- Thursday
- October 31st, 2024
ಸುಬ್ರಹ್ಮಣ್ಯದ ಪದವಿ ಕಾಲೇಜಿನ ಎದುರು ಮುಖ್ಯರಸ್ತೆಯಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ನ ಸ್ಲಾಬ್ ಕುಸಿಯುವ ಹಂತದಲ್ಲಿದ್ದು ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟಂತಿದೆ. ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ತುರ್ತು ಉಪಯೋಗಕ್ಕಾಗಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಂದ ದೇಣಿಗೆಯ ಮೂಲಕ ನಿಧಿ ಸಂಗ್ರಹಿಸಿ ಖರೀದಿಸಿದ ಆಂಬ್ಯುಲೆನ್ಸ್ ಯೋಜನೆ ಜ. 14 ರಂದು ಲೋಕಾರ್ಪಣೆ ಗೊಂಡಿತು. ಸುಳ್ಯ ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...
ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊಳ್ಳಿ ಮುಹೂರ್ತ ಕಾರ್ಯಕ್ರಮ ಜ.14 ರಂದು ನಡೆಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಳ್ಯ ನಗರ ಪಂಚಾಯತ್ ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಟೇಬಲ್ ಗಳಲ್ಲಿ ಕಡತಗಳ ರಾಶಿ ಕಂಡು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜ.14 ರಂದು ನಡೆದಿದೆ. ನಗರ ಪಂಚಾಯತ್ ಕಚೇರಿಯ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ನಗರ ಪಂಚಾಯತ್ ಮುಖ್ಯಾಧಿಕಾರಿ, ಇಂಜಿನಿಯರ್, ಆರೋಗ್ಯಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿ...
ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜ.14 ರ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಗೆ ಶ್ರೀ ದೈವದ ಒತ್ತೆಕೋಲ ಮಹೋತ್ಸವದ ಅಂಗವಾಗಿ ಕೊಳ್ಳಿ ಮಹೂರ್ತ ನೆರವೇರಿತು.ಈ ಸಂದರ್ಭದಲ್ಲಿ ಅದ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಹಾಗೂ ಪ್ರಮುಖರಾದ ವೆಂಕಟ್ ರಾಜ್, ಹರೀಶ್ ಇಂಜಾಡಿ, ರವಿ ಕಕ್ಕೆಪದವು, ರಾಜೇಶ್.ಎನ್.ಎಸ್, ಸುರೇಶ್, ರಾಜೇಶ್ ಕುಲ್ಕುಂದ, ಅರ್ಚಕರಾದ ರಾಮಚಂದ್ರ ಮಣಿಯಾಣಿ ಹಾಗೂ ಊರ...
ಹರಿಹರ ಪಲ್ಲತ್ತಡ್ಕ ಗ್ರಾಮದ ಎಲ್ಲಪಡ್ಕದ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.16 ರ ಆದಿತ್ಯವಾರದಂದು ವಾರ್ಷಿಕ ನೇಮೋತ್ಸವವು ನಡೆಯಲಿದ್ದು, ಮದ್ಯಾಹ್ನ 1:00 ಗಂಟೆಯಿಂದ ದೈವಸ್ಥಾನದ ವಠಾರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಹಾಗೂ ರಾತ್ರಿ 8:00 ಗಂಟೆಯಿಂದ ಶಾರದಾಂಭ ಯಕ್ಷಗಾನ ಅದ್ಯಯನ ಕೇಂದ್ರ ಕಲಾ ಕ್ಷೇತ್ರ ಪಂಜ ಇದರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಕ್ಷಮಣಿ...
ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟ,ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸೇರಿದಂತೆ ನೂತನ ಒಕ್ಕೂಟ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಬಗ್ಗೆ ಸಭೆ ಜ.26 ರಂದು ಸುಳ್ಯ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ಪೂ.10 ಗಂಟೆಗೆ ನಡೆಯಲಿದೆಅರೆಭಾಷೆ ರಂಗಭೂಮಿ, ಸಿನಿಮಾ, ಸಾಹಿತ್ಯ, ಸಾಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲಾ ಸರ್ವ ಕಲಾವಿದರ ಒಗ್ಗಟ್ಟಿನೊಂದಿಗೆ ಅರೆಭಾಷೆ...
ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ಮಾಣಿ-ಮೈಸೂರುರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೃಹದಾಕಾರದಮರವೊಂದು ಬೀಳುವ ಪರಿಸ್ಥಿತಿ ಇದ್ದು ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆಯಾಗಿದ್ದು ವಾಹನಗಳ ಮೇಲೆ ಬಿದ್ದರೆ ಜೀವ ಹಾನಿಯಾಗುವ ಸಂಭವ ಇರುವುದರಿಂದ ಬೀಳುವ ಪರಿಸ್ಥಿತಿಯಲ್ಲಿರುವ ಮರವನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮರವನ್ನು ತೆರವುಗೊಳಿಸಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಉದಯಗಿರಿ ಇದರ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸ್ವಚ್ಚತಾ ಕಾರ್ಯಕ್ರಮವನ್ನು ಮಾವಿನಕಟ್ಟೆ ಒಕ್ಕೂಟದ ಸದಸ್ಯರು ಶ್ರಮದಾನ ಮಾಡುವುದರ ಮುಖಾಂತರ ನೆರವೇರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ,ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಶ್ರೀಕಟೀಲ್, ಸದಸ್ಯರಾದ ಭಾಸ್ಕರ ಬಾಳೆತೋಟ, ಒಕ್ಕೂಟದ...
ಪ್ರಚಂಡ ಪ್ರತಿಭೆಯಿಂದ ಜಗತ್ತಿನಲ್ಲಿ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡ ಸ್ಫೂರ್ತಿಪ್ರದ ವರ್ಚಸ್ಸಿನ ಸ್ವಾಮಿ ವಿವೇಕಾನಂದರ ಬದುಕಿನ ಆದರ್ಶಗಳನ್ನು, ತತ್ವಗಳನ್ನುಅರಿತು ಮುನ್ನಡೆದಾಗ ನಮ್ಮ ಬದುಕು ಪಕ್ವವಾಗುವುದು ಎಂದು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕಿ, ಯುವ ವಾಗ್ಮಿ ಕು.ಬೇಬಿ ವಿದ್ಯಾ ಪಿ ಬಿ ಹೇಳಿದರು. ಅವರು ನೆಹರು ಮೆಮೋರಿಯಲ್ ಕಾಲೇಜು ಕುರುಂಜಿಭಾಗ್ ಸುಳ್ಯ ಇಲ್ಲಿನ ಮಾನವಿಕ...
Loading posts...
All posts loaded
No more posts