ಸುಬ್ರಹ್ಮಣ್ಯ: ದೀನ ದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವ ನಮ್ಮ ಅಂತರಾಷ್ಟ್ರೀಯ ಲಯನ್ಸ್ ನ ಉದ್ದೇಶದೊಂದಿಗೆ ಬಡವರ ಸೇವೆಯನ್ನು ನಿರಂತರವಾಗಿ ಮುಂದುವರಿಸೋಣ, ಹಾಗೆಯೇ ಮೂಕ ಪ್ರಾಣಿ ಪಕ್ಷಿಗಳ ಮನಸ್ಸನ್ನು ಅರ್ಥೈಸಿಕೊಂಡು ಅವುಗಳಿಗೆ ಬೇಕಾದ ಆಹಾರವನ್ನು ಕಾಡಿನ ಅಂಚಿನಲ್ಲಿ ಸುಲಭವಾಗಿ ಸಿಗುವ ಹಾಗೆ ಬೀಜ ಬಿತ್ತನೆ ಹಾಗೂ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ “ಎಂದು ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆಯ 317 ಡಿ ಪ್ರಾಂತೀಯ ಅಧ್ಯಕ್ಷ ಲಯನ್ .ರೇಣುಕಾ ಸದಾ ನಂದ ಜಾಕೆ ನುಡಿದರು.ಅವರು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಶುಕ್ರವಾರ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಐನೇಕಿದು ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್. ರಾಮಚಂದ್ರ ಪಳಂಗಾಯ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಪ್ರಾಂತೀಯ ಪ್ರಥಮ ಸದಸ್ಯ ಲಯನ್. ಸದಾನಂದ ಜಾಕೆ, ಲಯನ್ಸ್ ಪ್ರಾಂತೀಯ ಅಂಬ್ಯಾಸಿಡರ್ ಪ್ರೊ. ಬಾಲಚಂದ್ರಗೌಡ, ಪ್ರಾಂತೀಯ ಕೋ-ಆರ್ಡಿನೇಟರ್ ಲಯನ್. ಪ್ರಕಾಶ್ ಡಿಸೋಜ, ವಲಯ ಅಧ್ಯಕ್ಷ ಲಯನ್ .ಲಿಜೊ ಜೋಸ್, ವಲಯ ಕೊಆರ್ಡಿನೇಟರ್ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್, ಹಾಗೆಯೇ ಸಂಪಾಜೆ, ಸುಳ್ಯ, ಪಂಜ ,ಕಡಬ ,ಬೆಳ್ಳಾರೆ, ಹಾಗೂ ಗುತ್ತಿಗಾರು ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗುತ್ತಿಗಾರು ಸೈಂಟ್ ಮೇರಿ ಬ್ರೆಜೆಂಟ್ಸ್ ಶಾಲೆಯವರೆಗೆ 30000 ರೂಪಾಯಿ ಮೊತ್ತದ ಸೀರೆಗಳನ್ನು ಉಚಿತವಾಗಿ ನೀಡಲಾಯಿತು. ಪ್ರಾಂತೀಯ ಕ್ರೀಡಾ ಕೂಟಕ್ಕೆ ಲಯನ್ಸ್ ಸದಸ್ಯರುಗಳಿಗೆ ಟೀ ಶರ್ಟ್ ಗಳನ್ನು ಉಚಿತವಾಗಿ ಇದೇ ಸಂದರ್ಭದಲ್ಲಿ ನೀಡಲಾಯಿತು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಲಯನ್. ಸತೀಶ ಕೂಜುಗೋಡು. ಲಯನ್. ಪವನ್ ದಂಪತಿಗಳನ್ನ ಗೌರವಿಸಲಾಯಿತು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್. ರಾಮಚಂದ್ರ ಪಾಳಂಗಾಯ ಸ್ವಾಗತಿಸಿದರು ಪ್ರಾಂತೀಯ ಅಧ್ಯಕ್ಷರ ಪರಿಚಯವನ್ನು ಲಯನ್. ಅಶೋಕ್ ಕುಮಾರ್ ಮೂಲೆ ಮಜಲು ವಾಚಿಸಿದರು. ಕಾರ್ಯದರ್ಶಿ ಲಯನ್. ಸತೀಶ ಕೂಜುಗೋಡು ವರದಿ ಮಂಡಿಸಿದರು. ಕೊನೆಯಲ್ಲಿ ಲಯನ್. ವಿಮಲ ರಂಗಯ್ಯ ಧನ್ಯವಾದ ಸಮರ್ಪಿಸಿದರು.
- Monday
- November 25th, 2024