ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಎಂ.ರಾಮಕೃಷ್ಣ ರೈ ಮಾಲೆಂಗ್ರಿ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ.ಡಿ ಕಾರ್ಯಸೂಚಿ ಮಂಡಿಸಿದರು. 2020-21ನೇ ಸಾಲಿನಲ್ಲಿ ಸಂಘವು ರೂ.24,90,223.32/- ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 4% ಡಿವಿಡೆಂಡ್ ನೀಡುವುದಾಗಿ ಮಹಾಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಜನರಲ್ ಬಿಪಿನ್ ರಾವತ್ ರವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತದಿಂದ ತೆಂಗು ಬೆಳೆಗಾರರಿಗೆ ಅಗತ್ಯ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ಸಂಸ್ಥೆಯ ಸುಮಂಗಲಾ ರವರಿಂದ ‘ಆಧ್ಯಾತ್ಮಿಕತೆ’ ವಿಚಾರದ ಬಗ್ಗೆ ವಿಷಯ ಮಂಡನೆ ಮಾಡಲಾಯಿತು. ಸಂಘದ ನಿರ್ದೇಶಕ ಅವಿನಾಶ್.ಡಿ ದೇವರಮಜಲು ಧನ್ಯವಾದಗೈದರು.
ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎಂ.ರಾಮಕೃಷ್ಣ ರೈ ಮಾಲೆಂಗ್ರಿ, ಉಪಾಧ್ಯಕ್ಷರಾದ ಶ್ರೀಮತಿ ಸುಮಾ ನೂಚಿಲ, ನಿರ್ದೇಶಕರಾದ ಅವಿನಾಶ್.ಡಿ ದೇವರಮಜಲು, ಪದ್ಮಯ್ಯ ನಾಯ್ಕ.ಎಂ ಮುಳಿಯ, ಕಮಲಾಕ್ಷ ಹೊಳೆಕರೆ, ತ್ಯಾಗರಾಜ.ಹೆಚ್.ಎಸ್ ಹೊಸಮನೆ, ಪುರಂದರ ರೈ ಬಲ್ಕಾಡಿ, ಕಾಂತು ದೇವಸ್ಯ, ಚಂದ್ರಯ್ಯ.ಎಂ ಮಜ್ಜಾರು, ರಾಘವ ಪೂಜಾರಿ ಜಾಲ್ತಾರು, ಚಂದ್ರಶೇಖರ ಕೇರ್ಪಡ ಹಾಗೂ ಶ್ರೀಮತಿ ಚಂದ್ರಾವತಿ ಕಟ್ಟ ಮತ್ತು ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಉಪಸ್ಥಿತರಿದ್ದರು.