Ad Widget

ಗುತ್ತಿಗಾರು : ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ

ಸಾರ್ವಜನಿಕರ ತುರ್ತು ಉಪಯೋಗಕ್ಕಾಗಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಂದ ದೇಣಿಗೆಯ ಮೂಲಕ ನಿಧಿ ಸಂಗ್ರಹಿಸಿ ಖರೀದಿಸಿದ ಆಂಬ್ಯುಲೆನ್ಸ್ ಯೋಜನೆ ಜ. 14 ರಂದು ಲೋಕಾರ್ಪಣೆ ಗೊಂಡಿತು.

ಸುಳ್ಯ ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ತೆಂಗಿನಕಾಯಿ ಒಡೆದರು. ಮಾ। ಚೇತನ್ ಮುಂಡೋಡಿ ಕೀ ಹಸ್ತಾಂತರಿಸಿದರು. ನಿವೃತ್ತ ಎಸ್ ಐ ಸುಬ್ಬಣ್ಣ ಗೌಡ ಅಂಬ್ಯುಲೆನ್ಸ್ ಚಾಲನೆ ಮಾಡಿದರು.

ಈ ಸಂದರ್ಭ ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ, ಜಯರಾಮ ದೇರಪಜ್ಜನ ಮನೆ, ಡಾ. ಚೈತ್ರಾಭಾನು , ಮುಳಿಯ ಕೇಶವ ಭಟ್, ಫಾ. ಆದರ್ಶ ಜೋಸೆಫ್‌ , ಕೇಶವ ಹೊಸೊಳಿಕೆ, ಗದಾಧರ ಬಾಳುಗೋಡು, ಪ್ರದೀಪ್ ಕುಮಾರ್ ಕುಂಞೆಟ್ಟಿ, ಯೋಗೀಶ್ ಹೊಸೊಳಿಕೆ, ಪ್ರಮೀಳಾ ಶಶಿಧರ ಕೋಲ್ಯ, ಟ್ರಸ್ಟ್ ನ ಸುಪ್ರಿತ್ ಗುಡ್ಡೆಮನೆ, ಮೋಹನ್ ಶಿರಾಜೆ, ಯತೀಂದ್ರ ಕಟ್ಟಕೋಡಿ, ಸುಕುಮಾರ ಕಂದ್ರಪ್ಪಾಡಿ, ವಿಶ್ವನಾಥ ಆಚಳ್ಳಿ ಉಪಸ್ಥಿತರಿದ್ದರು.
ಈ ಸಂದರ್ಭ ಧನ ಸಹಾಯ ನೀಡಿದ ಸರ್ವರನ್ನು ಸ್ಮರಿಸಲಾಯಿತು. ಈ ಮಹತ್ತರ ಯೋಜನೆಯ ರೂವಾರಿ ಟ್ರಸ್ಟ್‌ ನ ಅಧ್ಯಕ್ಷ ಚಂದ್ರಶೇಖರ ಕಡೋಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ಕಾರ್ಯದರ್ಶಿ ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.
ತುರ್ತುಸೇವೆಗೆ ಕರೆ ಮಾಡಿ 9480199711, 9483831086, 9482770938

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!