Ad Widget

ಸುಳ್ಯದ ಜನಪ್ರಿಯ ವೈದ್ಯ ಡಾ. ಹಿಮಕರ ಕೆ.ಎಸ್. ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ

ಜನಪ್ರಿಯ ವೈದ್ಯರಾಗಿ ಗುರುತಿಸಿಕೊಂಡಿದ್ದ ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಹಿಮಕರ ಕೆ.ಎಸ್.ಅವರು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ತಮ್ಮ 30 ವರ್ಷಗಳ ಸರಕಾರಿ ಸೇವೆಯಿಂದ ಅವರು ಮಾ.31ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇನ್ನೂ 6 ವರ್ಷಗಳ ಸೇವಾ ಅವಧಿಉಳಿದಿರುವಂತೆಯೇ ಅವರು ಸ್ವಯಂ ನಿವೃತ್ತಿ‌ ಪಡೆದಿದ್ದಾರೆ. 1993ರಲ್ಲಿ ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದ್ದ ಡಾ.ಹಿಮಕರ...

ನಾಲ್ಕೂರು : ಡಿಸಿ ಗ್ರಾಮವಾಸ್ತವ್ಯ ಪರಿಣಾಮ – ಸರ್ಕಾರಿ ಜಾಗ ಅತಿಕ್ರಮಣ ತೆರವು

ನಾಲ್ಕೂರು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಪ್ರಸ್ತಾಪಗೊಂಡು ಮರುವಶಕ್ಕೆ ಆದೇಶ ನೀಡಿದ್ದ ಸರ್ಕಾರಿ ಜಾಗದ ಅತಿಕ್ರಮಣ ಶುಕ್ರವಾರ ಕಂದಾಯ ಇಲಾಖೆ ತೆರವು ಮಾಡಿದೆ. ನಾಲ್ಕೂರಿನ ಉಜಿರಡ್ಕ ಎಂಬಲ್ಲಿ ಸುಮಾರು 4ಎಕ್ರೆ ಸರ್ಕಾರಿ ಜಾಗವನ್ನು ಮನುದೇವ ಪರಮಲೆ ಎಂಬವರು ಅತಿಕ್ರಮಣ ಮಾಡಿ ಅಡಿಕೆ ಕೃಷಿ ಮಾಡಿದ್ದರು. ಈ ಬಗ್ಗೆ ನಾಲ್ಕೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಗ್ರಾಮ...
Ad Widget

ಗುತ್ತಿಗಾರು : ಜಗದೀಶ್ – ಪ್ರತಿಮಾ ಪ್ರೇಮ ವಿವಾಹ

ಗುತ್ತಿಗಾರಿನ ಬಾಕಿಲದ ಆನಂದ ರವರ ಪುತ್ರ ಗುತ್ತಿಗಾರು ಗ್ರಾ.ಪಂ.ಸದಸ್ಯ ಜಗದೀಶ್ ಮತ್ತು ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ಅಚ್ರಪ್ಪಾಡಿ ದಿ. ಜನಾರ್ಧನ ಅವರ ಪುತ್ರಿ ಪ್ರತಿಮಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತಿದ್ದರೆನ್ನಲಾಗಿದೆ. ಆದರೆ ಮದುವೆಗೆ ಹುಡುಗಿ ಕಡೆಯವರ ವಿರೋಧವಿತ್ತೆನ್ನಲಾಗಿದೆ. ಮನೆಯವರು ಬೇರೆ ಹುಡುಗನ ನೋಡುತ್ತಿದ್ದಾರೆಂದು ಮನೆ ಬಿಟ್ಟು ವರನೊಂದಿಗೆ ತೆರಳಿ ಮದುವೆಯಾಗಿ, ವಿವಾಹ ನೋಂದಣಿ ಮಾಡಿರುವುದಾಗಿ...

ಅಭ್ಯರ್ಥಿ ಆಯ್ಕೆಗೆ ವಿನೂತನ ಕ್ರಮಕ್ಕೆ ಮುಂದಾದ ಬಿಜೆಪಿ – ಸುಳ್ಯದ ಅಭ್ಯರ್ಥಿ ಆಯ್ಕೆ128 ಜನರ ಕೈಯಲ್ಲಿ

ವಿಧಾನಸಭಾ ಚುನಾವಣೆ ದಿನ ನಿಗದಿಯಾದ ಬೆನ್ನಲ್ಲೇ ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಜೋರಾಗಿಯೇ ಇದೆ. ಬಿಜೆಪಿ ಈ ಬಾರಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಕ್ಷೇತ್ರದ ಆಯ್ದ ಜನಪ್ರತಿನಿಧಿಗಳ ಮೂಲಕ ಮತದಾನದ ಪ್ರಕ್ರಿಯೆ ಮುಖಾಂತರ ಆಯ್ಕೆ ಮಾಡಿ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿಸಲು ಪ್ರಯತ್ನ ನಡೆಸಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 128 ಮಂದಿ ಮತ ಚಲಾಯಿಸಲು...

