Ad Widget

ಜಯನಗರ : ಸ್ಮಶಾನ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡ ರೋಟರಿ ಕ್ಲಬ್ ಸುಳ್ಯ- ಸುಸಜ್ಜಿತ ಸ್ಮಶಾನ ರಚಿಸಿ ನಗರಾಡಳಿತಕ್ಕೆ ಹಸ್ತಾಂತರ : ಪ್ರಭಾಕರ ನಾಯರ್

ಶೋಚನೀಯ ಸ್ಥಿತಿಯಲ್ಲಿರುವ ಜಯನಗರದ ಸ್ಮಶಾನವನ್ನು ರೋಟರಿ ಕ್ಲಬ್ ವತಿಯಿಂದ ಅಭಿವೃದ್ಧಿ ಮಾಡಲು ನಿರ್ಧರಿಸಿದ್ದೇವೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಸಾಗುತ್ತಿದ್ದು ರುದ್ರಭೂಮಿ ಛಾವಣಿ ಕೆಲಸ, ಸಿಲಿಕಾನ್ ಛೇಂಬರ್ ಅಳವಡಿಕೆ, ಶೌಚಾಲಯ, ಸ್ನಾನಗೃಹ, ಶಿವನ ಮೂರ್ತಿ ಹಾಗೂ ಪಾರ್ಕ್ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಿ ಕಾರ್ಯ ಆರಂಭಿಸಲಾಗಿದೆ ಎಂದು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ಪ್ರಭಾಕರ ನಾಯರ್...

ಗುತ್ತಿಗಾರು : ಜಿ.ಟಿ.ಆರ್. ಹಬ್ ರೆಸ್ಟೋರೆಂಟ್ ಶುಭಾರಂಭ

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಧನ್ಯಕುಮಾರ್ ದೇರುಮಜಲು ಹಾಗೂ ರಕ್ಷಿತ್ ಶೀರಡ್ಕ ಮಾಲಕತ್ವದ ಜಿ.ಟಿ.ಆರ್ ಹಬ್ (GTR Hub) ರೆಸ್ಟೋರೆಂಟ್ ಡಿ.26 ರಂದು ಉದ್ಘಾಟನೆಗೊಂಡಿತು. ಇಲ್ಲಿ ಗ್ರಾಹಕರಿಗೆ ಚಿಕ್ಕನ್ ಟಿಕ್ಕ, ಶವರ್ಮ,ಅಲ್-ಫಾಹಮ್, ಊಟ, ಉಪಹಾರ, ಪೋರ್ಕ್, ಬಿರಿಯಾನಿ,ಸೂಪ್, ಐಸ್ ಕ್ರೀಮ್, ಟೀ ಹಾಗೂ ಪಾರ್ಸೆಲ್ ವ್ಯವಸ್ಥೆಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.
Ad Widget

ಸೋಣಂಗೇರಿ ಸಮೀಪ ಅಪರಿಚಿತ ಶವ ಪತ್ತೆ

ಸೋಣಂಗೇರಿ ಸಮೀಪ ಹೊಸಗದ್ದೆ ರಸ್ತೆ ಬದಿಯ ಪೊದೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಐದನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ- ಕಾಲೇಜಿಗೆ ವಿದ್ಯಾರ್ಥಿ ಆರೋಗ್ಯ ನಿಧಿಯ ಹಸ್ತಾಂತರ

ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯದ 2015-2016ನೇ ಸಾಲಿನ ಬಿ.ಎ ಬಳಗದ ಹಿರಿಯ ವಿದ್ಯಾರ್ಥಿವೃಂದದ 5ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಡಿ.26 ರಂದು ಕೆ.ಎಸ್.ಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಧ್ಯಾಹ್ನದ ಭೋಜನದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬಿ.ಎ...

