Ad Widget

ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ : ಸುಳ್ಯ – ಕೊಡಿಯಾಲಬೈಲ್ ರಸ್ತೆಯ ಬಗ್ಗೆ ಅಳಲು ತೋಡಿಕೊಂಡ ಜನತೆ

ಸುಳ್ಯ – ಕೊಡಿಯಾಲಬೈಲ್ ರಸ್ತೆಯು ಕಂಬಳದ ಗದ್ದೆಯಂತಾಗಿದ್ದು, ಸಂಚಾರ ದುಸ್ತರವಾಗಿದೆ. ಸೇತುವೆಯ ಮೇಲೆ ಮಳೆನೀರು ನಿಂತು ಹೊಳೆಯಂತಾಗಿದೆ. ಕೆಲ ವರ್ಷಗಳಿಂದ ಈ ರಸ್ತೆ ಸಂಪೂರ್ಣ ದುರಸ್ತಿ ಕಾಣದೇ ಕಂಬಳದ ಗದ್ದೆಯಂತಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಬೋರ್ಡ್ ಹಾಕಿ “ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಬರಬೇಕಾಗಿದ್ದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಇದೆ.

ದಯವಿಟ್ಟು ನಮಗೆ ಒಂದು ಓಟು ಕೊಡಿ ಇನ್ನೊಮ್ಮೆ ಕೇಳುವ ಮೊದಲು ಜನಪ್ರತಿನಿಧಿಗಳು ನಮ್ಮ ಬೇಡಿಕೆ ಈಡೇರಿಸಲಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!