Ad Widget

ದೈವಾರಾಧನೆಯಲ್ಲಿ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆ ಸಾಕಾರ : ಎಡನೀರು ಶ್ರೀ – ಕುಕ್ಕುಜಡ್ಕ ವಿಷ್ಣುಮೂರ್ತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶಾಭಿಷೇಕ

ಕುಕ್ಕುಜಡ್ಕ: ಎಲ್ಲರೂ ಒಟ್ಟಾಗಿ ಸೇರಿ ಮಾಡುವ ದೈವಾರಾಧನೆಯಲ್ಲಿ ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಇದರಿಂದ ಹಿಂದೂ ಧರ್ಮದ ಉನ್ನತಿ ಸಾಧ್ಯ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮದ ಅಂಗವಾಗಿ ಎ.23 ರಂದು ನಡೆದ
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ದೈವಾರಾಧನೆಯಲ್ಲಿ ದೈವವು ಭಕ್ತನಿಗೆ ನೇರವಾಗಿ ಅಭಯ ನೀಡಿ ಹರಸುತ್ತದೆ.ದೈವಸ್ಥಾನದಲ್ಲಿ ಎಲ್ಲಾ ಭಕ್ತರು ಜಾತಿ, ವರ್ಗ ಭೇದವಿಲ್ಲದೆ ಎಲ್ಲರೂ ಒಟ್ಟು ಸೇರಿ ಆರಾಧನೆ ಮಾಡುವುದರಿಂದ ದೈವಸ್ಥಾನಗಳು ಭಕ್ತಿ, ಆರಾಧನೆಯ ಶ್ರದ್ಧಾ ಕೇಂದ್ರಗಳು ಎಂದು ಹೇಳಿದರು. ಸುಳ್ಯ ಭಾಗಕ್ಕೂ ಎಡನೀರು ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಅವರು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ‌ ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ‘ನಮ್ಮ ಧರ್ಮ ಮತ್ತು ಸಂಸ್ಕೃತಿ ಯ ಆರಾಧನೆಯಿಂದ ಮಾತ್ರ ನಮ್ಮ ರಕ್ಷಣೆ ಸಾಧ್ಯ ಎಂದು ಹೇಳಿದರು. ಶಕ್ತಿಯ ಅಧಿ ದೇವತೆಯಾದ ವಿಷ್ಣುಮೂರ್ತಿಯ ಅನುಗ್ರಹ ಮತ್ತು ಸಂಘಟನೆಯ ಶಕ್ತಿಯಿಂದ‌ ನಮ್ಮ ಧಾರ್ಮಿಕ ಮತ್ತು ಶಕ್ತಿಯ ನೆಲೆಗಳನ್ನು ಉಳಿಸಲು ಸಾಧ್ಯ. ಧರ್ಮ ನಿಷ್ಠೆ ಮತ್ತು ಕರ್ಮ ನಿಷ್ಠೆ ಅತೀ ಅಗತ್ಯ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ ಬಾಯಾರು ಮಾತನಾಡಿ ‘ಉತ್ಸವಗಳಿಂದ ನಮ್ಮಲ್ಲಿ ಹೊಸತನ, ಚೈತನ್ಯವನ್ನು ತುಂಬುತ್ತದೆ. ದೈವಾರಾಧನೆಯಿಂದ ಸರ್ವರಲ್ಲಿ
ಸನ್ಮಂಗಳವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು. ವಾಸ್ತು ತಜ್ಞ ಕೃಷ್ಣ ಪ್ರಸಾದ್ ಮುನಿಯಂಗಳ, ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯಾ ಮೇಲ್ತೋಟ ಮುಖ್ಯ ಅತಿಥಿಯಾಗಿದ್ದರು. ಕ್ಷೇತ್ರದ ತಂತ್ರಿ ನೀಲೇಶ್ಚರ ಪದ್ಮನಾಭ ತಂತ್ರಿ, ವಾಸ್ತು ತಜ್ಞರಾದ ಪ್ರಸಾದ್ ಮುನಿಯಂಗಳ, ಪ್ರಸನ್ನ ಮುಳಿಯಾಲ ಅಡ್ಯನಡ್ಕ, ಕಾಷ್ಠ ಶಿಲ್ಪಿ ಜನಾರ್ಧನ ಆಚಾರ್ಯ ಕುಂಟಿಕಾನ, ಕೆಂಪುಕಲ್ಲಿನ ಮೇಸ್ತ್ರಿ ವಿಶ್ವನಾಥ ಮೇಸ್ತ್ರಿ ನರ್ಕಳ, ಮರದ ಕೆತ್ತನೆ ನಡೆಸಿದ ಆನಂದ ಆಚಾರ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ವ್ಯವಸ್ಥಾಪಕ ಯಂ.ಜಿ.ಸತ್ಯನಾರಾಯಣ ಸ್ವಾಗತಿಸಿ, ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಕೆ.ರಾಘವೇಂದ್ರ ವಂದಿಸಿದರು. ದಯಾನಂದ ಪತ್ತುಕುಂಜ ಮತ್ತು ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!