ಇಂದು ಮಹಿಳೆಯರು ಸಮಾಜದ ವಿವಿಧ ಸ್ತರಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಳ್ಳುತ್ತಿದ್ದು ತಮ್ಮ ಹಲವು ಒತ್ತಡದ ಮಧ್ಯೆ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲು ಅಸಾಧ್ಯವಾಗಿದ್ದು, ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಹೊರಬಂದು ಆರೋಗ್ಯಯುತ ಜೀವನಕ್ಕಾಗಿ ಇಂತಹ ಆರೋಗ್ಯ ಮಾಹಿತಿ ಕಾರ್ಯಾಗಾರ ಅತೀ ಅಗತ್ಯ ಎಂದು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಖ್ಯಾತ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಣರಾದ ಡಾ.ಗೀತಾ ರವಿಕಾಂತ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ನಡೆದ ಮಹಿಳಾ ಆರೋಗ್ಯ ಸ್ವಾಸ್ಥ್ಯ ಕಾರ್ಯಾಗಾರದಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್, ಗರ್ಭಕೋಶದ ಸಮಸ್ಯೆಗಳು ಹಾಗೂ ಮೆನೋಪಾಸ್ ಸಮಸ್ಯೆಗಳ ಬಗ್ಗೆ ಎಣ್ಮೂರು ಪ್ರೌಢ ಶಾಲಾ ಮಹಿಳಾ ಪೋಷಕರಿಗೆ ಮಾಹಿತಿ ನೀಡಿದರು. ಸುಮಾರು 170 ಮಹಿಳಾ ಪೋಷಕರು ಇದರ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಇನ್ನರ್ ವೀಲ್ ನ ಅಧ್ಯಕ್ಷರಾದ ಶ್ರೀಮತಿ ಸವಿತಾ ನಾರ್ಕೋಡು, ಪೂರ್ವಾಧ್ಯಕ್ಷರಾದ ಶ್ರೀಮತಿ ಮಮತಾ ಮಡ್ತಿಲ, ದಿವ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಿಸಿದ ಶಿಕ್ಷಕಿ ಶ್ರೀಮತಿ ಉಷಾ ಕೆ.ಎಸ್ ಸ್ವಾಗತಿಸಿ, ಶ್ರೀಮತಿ ಸುಮಿತ್ರಾ ಕೆ ವಂದಿಸಿದರು.
- Thursday
- November 21st, 2024