ಕಲ್ಲುಗುಂಡಿ : ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ

ಕಲ್ಲುಗುಂಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಮಾ.28 ಮತ್ತು 29 ರಂದು ಶ್ರೀ ಮಾಹವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು. ಮಾ.3೦ ರಂದು ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಕೆ.ಆರ್.ಜಗದೀಶ್ ರೈ, ಮೊಕ್ತೇಸರರಾದ ಕೆ.ಕರುಣಾಕರ, ಕಾರ್ಯದರ್ಶಿ ಮಂಜುನಾಥ ಕೆ.ವಿ., ಕೋಶಾಧಿಕಾರಿ ಬಿ.ಆರ್.ಪದ್ಮಯ್ಯ, ಪ್ರಧಾನ ಪೂಜಾರಿ ನಾರಾಯಣ...

ಅರಂತೋಡು : ನಿಸರ್ಗ ಪೈಂಟ್ಸ್ ಮತ್ತು ಹಾರ್ಡ್‌ವೇರ್ ಶುಭಾರಂಭ

ಅರಂತೋಡಿನ ಗಿರಿಜಾ ಕಾಂಪ್ಲೆಕ್ಸ್‌ನಲ್ಲಿ ಮನಮೋಹನ್‌ರ ಮಾಲಕತ್ವದ ನಿಸರ್ಗ ಪೈಂಟ್ಸ್ ಮತ್ತು ಹಾರ್ಡ್‌ವೇರ್ ಮಾ.೩೧ ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ ಹರಿಣಿ ದೇರಾಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿ.ಬಿ.ಪ್ರಭಾಕರ ರೈ, ಗ್ರಾ.ಪಂ. ಸದಸ್ಯರುಗಳು, ಸಿಬ್ಬಂದಿಗಳು ಮತ್ತು ಮನಮೋಹನ್‌ರವರ ಬಂಧು ಮಿತ್ರರು ಉಪಸ್ಥಿತಿದ್ದರು. ಗಣಪತಿ ಹವನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮನಮೋಹನರು ಸ್ವಾಗತಿಸಿ, ವಂದಿಸಿದರು. ಇಲ್ಲಿ ಪೈಂಟ್ ಮಿಕ್ಸಿಂಗ್...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಮಾರ್ಚ್ 28 ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಕೆ.ವಿ.ಜಿ. ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳ ದಿಶೆಯಲ್ಲಿ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆಯ ಮಹತ್ವ ಬಹಳ ಹೆಚ್ಚಿನದ್ದು. ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರದ ಉದ್ಯೋಗಾವಕಾಶ ಹೆಚ್ಚು...

ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳು – 1848 ವಿದ್ಯಾರ್ಥಿಗಳು

2023ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.31ರಿಂದ ಆರಂಭಗೊಳ್ಳಲಿದೆ. ಈ ಬಾರಿ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 1848 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಸುಳ್ಯ ತಾಲೂಕಿನಲ್ಲಿ 36 ಪ್ರೌಢಶಾಲೆ ಗಳಿವೆ. ಇಲ್ಲಿಂದ ಒಟ್ಟು 1848 ವಿದ್ಯಾರ್ಥಿ ಗಳು ಈ ಬಾರೀ ಪರೀಕ್ಷೆ ಬರೆಯಲಿದ್ದಾರೆ. ಪುನಾರಾವರ್ತಿತ ವಿದ್ಯಾರ್ಥಿಗಳು 55 ಮಂದಿ ನೋಂದಾವಣೆ ಮಾಡಿದ್ದಾರೆ.ಆದರೆ ಖಾಸಗಿಯಾಗಿ 50 ಮಂದಿ...

ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರಾ ಸಂಭ್ರಮ, ನಾಳೆ ಶ್ರೀ ಭಗವತಿ ದೊಡ್ಡಮುಡಿ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.10 ರಿಂದ ಜಾತ್ರಾ ಸಂಭ್ರಮ ಪ್ರಾರಂಭಗೊಂಡಿದ್ದು, ಏ.1೦ ರವರೆಗೆ ನಡೆಯಲಿದೆ. ಮಾ.26ರಂದು ಬೆಳಿಗ್ಗೆ ಕಲಾಶೋತ್ಸವ, ಮಹಾಪೂಜೆ ನಡೆದು, ಮಹಾಸಮಾರಾಧನೆ ನಡೆಯಿತು. ಸಂಜೆ ಶ್ರೀ ಉಳ್ಳಾಕುಲು ಮಾಡದ ಅರಮನೆಯಿಂದ ಭಂಡಾರ ತಂದು, ಮುಖ್ಯ ತೋರಣ ಏರಿಸುವುದು, ಶಿಸ್ತು ಅಳೆಯುವುದು ನಡೆಯಿತು. ರಾತ್ರಿ ಶ್ರೀ ದೇವರ ಭೂತ ಬಲಿ, ನೃತ್ಯ ಬಲಿ ಹಾಗೂ...

ವಳಲಂಬೆ : ಬರೆಗೆ ಗುದ್ದಿ ಕಾರು ಜಖಂ

ವಳಲಂಬೆ ಕಾಜಿಮಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬರೆಗೆ ಗುದ್ದಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಸುಳ್ಯದ ಜ್ಯೋತಿಷ್ಯ ಉದಯ ನಾಯರ್ ಅವರು ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ.
Loading posts...

All posts loaded

No more posts

error: Content is protected !!