ಸುಲಭವಾಗಿ ಸಿಗುವ ಹಾಗೆ ಬೀಜ ಬಿತ್ತನೆ ಹಾಗೂ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ...

ಗುತ್ತಿಗಾರು ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಗಣಪತಿ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಿದ್ದ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಯಾಸಿಕ.ಯಂ.ಆರ್ ಇವರು 1500 ಮತ್ತು 3000...

ಎಂ ವೆಂಕಪ್ಪ ಗೌಡರಿಂದ ಕೆರೆಮೂಲೆ ವಾರ್ಡ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆ ಮನೆಗೆ ಸಿಹಿತಿಂಡಿ ವಿತರಣೆ.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡರು ಇಂದು ತಮ್ಮ ನಗರ ಪಂಚಾಯತ್ ವಾರ್ಡ್ ಕೆರೆಮೂಲೆ ಯಲ್ಲಿ ಪ್ರತೀ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಶಹೀದ್ ಪಾರೆ,...

ಶಾಲಾ ಮೈದಾನದ ಪಕ್ಕದಲ್ಲಿ ಬೃಹದಾಕಾರದ ಹಾವನ್ನು ಸೆರೆ ಹಿಡಿದ ಅರಣ್ಯ ಇಲಾಖಾ ಸಿಬ್ಬಂದಿ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ಸಂಜೆ ಬೃಹದಾಕಾರದ ಹಾವನ್ನು ಅರಣ್ಯ ವೀಕ್ಷಕರಾದ ರಾಬರ್ಟ್ ರವರು ನಿನ್ನೆ ರಾತ್ರಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿರುವುದಾಗಿ ತಿಳಿದುಬಂದಿದೆ.

ಸುಳ್ಯ : ವಿವೇಕ ಜಾಗೃತ ಬಳಗದ ವತಿಯಿಂದ ಆತ್ಮೋನ್ನತಿ ಶಿಬಿರ

ವಿವೇಕ ಜಾಗೃತ ಬಳಗ ಸುಳ್ಯ ಇದರ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಆತ್ಮೋನ್ನತಿ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಲೆನಾಡಿನ ಜನರ ಹಿತರಕ್ಷಣೆಗಾಗಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ವತಿಯಿಂದ ರಾಜಕೀಯ ಪಕ್ಷ ಸ್ಥಾಪನೆ

ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಅರಣ್ಯ ಖಾಯಿದೆಗಳು ಮೂಲನಿವಾಸಿಗಳಿಗೆ ಮಾರಕವಾಗುತ್ತಿದ್ದು ಉದ್ಯಮಿಗಳಿಗೆ, ಎಸ್ಟೆಟ್, ಲೀಸ್ ಗೆ ಅರಣ್ಯ ಜಾಗ ಪಡೆದವರಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಮಲೆನಾಡಿನ ಸಮಸ್ಯೆಯ ಪರಿಹಾರಕ್ಕೆ 2011 ರಿಂದ ಹೋರಾಟ ಮಾಡಿದರೂ ಪ್ರಯೋಜನ ಬರುತ್ತಿಲ್ಲ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಮಾಹಿತಿಯೂ ಇಲ್ಲ. ಅದರ ಬಗ್ಗೆ ಆಸಕ್ತಿಯೂ ಇಲ್ಲ. ಕ್ಷೇತ್ರಗಳ...

ಆಲೆಟ್ಟಿ ಗ್ರಾಮ ಪಂಚಾಯತ್ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ಧಿಡೀರ್ ದಾಳಿ – ಪರಿಶೀಲನೆ ?

ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಧಿಢೀರ್ ದಾಳಿ ನಡೆಸಿದ್ದು ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಾಗಿ ದೂರುಗಳು ಸಲ್ಲಿಕೆಯಾಗಿದ್ದು ಇದರ ಬಗ್ಗೆ ಇದೀಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ಹಿಂದೆ ಮಾಣಿಮರ್ಧು ಸೇತುವೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಸ್ಥಳೀಯರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ದಾಳಿ ನಡೆಸಿದ್ದಾರೆ ಎಂದು...
Loading posts...

All posts loaded

No more posts

error: Content is protected !!