ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಸುಳ್ಯ ಉಪ ವಿಭಾಗ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗದ ಜನ ಸಂಪರ್ಕ ಸಭೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಮಂಗಳೂರು ವೃತ್ತದ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ರವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್. ಎಲ್. ಸದಸ್ಯರುಗಳಾದ ರಾಜೇಶ್ .ಎನ್. ಎಸ್. ಭಾರತಿ ದಿನೇಶ್, ವಿಶ್ರಾಂತ ಉಪನ್ಯಾಸಕ ವಿಶ್ವನಾಥ ನಡುತೋಟ ರವರು ಸುಬ್ರಹ್ಮಣ್ಯ ಜನತೆಗೆ ಮೆಸ್ಕಾಂನಿಂದ ಆಗಬೇಕಾದ ಕೆಲಸಗಳು ಹಾಗೂ ತೊಂದರೆಗಳ ಬಗ್ಗೆ ತಿಳಿಸಿದರು. ವಿದ್ಯುತ್ ಕಂಟ್ರಾಕ್ಟರ್ ವಸಂತಕುಮಾರ ಕಿದಿಲ್ ಅವರು ಕೃಷಿ ಪಂಪ್ ಸೆಟ್ಗೆ ಸೋಲಾರ್ ಅಳವಡಿಕೆಯಿಂದ ಆಗುವ ಉಪಯೋಗಗಳ ಬಗ್ಗೆ ಕೇಳಿದರು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸೋಲಾರ್ ಕೃಷಿ ಪಂಪ್ಸೆಟ್ದಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳು ಗೃಹ ಬಳಕೆಗೆ ವಿದ್ಯುತ್ ಸಂಪರ್ಕ ಪಡೆಯಲು ಬೇಕಾದ ಕನಿಷ್ಠ ದಾಖಲೆಗಳನ್ನು ತಿಳಿಸಿದರು. ಅಲ್ಲದೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಅನ್ನು ಗ್ರಾಹಕರಿಗೆ ನೀಡುವ ಬಗ್ಗೆ ತಿಳಿಸಿದರು. ಮೆಸ್ಕಾಂನ ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಕೆ ನಾಯ್ಕ್, ಸುಬ್ರಹ್ಮಣ್ಯ ಉಪ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಬ್ರಹ್ಮಣ್ಯ ಸಹಾಯಕ ಇಂಜಿನಿಯರ್ ಹರಿಕೃಷ್ಣ ಕೆ ಜಿ, ಸುಳ್ಯ ಉಪ ವಿಭಾಗದ ಸಹಾಯಕ ಇಂಜಿನಿಯರ್ ನಿವ್ಯ, ಬೆಳ್ಳಾರೆ ಶಾಕಾಧಿಕಾರಿ ಪ್ರಸಾದ್ ಕೆ ವಿ, ಅ ರಂತೋಡು ಶಾಕಾದಿಕಾರಿ ಅಭಿಷೇಕ್ ,ಗುತ್ತಿಗಾರು ಶಾಖಾಧಿಕಾರಿ ಲೋಕೇಶ್ ಎ, ಪಂಜಾ ಶಾಖಾಧಿಕಾರಿ ಮನಮೋಹನ, ಜಾಲ್ಸೂರು ಶಾಖಾಧಿಕಾರಿ ಮಹೇಶ್, ಸುಬ್ರಹ್ಮಣ್ಯ ಸೇವಾ ವಿಭಾಗದ ಶಾಖಾಧಿಕಾರಿ ಬಾಲಕೃಷ್ಣ, ಹಾಗೂ ಸಬ್ಸ್ಟೇಷನ್ ಶಾಖಾಧಿಕಾರಿ ಸುನಿತಾ, ಹಿರಿಯ ಸಹಾಯಕರುಗಳಾದ ಗಣೇಶ್ ಹಾಗೂ ಪ್ರಭಾಕರ ಕಳಿಗೆ ಉಪಸ್ಥಿತರಿದ್ದರು.
- Sunday
- November 24th, 2024