ಮರ್ಕಂಜ: ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ ‘ಚೈತನ್ಯ ಟ್ರೋಪಿ’ ಕ್ರಿಕೆಟ್ ಪಂದ್ಯಾಟ

ಡಿ. 25 ಶನಿವಾರ ಹಾಗೂ ಡಿ. 26 ಆದಿತ್ಯವಾರದಂದು ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ, clienteleRCM ಪ್ರಾಯೋಜಕತ್ವದ/ಅರ್ಪಿಸಿದ ಲೀಗ್ ಮಾದರಿಯ 12 ತಂಡಗಳ "ಚೈತನ್ಯ ಟ್ರೋಪಿ" ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸಭಾಧ್ಯಕ್ಷರಾಗಿ ಗೋವಿಂದ ಅಳವುಪಾರೆ, ಅಧ್ಯಕ್ಷರಾಗಿ ಕಿರಣ್ ಕುಮಾರ್ ಕರಂಗಲಡ್ಕ ಹಾಗೂ ಅತಿಥಿಗಳಾಗಿ ಬಾಲಕೃಷ್ಣ ಕಂಜಿಪಿಲಿ, ಆನಂದ ಬಾಣೂರು,...

ನಾವೂರು : ನಗರ ಪಂಚಾಯತ್ ನಿರ್ಲಕ್ಷ್ಯದಿಂದ ಆಸ್ಪತ್ರೆ ಸೇರಿದ ಕಾಲೊನಿ ನಿವಾಸಿ

ಸುಳ್ಯ ನಗರದ ಗಾಂಧಿನಗರ ನಾವೂರು ಕಾಲೋನಿಗೆ ಚರಂಡಿ ವ್ಯವಸ್ಥೆ ಇದ್ದು ಕೆಲವು ದಿನಗಳಿಂದ ಕಾಲುದಾರಿಯ ಸ್ಲಾಬ್ ಮುರಿದು ಬಿದ್ದಿತ್ತು. ಡಿ.25ರ ರಾತ್ರಿ ಈ ದಾರಿಯಲ್ಲಿ ನಡೆದು ಬರುತ್ತಿದ್ದ ವ್ಯಕ್ತಿ ಮುರಿದ ಹೊದಿಕೆಯ ಮೇಲೆ ಕಾಲಿರಿಸಿದ್ದರಿಂದ ಬಿದ್ದು ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾರೆ. ಈ ಘಟನೆಗೆ ಸುಳ್ಯ ನಗರ ಪಂಚಾಯತ್ ನಿರ್ಲಕ್ಷ್ಯವೇ ಕಾರಣವೆಂದ ನಿವಾಸಿಗಳು, ಆದಷ್ಟು ಬೇಗ...

ಮೂಡಬಿದ್ರೆಯ ಕೋಟಿ-ಚೆನ್ನಯ ಕಂಬಳದಲ್ಲಿ “ಪಡುಮಲೆ ದೇಯಿ ಬೈದ್ಯೆತಿ ಆಯುರ್ವೇದಿಕ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟ

ಬೆಳ್ಳಾರೆಯ ಹೆಸರಾಂತ ನಾಟಿ ವೈದ್ಯರಾಗಿರುವ ಅಶೋಕ್ ಕೊಡಚಾದ್ರಿಯವರಿಂದ ತಯಾರಿಸಲ್ಪಡುವ “ಪಡುಮಲೆ ದೇಯಿ ಬೈದೈತಿ” ಸಂಜೀವಿನಿ ನೋವಿನ ತೈಲ ಹಾಗೂ ಇತರ ಆಯುರ್ವೇದಿಕ್ ಉತ್ಪನಗಳ ವಿಶೇಷ ಪ್ರಚಾರ ಮತ್ತು ಮಾರಾಟವು ಮೂಡಬಿದಿರೆಯ ಜೋಡುಕರೆ ಕಂಬಳದಲ್ಲಿ ಯಶಸ್ವಿಯಾಗಿ ನಡೆಯಿತು. ಪಡುಮಲೆಯಲ್ಲಿ ಸುವರ್ಣ ಕೇದಗೆ ಯಾನೆ ದೇಯಿ ಬೈದಿತಿ ಹುಟ್ಟಿ ಬೆಳೆದ ಕೂವೆ ತೋಟದ ಮನೆಯ ಸ್ತಬ್ದ ಚಿತ್ರಣವು ನೋಡುಗರ...
error: Content is protected !!