Ad Widget

ಸರ್ಕಾರಿ ಶಾಲೆಯಲ್ಲೂ ಸ್ಮಾರ್ಟ್ ಕ್ಲಾಸ್ – ಜಿಲ್ಲೆಯ 200 ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿರುವ ಸೆಲ್ಕೋ ಸಂಸ್ಥೆ

ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ “ಇ-ಶಾಲಾ”ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇವಲ ಖಾಸಗಿ ಶಾಲೆಗಳ ಮಕ್ಕಳಿಗಷ್ಟೇ ಸೀಮಿತವಾಗಿದ್ದ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಇನ್ನು ಮುಂದೆ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೂ ಲಭ್ಯವಾಗಲಿದೆ. ಹೌದು,ಮೆಂಡಾ ಫೌಂಡೇಶನ್ ಸಹಯೋಗದಲ್ಲಿ ಸೆಲ್ಕೋ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಹಿಂದುಳಿದ ಸುಮಾರು 200 ಶಾಲೆಗಳಿಗೆ ಸೋಲಾರ್ ಆಧಾರಿತ ಡಿಜಿಟಲ್ ಶಿಕ್ಷಣ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನೂ ಹೊಂದಿದೆ. ಆಕರ್ಷಕ ಬೋಧನಾ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದು,ಹಾಜರಾತಿ ಉತ್ತಮಗೊಳಿಸುವುದು ಮತ್ತು ಶಿಕ್ಷಕರ ಕೊರತೆಯನ್ನು ಸರಿದೂಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

ಇ -ಶಾಲಾ ಯೋಜನೆ
ಇ-ಶಾಲಾ ಯೋಜನೆಯಡಿ 1ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿಷಯಗಳ ಪಾಠಗಳನ್ನು ಸ್ಮಾರ್ಟ್ ಟಿವಿ ಮೂಲಕ ಬೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ರಾಜ್ಯ ಸರ್ಕಾರ ಅನುಮೋದಿತ ಪಠ್ಯಕ್ರಮವನ್ನು ‘ನೆಸ್ಟ್ ಎಜುಕೇಶನ್ ಸಂಸ್ಥೆ’ ಸಿದ್ಧ ಪಡಿಸಿದೆ.ಉತ್ತಮ ವಿಡಿಯೋ ಪಾಠಗಳು,ಪ್ರಶ್ನೋತ್ತರಗಳು ಹಾಗೂ ಅಭ್ಯಾಸ ಚಟುವಟಿಕೆಗಳನ್ನು ಜೋಡಿಸಿಕೊಳ್ಳಲಾಗಿದೆ.ಹೆಚ್ಚುವರಿ ಕಲಿಕೆಗೆ ಪೂರಕವಾಗಿ ಪಠ್ಯಕ್ರಮ, ಪಠ್ಯೇತರ ವಿಷಯಗಳಾದ ಯೋಗ,ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋ ಪಾಠಗಳು ಕೂಡ ಲಭ್ಯವಿದೆ. ಇದರ ಇನ್ನೊಂದು ವಿಶೇಷತೆ ಏನೆಂದರೆ ತರಗತಿ ನಿರ್ವಹಣೆಗೆ ಯಾವುದೇ ಇಂಟರ್ನೆಟ್ ಸಂಪರ್ಕದ ಅವಶ್ಯಕತೆ ಇರುವುದಿಲ್ಲ.ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಸೋಲಾರ್ ಪೆನಲ್,ಬ್ಯಾಟರಿ, ಇನ್ವರ್ಟರ್ , 50 ಇಂಚಿನ ಎಲ್.ಇ.ಡಿ ಟಿವಿ ಸೌಲಭ್ಯವನ್ನು ಸೆಲ್ಕೋ ಸಂಸ್ಥೆ ಒದಗಿಸುತ್ತದೆ.ಜೊತೆಗೆ ಈ ಉಪಕರಣಗಳ ಐದು ವರ್ಷಗಳ ನಿರ್ವಹಣೆ ಜವಾಬ್ದಾರಿಯನ್ನು ಸಂಸ್ಥೆ ನೋಡಿಕೊಳ್ಳುತ್ತದೆ.

ಯೋಜನೆ ಅನುಷ್ಠಾನ ಹೇಗೆ..?
ಈ ಯೋಜನೆಯ ವೆಚ್ಚ ಒಟ್ಟು 1.80ಲಕ್ಷ ರೂಪಾಯಿ ಆಗಿದ್ದು,ಇದರಲ್ಲಿ ಶೇಕಡಾ 50ರಷ್ಟನ್ನು ಮೆಂಡಾ ಫೌಂಡೇಶನ್ ಭರಿಸಲಿದೆ. ಇನ್ನುಳಿದ ಶೇಕಡಾ 50ರಷ್ಟು ವೆಚ್ಚವನ್ನು ಸ್ಥಳೀಯ ದಾನಿಗಳು,ಉದ್ಯಮಿಗಳು, ಎಸ್.ಡಿ.ಎಂ.ಸಿ ಅಥವಾ ಸಂಘ ಸಂಸ್ಥೆಗಳು ಭರಿಸುವಂತೆ ಯೋಜನೆ ರೂಪಿಸಲಾಗಿದೆ.ಒಟ್ಟು ವೆಚ್ಚದಲ್ಲಿ ಐದು ವರ್ಷದ ನಿರ್ವಹಣೆ ವೆಚ್ಚವೂ ಒಳಗೊಂಡಿರುವುದು ಯೋಜನೆ ಸದುಪಯೋಗವಾಗುವ ಬಗ್ಗೆ ಖಾತ್ರಿ ನೀಡುತ್ತಿದೆ.ಈ ಯೋಜನೆಯು ಸಂಪೂರ್ಣವಾಗಿ ಸೋಲಾರ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವುದರಿಂದ,ವಿದ್ಯುತ್ ವ್ಯತ್ಯಯದಿಂದ ಕಲಿಕೆಗೆ ತಡೆ ಉಂಟಾಗುವ ಭಯವಿಲ್ಲ.ಪಾಠ ಬೋಧನೆ ವೇಳೆ ನಿಂತು ವಿಷಯದ ಪೂರಕ ವಿವರಣೆ ಒದಗಿಸಲು ಸಹ ತಾಂತ್ರಿಕ ಸೌಲಭ್ಯ ಕಲ್ಪಿಸಲಾಗಿದ್ದು ಕಲಿಕೆ ಪರಿಣಾಮಕಾರಿಯಾಗಿಸಲು ಇದು ಸಹಕಾರಿಯಾಗಿದೆ.

ನೀವೂ ಕೈ ಜೋಡಿಸಬೇಕೆ…?
ಮಕ್ಕಳ ಕಲಿಕೆಯನ್ನು ಸರಳಗೊಳಿಸುವ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಬೋಧಿಸುವ ಈ ಸೌಲಭ್ಯ ಗ್ರಾಮೀಣ ಭಾಗದ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊರೆಯುವಂತಾಗಬೇಕು ಎಂಬುದು ಸೆಲ್ಕೋ ಸಂಸ್ಥೆಯ ಆಶಯವಾಗಿದೆ. ನಮ್ಮ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ದಾನಿಗಳು,ಶಿಕ್ಷಣ ಪ್ರೇಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಲು ಸಂಸ್ಥೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ವ್ಯವಸ್ಥಾಪಕ ಪ್ರಸಾದ್ ಬಿ.
(9880715838) ಆಶಿಕ್ (9449595085) ಇವರನ್ನು ಸಂಪರ್ಕಿಸಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!