Ad Widget

ಹಿರಿಯರ ಕ್ರೀಡಾಕೂಟದಲ್ಲಿ ಲಕ್ಷ್ಮಣ ಬೊಳ್ಳಾಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ಚಿತ್ರದುರ್ಗದಲ್ಲಿ‌ ಡಿ.11‌‌ಮತ್ತು 12 ರಂದು ನಡೆದ‌‌ ರಾಜ್ಯಮಟ್ಟದ ಹಿರಿಯರ‌ ಕ್ರೀಡಾಕೂಟದಲ್ಲಿ ಲಕ್ಷ್ಮಣ ಬೊಳ್ಳಾಜೆಯವರು ಲಾಂಗ್ ಜಂಪ್‌ನಲ್ಲಿ ಪ್ರಥಮ ಸ್ಥಾನ,‌ 400 ಮಿ.ಓಟದಲ್ಲಿ ದ್ವಿತೀಯ ಮತ್ತು 100 ಮಿ.ಓಟದಲ್ಲಿ ತೃತೀಯ ಸ್ಥಾನ ಪಡೆದು ತಮಿಳುನಾಡಿನಲ್ಲಿ ನಡೆಯಲಿರುವ‌ ರಾಷ್ಟ್ರಮಟ್ಟದ ಹಿರಿಯರ‌‌ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಹಿರಿಯರ ಕ್ರೀಡಾಕೂಟದಲ್ಲಿ ಕೂತ್ಕುಂಜ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಚಿತ್ರದುರ್ಗ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ಡಿ.11 ಹಾಗೂ ಡಿ.12ರಂದು ಚಿತ್ರದುರ್ಗದಲ್ಲಿ ನಡೆದ '40ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್' ಹಿರಿಯರಕ್ರೀಡಾಕೂಟದಲ್ಲಿ ಭಾಗವಹಿಸಿದ ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿಯವರು 100ಮೀ., 200ಮೀ. ಹಾಗೂ 400ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟವು ತಮಿಳುನಾಡಿನಲ್ಲಿ ನಡೆಯಲಿದೆ.
Ad Widget

ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಭಾಶ್ಚಂದ್ರ ರೈ ತೋಟ ರಾಷ್ಟ್ರಮಟ್ಟಕ್ಕೆ ಆಯ್ಕೆ

ಅಂತರರಾಷ್ಟ್ರೀಯ ಕ್ರೀಡಾಪಟು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ರೈ ತೋಟರವರು ಉಡುಪಿಯಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಹಿರಿಯರ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ 100ಮೀ. ಓಟ ಮತ್ತು 300ಮೀ. ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೆಬ್ರವರಿಯಲ್ಲಿ ಹೈದರಾಬಾದಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆಯಲಿದೆ.

ಸುಬ್ರಹ್ಮಣ್ಯ :- ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇವುಗಳ ವತಿಯಿಂದ ಡಿ.11 ರಂದು ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಶೇಖರ್.ಯು.ಡಿ, ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಆಚಾರ್ಯ ಪೈಲಾಜೆ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುಜಾತ ಹಾಗೂ ಕಾರ್ಯದರ್ಶಿ ಮೀನಾಕ್ಷಿ, ಒಕ್ಕೂಟದ...

ನಾಲ್ಕೂರು : ಹೊಂಬೆಳಕು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ

ಸಮಾನ ಮನಸ್ಕ ಯುವಕರು ಸೇರಿ ಕಟ್ಟಿದ ಹೊಂಬೆಳಕು ತಂಡದ ಸದಸ್ಯರು ತಿಂಗಳಿಗೆ ಒಂದು ದಿನ ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯವನ್ನು ಮಾಡುವ ಉದ್ದೇಶವನ್ನು ಹೊಂದಿದ್ದು ಅದರಂತೆ ಡಿ.12 ರಂದು ತಮ್ಮ 2ನೇ ತಿಂಗಳ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಕಂದ್ರಪ್ಪಾಡಿ ಕ್ರಾಸ್ ನಿಂದ ಗುತ್ತಿಗಾರು ಕಾಲೇಜು ದ್ವಾರದ ಹತ್ತಿರದ ಬಸ್ ತಂಗುದಾಣದವರೆಗೆ ಸ್ವಚ್ಛತಾ ಕಾರ್ಯ ನಡೆಯಿತು....

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ವತಿಯಿಂದ ಭಜನಾ ತರಬೇತಿ ಕಾರ್ಯಕ್ರಮ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ 5ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ಭಜನಾ ತರಬೇತಿಯ ಎರಡನೇ ದಿನವಾದ ಇಂದು(ಡಿ.12) ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ ಸದಸ್ಯರಾದ ನಾರಾಯಣ ಕಳಂಜ ಮತ್ತು ಗಿರಿಧರ ಕಳಂಜ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಭಜನೆ ತರಬೇತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು. ಸಂಪನ್ಮೂಲ...

ಶುಭವಿವಾಹ: ಅಭಿಜಿತ್ – ಸುಮನ

ಮಂಜೇಶ್ವರದ ಶೇಣಿ ತೋಟದ ಮನೆ ರವೀಂದ್ರನಾಥ ನಾಯಕ್ - ಸಂದ್ಯಾ ಅವರ ಸುಪುತ್ರ ಅಭಿಜಿತ್ ಅವರ ವಿವಾಹವು ಸುಳ್ಯದ ಉದ್ಯಮಿ ಗೋಪಾಲಕೃಷ್ಣ ಕರೋಡಿ ಕವಿತಾ ಕರೋಡಿ ಅವರ ಸುಪುತ್ರಿ ಸುಮನ ಅವರೊಂದಿಗೆ ಡಿ. ೧೨ ರಂದು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಂದು ಷಷ್ಠಿ ಮಹೋತ್ಸವ ಆರಂಭಗೊಂಡಿದ್ದು ಡಿ.12 ಆದಿತ್ಯವಾರದ ತನಕ ವೈಭವೋಪೇತವಾಗಿ ಜರುಗಿತು. ಡಿ.08ರಂದು ಪಂಚಮಿ ಪ್ರಯುಕ್ತ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು ಶ್ರೀ ಮಂಜುನಾಥೇಶ್ವರ...

ಶುಭವಿವಾಹ: ರಮೇಶ-ಹರ್ಷಿತಾ

ಪೆರುವಾಜೆ ಗ್ರಾಮದ ಮಠತ್ತಡ್ಕ ಚಂದ್ರಶೇಖರ ನಾಯ್ಕರ ಸುಪುತ್ರ ರಮೇಶ.ಎಂ ರವರ ವಿವಾಹವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಂಜಲ್ತಡ್ಕ ಸುಂದರ ನಾಯ್ಕರ ಸುಪುತ್ರಿ ಹರ್ಷಿತಾರೊಂದಿಗೆ ಡಿ.12 ಆದಿತ್ಯವಾರದಂದು ಪೆರುವಾಜೆಯ ಜೆ.ಡಿ.ಆಡಿಟೋರಿಯಂನಲ್ಲಿ ನಡೆಯಿತು.
error: Content is protected !!