Ad Widget

ರಂಗಮನೆ ಚಿಣ್ಣರಮೇಳಕ್ಕೆ ಸಂಭ್ರಮದ ತೆರೆ -ವೇದಿಕೆಯೇರಿದ 300 ಮಕ್ಕಳಿಂದ ಸಾಂಸ್ಕೃತಿಕ ವೈಭವ

    ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಚಿಣ್ಣರಮೇಳ 2022  ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರವು ಮಕ್ಕಳ ಸಾಂಸ್ಕೃತಿಕ ಸಂಭ್ರಮದೊಂದಿಗೆ ತೆರೆ ಕಂಡಿತು.


  ಸಮಾರೋಪ ಭಾಷಣ ಮಾಡಿದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ.ವಿ.ಸೂರ್ಯನಾರಾಯಣ ಇವರು ಮಾತಾನಾಡಿ” ಮಕ್ಕಳ ಶೈಕ್ಷಣಿಕ, ಮಾನಸಿಕ ಮತ್ತು ಬೌದ್ಧಿಕ  ಬೆಳವಣಿಗೆಯಲ್ಲಿ ಇಂತಹ ಬೇಸಿಗೆ ಶಿಬಿರಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ. ಮಕ್ಕಳು ಶಾಲೆಯಲ್ಲಿ ಸಿಗದೇ ಇರುವ ಮುಕ್ತ ವಾತಾವರಣವನ್ನು ಬಹಳ ಇಷ್ಟಪಡ್ತಾರೆ. ಅಲ್ಲದೆ ಮಕ್ಕಳ ಬೇಸಿಗೆ ಶಿಬಿರಗಳನ್ನು ನಡೆಸೋದು ಅಷ್ಟು ಸುಲಭವೂ ಇಲ್ಲ..ಇದಕ್ಕೆ ಮಕ್ಕಳ ಮನಸ್ಸನ್ನು ಅರಿತ,ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅನುಭವೀ ಸಂಪನ್ಮೂಲ ವ್ಯಕ್ತಿಗಳು ಬೇಕು.
ರಂಗಮನೆಯ ಈ ಶಿಬಿರ ಉಳಿದೆಲ್ಲ ಕಡೆಗಳಿಂದಲೂ ಭಿನ್ನವಾಗಿದೆ.” ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಾದೂಗಾರ ಕುದ್ರೋಳಿ ಗಣೇಶ್ ” ರಂಗಮನೆಯ ಸಮಯ ಪಾಲನೆ,ಗುಣಮಟ್ಟ ,ಇಲ್ಲಿ ತೋರುವ ಪ್ರೀತಿ,ಕಾಳಜಿ ಬೇರೆಲ್ಲೂ ನಾನು ಕಂಡಿಲ್ಲ. ಶಿಬಿರದಿಂದಾಗಿ ಮಕ್ಕಳಲ್ಲಿ ಆಗುವ ಅಮೂಲ್ಯ ಬದಾಲಾವಣೆ ಯಾವ ರೀತಿಯದ್ದು ಎಂಬುದನ್ನು ನಾನು ನನ್ನ ಮಗನಲ್ಲೇ ಕಂಡಿದ್ದೇನೆ” ಎಂದರು.


   ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ್ ” ಮಕ್ಕಳಲ್ಲಿ ಭಾಷಾ ಮತ್ತು ಸಾಂಸ್ಕೃತಿಕ ಪ್ರೇಮವನ್ನು ಬೆಳೆಸಲು ಶ್ರಮಿಸುತ್ತಿರು ರಂಗಮನೆಯ ಶ್ರಮ ನಿಜಕ್ಕೂ ಸಾರ್ಥಕ. ಮಾತಾಡದ ಮಕ್ಕಳು ಮಾತಾಡುವಂತೆ,ಓಡಾಡದ ಮಕ್ಕಳು ಓಡಾಡುವಂತೆ,ಹಾಡದವರು ಹಾಡುವಂತೆ,ಕುಣಿಯದವರು ಕುಣಿವಂತೆ,ಮೌನವಾಗಿದ್ದವರು ಪ್ರಶ್ನೆ ಕೇಳುವಂತೆ ಮಾಡುವ,ಅಧೈರ್ಯದವರಿಗೆ ಆತ್ಮವಿಶ್ವಾಸ ತುಂಬಿಸುವ ಕೆಲಸವು ರಂಗಮನೆಯ ಈ ಶಿಬಿರದಲ್ಲಾಗಿದೆ” ಎಂದು ನುಡಿದರು
    ಚಿತ್ರಕಲಾವಿದ ತಾರಾನಾಥ ಕೈರಂಗಳ, ರಂಗನಿರ್ದೇಶಕ ಶಿವಗಿರಿ ಕಲ್ಲಡ್ಕ ,ಶ್ರೀಮತಿ ಲತಾ ಮಧುಸೂದನ, ರವೀಶ್ ಪಡ್ಡಂಬೈಲು ಉಪಸ್ಥಿತರಿದ್ದರು.
ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರ ಯಶಸ್ಸಿನ ಹಿಂದೆ ಇರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಶ್ರೀಹರಿ ಪೈಂದೋಡಿ ವಂದಿಸಿದರು.
ಮುಖ್ಯ ಶಿಕ್ಷಕರಾದ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳ ಸಾಂಸ್ಕೃತಿಕ ವೈಭವ

ಸಭಾ ಕಾರ್ಯಕ್ರಮಕ್ಕಿಂತ ಮೊದಲು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಸೊಗಸಾದ ಐದು ಕಿರುನಾಟಕಗಳು ಹಾಗೂ ಎರಡು ಪುಟಾಣಿ ಗೀತ ನೃತ್ಯವು ಜರುಗಿತು. ಈ ನೆಪದಲ್ಲಿ ಶಿಬಿರದ 300 ಮಕ್ಕಳೂ ಒಮ್ಮೆಗೆ ರಂಗಮನೆಯ ವೇದಿಕೆಯನ್ನು ಏರುವಂತಹ ಅಪೂರ್ವ ಕ್ಷಣ ನಿರ್ಮಾಣವಾಯಿತು.
ಬಳಿಕ ನಡೆದ ಮಾ| ಮನುಜ ನೇಹಿಗ ಸುಳ್ಯ ಪ್ರದರ್ಶಿಸಿದ “ಮಣಿಪುರಿ ಸ್ಟಿಕ್ ಡ್ಯಾನ್ಸ್ “ನೃತ್ಯವು ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ 8 ದಿನಗಳ ಕಾಲ ನಡೆದ ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕುದ್ರೋಳಿ ಗಣೇಶ್, ಸುನಿಲ್ ಮಿಶ್ರ ಬೆಂಗಳೂರು, ಭಾಸ್ಕರ ನೆಲ್ಯಾಡಿ, ತಾರಾನಾಥ ಕೈರಂಗಳ, ಚಂದ್ರಾಡ್ಕರ್, ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ನಾದ ಮಣಿ ನಾಲ್ಕೂರು, ಸುಮನಾ ಪ್ರಸಾದ್ ಮೂಡುಬಿದ್ರೆ, ಶಿವಗಿರಿ ಕಲ್ಲಡ್ಕ, ಕೃಷ್ಣಪ್ಪ ಬಂಬಿಲ, ನಳಿನಾಕ್ಷಿ ಕಲ್ಮಡ್ಕ, ಮಮತಾ ರವೀಶ್, ವಸಂತಲಕ್ಷ್ಮೀ ಪುತ್ತೂರು,ದಾಮೋದರ ನೇರಳ,ಚಂದ್ರಶೇಖರ ಮೈಸೂರು, ಕೆ.ರಾಜೇಂದ್ರ ಭಟ್ ಕಾರ್ಕಳ, ಡಾ.ಪ್ರಭಾಕರ ಶಿಶಿಲ, ಡಾ.ಶ್ರೀಶಕುಮಾರ್ ಪುತ್ತೂರು, ಸುಬ್ರಹ್ಮಣ್ಯ ಅತ್ಯಾಡಿ, ಅಚ್ಚುತ ಅಟ್ಲೂರು ಮುಂತಾದವರು ಭಾಗವಹಿಸಿದ್ದರು.
ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಒಟ್ಟು 306 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!