Ad Widget

ಐವರ್ನಾಡು: ಬಿಜೆಪಿ ಸದ್ಭಾವನಾ ಯಾತ್ರೆಯ ಪೂರ್ವಭಾವಿ ಸಭೆ

ಬಿಜೆಪಿಯ ಸದ್ಬಾವನ ಯಾತ್ರೆಯು ಚುನಾವಣಾ ಪೂರ್ವ ತಯಾರಿಗಾಗಿ ನಡೆಯುತ್ತಿದ್ದು, ಇದರ ಬಗ್ಗೆ ಮಾ.4ರಂದು ಐವರ್ನಾಡಿನಲ್ಲಿ ಪೂರ್ವಭಾವಿ ಸಭೆ ನಡೆಯಿತು. ಬಿಜೆಪಿ ಮುಂದಾಳು ಎಸ್.ಎನ್. ಮನ್ಮಥರ ನೇತೃತ್ವದಲ್ಲಿ ಬಾಂಜಿಕೋಡಿ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಮಹಾಬಲ ಗುಂಪಕಲ್ಲು ಬಿಜೆಪಿ ಸೇರ್ಪಡೆಗೊಂಡರು.ಇವರಿಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.ಸಭೆಯಲ್ಲಿ...

ಮಾ.18: ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ದಶ ಸಂಭ್ರಮ

ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಕಳೆದ ಹತ್ತು ವರ್ಷಗಳ ಪ್ರಾರಂಭಗೊಂಡ ಜನನಿ ಸಂಘ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಈ ಸಂಘಕ್ಕೆ ಹತ್ತು ವರುಷ ತುಂಬಿದ್ದು, ಇದರ ಅಂಗವಾಗಿ ಮಾ.12 ರಂದು ಕ್ರಿಕೆಟ್ ಪಂದ್ಯಾಟ ಹಾಗೂ ಮಾ.18 ರಂದು ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ 'ಗುಂಡ್ಯ ಟ್ರೋಫಿ 2023' ನಡೆಯಲಿದೆ ಎಂದು...
Ad Widget

ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ

ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ ಮುಂದಿನ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿರುವುದರಿಂದ ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಕಡಬ ಗೃಹರಕ್ಷಕ ದಳಕ್ಕೆ ದಿನಾಂಕ 05-03-2023 ರಂದು ಭೇಟಿ ನೀಡಿದರು....

ಕಲ್ಲಪಣೆ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಡಿಯಾಲ ಗ್ರಾಮದ ಕಲ್ಲಪಣೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಮಾ.16ರಿಂದ ಮಾ.17 ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಇಂದು (ಮಾ.05ರಂದು) ಜರುಗಿತು. ಈ ಸಂದರ್ಭ ಕಲ್ಲಪಣೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಜೀರ್ಣೋದ್ದಾರ ಸಮಿತಿ...

ಕುಲ್ಕುಂದ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನ

ಕುಲ್ಕುಂದ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಂದು ಶ್ರೀ ಕೊರತಿಯಮ್ಮ ದೈವದ 8ನೇ ವರ್ಷದ ನೇಮೋತ್ಸವ ಹಾಗೂ ಮಾ.03 ರಿಂದ 04 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 54ನೇ ವರ್ಷದ ಒತ್ತೆಕೋಲವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮಾ.02 ರಂದು ಗಣಪತಿ ಹೋಮ,...

ಸುಳ್ಯ : ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ. ರಮೇಶ್

ಸುಳ್ಯ : ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ. ರಮೇಶ್ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ. ರಮೇಶ್ ಎಂಬವರು ನೇಮಕಗೊಂಡಿದ್ದಾರೆ. ಚಾಮರಾಜನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಉಪನ್ಯಾಸಕರಾಗಿದ್ದ ಬಿ.ಇ. ರಮೇಶ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಯಾಗಿದ್ದು, ಅವರು ಸುಳ್ಯಕ್ಕೆ ಬರಲಿದ್ದಾರೆ ಎಂದು ತಿಳಿದು ಬಂದಿದೆ. ಪಿರಿಯಾಪಟ್ಟಣ ತಾಲೂಕು ದೊಡ್ಡ ಬೆಳಾಲಿನವರು. ಸುಳ್ಯ ಕ್ಷೇತ್ರ...

ನಿರಂಜನ ಆಚಾರ್ಯ ಕಡ್ಲಾರು ಸಾಹಿತ್ಯದಲ್ಲಿ ಮೂಡಿಬಂದ ವಿಶ್ವಕರ್ಮನೆ ನಮೋ ನಮೋ ಭಕ್ತಿಗೀತೆ ಬಿಡುಗಡೆ

ಉಡುಪಿಯ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿಯಲ್ಲಿ 'ವಿಶ್ವಕರ್ಮನೆ ನಮೋ ನಮೋ' ಎಂಬ ಕನ್ನಡ ಭಕ್ತಿಗೀತೆಯು ಬಿಡುಗಡೆಗೊಂಡಿತು.ಮಾ. 2ರಂದು ಈ ಭಕ್ತಿಗೀತೆಯನ್ನು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅಷ್ಟೋತ್ತರ ಶತ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಯವರು ಅಮೃತ ಹಸ್ತದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿಶ್ವೇಶ್ವರ ಪುರೋಹಿತ...

ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗೆ ವಾರದ ಗಡುವು – ನುಡಿದಂತೆ ನಡೆಯದಿದ್ದರೇ ನೋಟ ಅಭಿಯಾನಕ್ಕೆ ನಿರ್ಧರಿಸಿದ ಹಿತರಕ್ಷಣಾ ವೇದಿಕೆ

ಅರಂತೋಡು ಅಡ್ತಲೆ ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಸತತ ಹೋರಾಟ ಮಾಡುತ್ತಾ ಬಂದಿದ್ದು ಜನಪ್ರತಿನಿಧಿಗಳ ಭರವಸೆ ಸಂಪೂರ್ಣ ಈಡೇರದಿದ್ದರೇ ಮತ್ತೊಮ್ಮೆ ಹೋರಾಟ ನಡೆಸುತ್ತೇವೆ ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಅರಂತೋಡಿನಿಂದ ಆರಂಭಗೊಂಡು ಕಾಮಗಾರಿ ಮುಗಿದಿದೆ. ಇನ್ನೂ...

ಪಂಜ ನಾಡ ಕಛೇರಿ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ

ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ, ಸುಳ್ಯ ತಾಲೂಕು,ಪಂಜ ಹೋಬಳಿ ಪಂಜ ನಾಡ ಕಚೇರಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.4.ರಂದು ನಡೆಯಿತು.ಕರ್ನಾಟಕ ಸರಕಾರದ ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಎಸ್ ಅಂಗಾರ ರವರು ಉದ್ಘಾಟಿಸಿ ಮಾತನಾಡಿ “ಗ್ರಾಮೀಣ ಪ್ರದೇಶದಿಂದ ರಾಷ್ಟ್ರ ವ್ಯಾಪ್ತಿ ಜನರಿಗೆ ಅತ್ಯವಶ್ಯವಾದ ಯೋಜನೆಗಳು...

ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಸಮಸ್ತ ಪಬ್ಲಿಕ್ ಪರೀಕ್ಷೆ ಪ್ರಾರಂಭ

ಬೆಳ್ಳಾರೆ: 'ಸಮಸ್ತ' ಇಸ್ಲಾಮಿಕ್ ವಿದ್ಯಾಬ್ಯಾಸ ಮಂಡಳಿ ಸುಮಾರು ಹತ್ತು ಸಾವಿರ ಮದ್ರಸಾಗಳಲ್ಲಿ 5,7,10,12 ತರಗತಿಗಳಿಗೆ ಏಕ ಕಾಲದಲ್ಲಿ ನಡೆಸುವ ಪಬ್ಲಿಕ್ ಪರೀಕ್ಷೆಯು ಇಂದಿನಿಂದ ಮೂರು ದಿನಗಳಲ್ಲಿ ನಡೆಯಲಿರುವುದು. ಬೆಳ್ಳಾರೆ,ಕಲ್ಲೋಣಿ, ಪೆರುವಾಜೆ,ನೆಟ್ಟಾರು, ಐವರ್ನಾಡು ಮದ್ರಸಗಳ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸಾ ಪರೀಕ್ಷಾ ಸೆಂಟರ್ ನಲ್ಲಿ ಪರೀಕ್ಷೆ ಪ್ರಾರಂಭಗೊಂಡಿತು.ಸಮಸ್ತ ವಿದ್ಯಾಬ್ಯಾಸ ಮಂಡಳಿಯ ನೇರ ಮೇಲ್ನೋಟದಲ್ಲಿ ನಡೆಯುವ ಪರೀಕ್ಷೆಯ...
Loading posts...

All posts loaded

No more posts

error: Content is protected !!