ಚೇತನ್ ಕೀಲಾಡಿಯವರ ಮಾಲಕತ್ವದ ನವಶಕ್ತಿ ಇಲೆಕ್ಟಿಕಲ್ಸ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿಯು ನಿಂತಿಕಲ್ಲಿನ ಸಾನಿಧ್ಯ ವಾಣಿಜ್ಯ ಸಂಕೀರ್ಣದಲ್ಲಿ ಡಿ.13 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಹುದೇರಿ ಮತ್ತು ನವಜ್ಯೋತಿ ಇಲೆಕ್ಟಿಕಲ್ಸ್ ನ ಮಾಲಕ ಭಾಸ್ಕರ ಬದಿಕಾನ ದೀಪ ಬೆಳಗಿಸಿ ಉದ್ಘಾಟಿಸಿದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಅರ್ಚಕ ಶ್ರೀನಿವಾಸ ