
ಬೆಳ್ಳಾರೆ: ‘ಸಮಸ್ತ’ ಇಸ್ಲಾಮಿಕ್ ವಿದ್ಯಾಬ್ಯಾಸ ಮಂಡಳಿ ಸುಮಾರು ಹತ್ತು ಸಾವಿರ ಮದ್ರಸಾಗಳಲ್ಲಿ 5,7,10,12 ತರಗತಿಗಳಿಗೆ ಏಕ ಕಾಲದಲ್ಲಿ ನಡೆಸುವ ಪಬ್ಲಿಕ್ ಪರೀಕ್ಷೆಯು ಇಂದಿನಿಂದ ಮೂರು ದಿನಗಳಲ್ಲಿ ನಡೆಯಲಿರುವುದು. ಬೆಳ್ಳಾರೆ,ಕಲ್ಲೋಣಿ, ಪೆರುವಾಜೆ,ನೆಟ್ಟಾರು, ಐವರ್ನಾಡು ಮದ್ರಸಗಳ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸಾ ಪರೀಕ್ಷಾ ಸೆಂಟರ್ ನಲ್ಲಿ ಪರೀಕ್ಷೆ ಪ್ರಾರಂಭಗೊಂಡಿತು.
ಸಮಸ್ತ ವಿದ್ಯಾಬ್ಯಾಸ ಮಂಡಳಿಯ ನೇರ ಮೇಲ್ನೋಟದಲ್ಲಿ ನಡೆಯುವ ಪರೀಕ್ಷೆಯ ಬೆಳ್ಳಾರೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿ ಬಹು. ನಾಸಿರ್ ಫೈಝಿ ಹಾಗೂ ಬಹು.ಅಬ್ದುಲ್ಲ ಸಅದಿ ಆಗಮಿಸಿದ್ದಾರೆ,