ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಗಾಂಗೇಯ ಕ್ರಿಕೆಟರ್ಸ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ದಿ.ಕೃಷ್ಣಕುಮಾರ್ ರುದ್ರಪಾದ ಅವರ ಸ್ಮರಣಾರ್ಥವಾಗಿ ಮಾ.19 ಮತ್ತು ಮಾ.20 ರಂದು 2 ದಿನಗಳ ಕಾಲ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಪ್ರತಿಷ್ಠಿತ ಆಯ್ದ 20 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಗಾಂಗೇಯ ಟ್ರೋಫಿ 2022 ನಡೆಯಿತು.
ಗಾಂಗೇಯ ತಂಡದ ಹಿರಿಯ ಆಟಗಾರರಾದ ಕೆ.ಯಜ್ಞೇಶ್ ಆಚಾರ್ ಈ ಪಂದ್ಯಾಟವನ್ನು ಉದ್ಘಾಟಿಸಿ ಕ್ರಿಕೇಟ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದ್ದು, ಗ್ರಾಮೀಣರು ಆಡುವ ಅಂಡರ್ ಆರ್ಮ್ ಕ್ರಿಕೆಟ್ ಅನ್ನು ಕೂಡ ಪ್ರೋತ್ಸಾಹಿಸಬೇಕು ಎಂದರು. ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಗಾಂಗೇಯ ಕ್ರಿಕೆಟರ್ಸ್ ತಂಡ ನಡೆಸಿದ ಈ ಪಂದ್ಯಾಟ ಯುವಕರಲ್ಲಿ ಕ್ರಿಕೇಟ್ ಆಸಕ್ತಿಯನ್ನು ಉತ್ತೇಜಿಸಲು ಅವಕಾಶ ಒದಗಿಸಿದೆ ಎಂದರು. ಕೃಷ್ಣಕುಮಾರ್ ರುದ್ರಪಾದ ಅವರು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ವ್ಯಕ್ತಿ. ಬಡವರ ಬಗ್ಗೆ ಕಾಳಜಿ ಹೊಂದಿದ್ದ ಶ್ರೇಷ್ಠ ನಾಯಕತ್ವ ಗುಣ ಹೊಂದಿದ್ದ ಕೃಷ್ಣಕುಮಾರ್ ರುದ್ರಪಾದ ಅವರ ಸ್ಮರಣಾರ್ಥವಾಗಿ ನಡೆಸಿದ ಈ ಪಂದ್ಯಾಟ ಶ್ಲಾಘನೀಯ ಎಂದರು.
ಗಾಂಗೇಯ ಕ್ರಿಕೆಟರ್ಸ್ ನ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪ್ರೋ.ಕೆ.ಆರ್ ಶೆಟ್ಟಿಗಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಗಾಂಗೇಯದ ಮಾಜಿ ಕಫ್ತಾನ ವೇಣುಗೋಪಾಲ್.ಎನ್.ಎಸ್, ರೆಡ್ ಎಫ್ಎಂ ನ ಕ್ಲಸ್ಟರ್ ಹೆಡ್ ಶೋಭಿತ್ ಶೆಟ್ಟಿ ಕುಲ್ಕುಂದ, ಯುವ ಉದ್ಯಮಿ ದೀಪಕ್.ಹೆಚ್.ಬಿ, ಕಪೆಗಮಿನಿ ಟೆಕ್ನಾಲಜಿಯ ಸೀನಿಯರ್ ಮ್ಯಾನೇಜರ್ ವಿಘ್ನೇಶ್ ಕುಮಾರ್, ಹಿರಿಯರಾದ ಮಹಾಬಲಕೃಷ್ಣ ಭಟ್, ಉದ್ಯಮಿ ಆನಂದ್ ದೇವರಗದ್ದೆ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಗಾಂಗೇಯ ತಂಡದ ಮಾಜಿ ನಾಯಕ ಸುಬ್ರಹ್ಮಣ್ಯ ಶಬರಾಯ, ನಿರ್ಣಾಯಕರಾದ ಪುಷ್ಪರಾಜ್ ಬಿ.ಎಂ ಮಂಗಳೂರು, ಹರೀಶ್ ಪಡೀಲ್, ಮೋಹನ್ ಯಯ್ಯಾಡಿ, ವೀಕ್ಷಕ ವಿವರಣೆಗಾರರಾದ ಸುಕುಮಾರ್ ಬೆಂಗಳೂರು, ಸತೀಶ್ ಮಂಗಳೂರು, ಗೋಪಿ ಮಂಗಳೂರು, ಗಾಂಗೇಯ ತಂಡದ ನಾಯಕ ಪ್ರಕಾಶ್ ಸುಬ್ರಹ್ಮಣ್ಯ, ಗಾಂಗೇಯ ತಂಡದ ಕೋಶಾಧಿಕಾರಿ ಆದರ್ಶ.ಕೆ.ಆರ್, ಸದಸ್ಯರಾದ ನವೀನ್ ಮಣಿ, ಮೋಹನ್.ಕೆ.ಸಿ, ಮಹೇಶ್.ಎಸ್, ಪವನ್ ಕೇದಿಗೆಬನ, ಕೀರ್ತೀಶ್, ಗೋವರ್ಧನ್ ಕಲ್ಲಾಜೆ, ಗಂಗಾಧರ.ಎಸ್.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಾಂಗೇಯ ತಂಡದ ಮಾಜಿ ಕಫ್ತಾನ ಹಾಗೂ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿ, ಸುಕುಮಾರ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