ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗ ಅಭಿವೃದ್ಧಿಯಾಗದ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ದೇಶವನ್ನಾಳುವ ಸರಕಾರಗಳು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಬಂಡವಾಳ ಶಾಹಿಗಳ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಇತ್ತೀಚೆಗೆ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಅಕ್ಷರ ದಾಸೋಹ ನೌಕರರ ಸಮಾವೇಶದಲ್ಲಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ದೇಶದ ಕಾರ್ಮಿಕ ವರ್ಗದ ಸಮರಗೀರ ಹೋರಾಟ ನಡೆಸಿ, ಪಡೆದುಕೊಂಡ ಕಾನೂನು ಸವಲತ್ತುಗಳನ್ನು ಇಲ್ಲವಾಗಿಸಲು ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ ಇದನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಕಳೆದ ಏಳು ವರ್ಷಗಳಿಂದ ಇದೇ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ತಿರುಚಿವ ಮೂಲಕ ಕಾರ್ಮಿಕ ವರ್ಗಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದ್ದ ಸರಕಾರ ಬಂಡವಾಳ ಶಾಹಿಗಳಿಗೆ ಬೆಂಬಲವಾಗಿ ನಿಂತಿರುವುದು ದುರದೃಷ್ಟ ಮಾತ್ರವಲ್ಲ ಕನಿಷ್ಠ ಕೂಲಿ ಸಾಮಾಜಿಕ ಭದ್ರತೆ ಪಿಂಚಣಿ ಮುಂತಾದ ವಿಷಯಗಳ ಬಗ್ಗೆ ಸ್ಪಷ್ಟವಾದ ತಿರ್ಮಾನಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದ ಅವರು ಬಿಸಿಯೂಟ ಕಾರ್ಮಿಕರನ್ನು ಜೀತಾದಾಳುಗಳಂತ ದುಡಿಸಿಕೊಳ್ಳುತ್ತಿರುವ ಸರಕಾರ ಅವರಿಗೆ ಯಾವುದೇ ಸವಲತ್ತುಗಳನ್ನು ನೀಡಿಲು ಸರಕಾರಗಳು ತಯಾರಿಲ್ಲ ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಮಾತ್ರವಲ್ಲ ಮಾರ್ಚ್ 28,29 ರಂದು ನಡೆಯುವ ಅಖಿಲ ಭಾರತ ಕಾರ್ಮಿಕರ ಮುಷ್ಕರದಲ್ಲಿ ಎಲ್ಲಾ ಬಿಸಿಯೂಟ ನೌಕರರು ಭಾಗವಹಿಸುವಂತೆ ಕರೆ ನೀಡಿದರು.
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷರು ಭವ್ಯ ಮತ್ತು ಸಿಐಟಿಯು ಮುಖಂಡರಾದ ಕೆ.ಪಿ.ರಾಬರ್ಟ್ ಡಿಸೋಜರವರು ಸಮಾವೇಶವನ್ನುದ್ದೇಶಿಸಿ ಮಾತಾನಾಡಿದರು ಸಭೆಯ ಅಧ್ಯಕ್ಷತೆಯನ್ನು ಲೀಲಾವತಿ.ಕೆ. ಅಲೆಕ್ಕಾಡಿ ವಹಿಸಿದ್ದರು. ವೇದಿಕೆಯಲ್ಲಿ ವಿಜಯಿಲಕ್ಷ್ಮಿ ಐವರ್ನಾಡು, ಸುನೀತಾ ಎಲಿಮಲೆ, ಸಾವಿತ್ರಿ ಕರಂಬಿಲ, ಲತಾ ಪದವು, ಭವ್ಯ ಎಡಮಂಗಲ, ಅಕ್ಕಮ್ಮ ಕಳಂಜ ಖಜಾಂಜಿ, ಪುಷ್ಪಾ ಕಲ್ಲಡ್ಕ ಉಪಸ್ಥಿತರಿದ್ದರು. ಸುಮೀತಾ ಸ್ವಾಗತಿಸಿ, ಲೀಲಾವತಿ ಧನ್ಯವಾದ ಅರ್ಪಿಸಿದರು.