- Thursday
- November 21st, 2024
ಸುಳ್ಯ ತಾಲೂಕಿನ ಅರಂತೋಡು ಮುಖ್ಯ ರಸ್ತೆಯಲ್ಲಿರುವ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವನಿತಾ ಫ್ಯಾನ್ಸಿ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವರಿಸಲ್ಪಟ್ಟು ಅಂಗಡಿಯಲ್ಲಿದ್ದ ಬೆಲೆ ಬಾಳುವ ಫ್ಯಾನ್ಸಿ ಐಟಂಗಳು ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ. ಅಪಾರ ನಷ್ಟ ಸಂಭವಿಸಿದ್ದು, ಬೆಂಕಿಯನ್ನು ಸಾರ್ವಜನಿಕರ ಸಹಾಯದಿಂದ ನಂದಿಸಲಾಯಿತು.
ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಪ್ತ ಪುತ್ತೂರಿನ ಜಿ.ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಹೊಸ ಅಭ್ಯರ್ಥಿ ಘೋಷಿಸಲಾಗಿದೆ.ಕಳೆದ ನಾಲ್ಕು ಬಾರಿ ಸುಳ್ಯದಿಂದ ಸ್ಪರ್ಧಿಸಿದ್ದ...
ಕಳಂಜ ಗ್ರಾಮದ ಮಣಿಮಜಲು ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ಗುಡ್ಡಕ್ಕೆ ಬೆಂಕಿ ವ್ಯಾಪಿಸುವ ಸಂಭವ ಎದುರಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಂಝಾನ್ ತಿಂಗಳ ಸಾಂತ್ವನದ ಭಾಗವಾಗಿ ಗಾಂಧಿನಗರ ಯುನಿಟ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಒಂದಾದ 20 ನಮಾಝ್ ಖಮೀಸ್ ವಿತರಣೆಯನ್ನು ದಿನಾಂಕ 24-03-2023 ನೇ ಶುಕ್ರವಾರ ಅಸರ್ ನಮಾಝಿನ ಬಳಿಕ ಸುನ್ನೀ ಸೆಂಟರ್ ನಲ್ಲಿ ನಡೆಯಿತು,ಯುನಿಟ್ ಉಪಾಧ್ಯಕ್ಷರಾದ ಸಯ್ಯಿದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ ರವರ ದುವಾದೊಂದಿಗೆ ಆರಂಬಿಸಿ , ಸಯ್ಯಿದ್ ಝೈನುಲ್ ಆಬಿದ್ ತಂಙಳ್...
ಗೂನಡ್ಕ ಸಮೀಪ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 'ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ' ಎಂಬ ಕಲ್ಪನೆಯೊಂದಿಗೆ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಮಾ. 26 ರಂದು ಸಂಜೆ 5 ಗಂಟೆಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಮೈದಾನದಲ್ಲಿ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ...
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಸುಳ್ಯಅರಂತೋಡು ಗ್ರಾಮ ಪಂಚಾಯತ್ (ಅಮೃತ ಗ್ರಾಮ ಪಂಚಾಯತ್ ಹಾಗೂ ಗಾಂಧಿ ಗ್ರಾಮ ಪುರಸ್ಕೃತ) ಸಹಯೋಗದಲ್ಲಿ ಅರಂತೋಡು ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಅಮೃತ ಉದ್ಯಾನವನ, ಅಮೃತ ಮುಕ್ತಿ ಧಾಮ ಹಾಗೂ ಅಮೃತ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು...
ಕನಕಮಜಲು - ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರು ಉಪಸ್ಥಿತರಿದ್ದರು.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಆಯೋಜನೆ ಮಾಡಿದ ಸಹಾಯ ನಿಧಿ ಕೂಪನ್ ವಿಜೇತರನ್ನು ಪುಟಾಣಿ ಅಧಿಕ್ಷ ಕುಲ್ಲಚೆಟ್ಟಿ ಮತ್ತು ಪುಟಾಣಿ ಮಯೂರ್ ಗುಡ್ಡೆಮನೆ ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ರಾಷ್ಟ್ರಿಯ ಕ್ರೀಡಾಪಟು ಗುತ್ತಿಗಾರ್ ಗ್ರಾ. ಪಂಚಾಯತ್ ಸದಸ್ಯ, ಮಾಯಿಲಪ್ಪ ಕೊಂಬೆಟ್ಟು, ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಭಾರತೀಯ ಭೂ ಸೇನಾ ಸೈನಿಕ...
ತಳೂರು ಮುಖ್ಯರಸ್ತೆಯಿಂದ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ಮಾಡದವರೆಗಿನ ರಸ್ತೆ ಸುಮಾರು 30 ಲಕ್ಷದಲ್ಲಿ ಕಾಂಕ್ರಿಟೀಕರಣಗೊಂಡಿದ್ದು ಇಂದು ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಂದರು,ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ,...
Loading posts...
All posts loaded
No more posts