ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತೀ ವರ್ಷ ವಿಭಿನ್ನ ರೀತಿಯ ಶೈಕ್ಷಣಿಕ ಚಟುವಟಿಕೆ ಕೈಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಮನಸೆಳೆಯುತ್ತದೆ. ಈ ಬಾರಿ ಶಾಲೆಯ ಅಂಗಳದಲ್ಲೆ ಗದ್ದೆ ನಿರ್ಮಾಣ ಮಾಡಿ ಮಕ್ಕಳಿಗೆ ಭತ್ತದ ಬೇಸಾಯದ ಅರಿವು ಮೂಡಿಸಿದೆ. ಜೂನ್ ತಿಂಗಳಲ್ಲಿ ನೆಟ್ಟ ನೇಜಿ ಕಟಾವಿಗೆ ಬಂದಿದ್ದು, ಇಂದು ಕೊಯ್ಲು ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಎಸ್ಡಿಎಂಸಿ, ಪೋಷಕರು, ಶಿಕ್ಷಕರು ಹಾಜರಿದ್ದು ಮಕ್ಕಳಿಗೆ ಕೃಷಿ ಪಾಠ ತಿಳಿಸಿದರು. ಊರಿನ ಹಿರಿಯರಾದ ವಿಶ್ವನಾಥ ಮೂಲೆಮಜಲು ಕಟಾವು ಕಾರ್ಯಕ್ಕೆ ಮುನ್ನುಡಿ ಹಾಕಿದರು. ಮಕ್ಕಳು ಕಟಾವು ಮಾಡಿ ತೆನೆ ಹೊತ್ತು ಭತ್ತದ ಗದ್ದೆಯ ಪ್ರತ್ಯಕ್ಷ ಅನುಭವ ಪಡೆದರು.