ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
(ನಿ.) ಅಲೆಕ್ಕಾಡಿ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಡಿ.19 ಆದಿತ್ಯವಾರದಂದು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ, ಅಲೆಕ್ಕಾಡಿಯಲ್ಲಿ ಸಂಘದ ಅಧ್ಯಕ್ಷರಾದ ವಸಂತ ಹೆಚ್ ಹುದೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಕೃಷಿಕರಾದ ಗಿರಿಯಪ್ಪ ಗೌಡ ದೀಪ ಬೆಳಗಿಸಿ ಮಹಾಸಭೆಯನ್ನು ಉದ್ಘಾಟಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್ ಸ್ವಾಗತಿಸಿ, ಕಾರ್ಯಸೂಚಿ ಮಂಡನೆಗೈದರು. 2020-21ನೇ ಸಾಲಿನಲ್ಲಿ ಸಂಘವು ರೂ.52,10,897.61/- ನಿವ್ವಳ ಲಾಭವನ್ನು ಗಳಿಸಿದ್ದು, ಶೇ.16.77 ಪ್ರಗತಿಯನ್ನು ಸಾಧಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ 6% ಡಿವೆಡೆಂಡ್ ನೀಡುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ಸಭೆಯಲ್ಲಿ ವರದಿ ವರ್ಷದಲ್ಲಿ ಮೃತರಾದ ಸಂಘದ ಮಾಜಿ ಸದಸ್ಯರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಜನರಲ್ ಬಿಪಿನ್ ರಾವತ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ನೂತನ ಕಟ್ಟಡವು ನಿಂತಿಕಲ್ಲಿನಲ್ಲಿ ನಿರ್ಮಾಣಗೊಂಡಿದ್ದು, ಜ.21ರಂದು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದರು. ಸಂಘದ ನಿರ್ದೇಶಕ ವಸಂತ ನಡುಬೈಲು ಧನ್ಯವಾದಗೈದರು.
ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ವಸಂತ ಹೆಚ್ ಹುದೇರಿ, ಉಪಾಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ.ಕೆ.ಜಿ, ನಿರ್ದೇಶಕರಾದ ರಘುನಾಥ ರೈ.ಕೆ.ಎನ್, ವಸಂತ ನಡುಬೈಲು, ರೂಪರಾಜ ರೈ ಕೆ, ಕು|ಭಾಗೀರಥಿ ಮುರುಳ್ಯ, ರಾಜಶೇಖರ ಅಲೆಂಗಾರ, ದಿನೇಶ್.ಎಚ್ ಹೇಮಳ, ಪುರುಷೋತ್ತಮ ಆಚಾರ್ಯ ಕುಕ್ಕುಟ್ಟೆ, ದಿನೇಶ್.ಎ ಪಜಿಂಬಿಲ, ಶೇಖರ.ಎ ಹಾಗೂ ಶ್ರೀಮತಿ ನಳಿನಿ.ಎಸ್ ರೈ ವೇದಿಕೆಯಲ್ಲಿದ್ದರು. ಸಂಘದ ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಉಪಸ್ಥಿತರಿದ್ದರು.