Ad Widget

ಟಾಟಾ ಐ.ಪಿ.ಎಲ್ 2022 ರ ಕ್ರ್ಯೂ ಮೆಂಬರ್ ಆಗಿ ಹರ್ಷಿತ್ ಪಡ್ರೆ ನೇಮಕ

ಮಾ.26 ರಿಂದ ಪ್ರಾರಂಭವಾಗಲಿರುವ ಟಾಟಾ ಐ.ಪಿ.ಎಲ್ ಸೀಸನ್ 15 ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದ್ದು, ಇದರ ಕ್ರ್ಯೂ ಮೆಂಬರ್ ಆಗಿ ಟಿ.ವಿ ನಿರೂಪಕ ಹಾಗೂ ಪತ್ರಕರ್ತರಾದ ಹರ್ಷಿತ್ ಪಡ್ರೆ ಅವರು ಸ್ಟಾರ್ ಸ್ಪೋರ್ಟ್ಸ್ ಗೆ ನೇಮಕಗೊಂಡಿದ್ದಾರೆ.
ಈ ಬಾರಿಯ ಐ.ಪಿ.ಎಲ್ ನ ಎಲ್ಲಾ ಪಂದ್ಯಗಳು ಪುಣೆ ಹಾಗೂ ಮುಂಬೈ ನಲ್ಲಿ ನಡೆಯಲಿದ್ದು, ಹರ್ಷಿತ್ ಪಡ್ರೆ ಅವರು ಮುಂಬೈ ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ವಿಶ್ಲೇಷಣೆ, ಪ್ರಿ ಶೋ, ಮ್ಯಾಚ್ ಲೈವ್, ಪ್ಲೇಯಿಂಗ್ ಇಲೆವೆನ್, ಗೇಮ್ ಪ್ಲಾನ್, ಇನ್ ಸೈಡ್ ಆರ್.ಸಿ.ಬಿ, ಪ್ಯಾನ್ ಬಾಕ್ಸ್ ಹಾಗೂ ಪ್ರಿಡಿಕ್ಷನ್ ಗೆ ಸಂಬಂಧಿಸಿದಂತೆ ಇವರು ಕಾರ್ಯನಿರ್ವಹಿಸಲಿದ್ದಾರೆ.
ಇವರು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲುವಿನ ಗಣೇಶ್ ಪಡ್ರೆ ಹಾಗೂ ಶಾರದಾ ಪಡ್ರೆ ದಂಪತಿಗಳ ಪುತ್ರ.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!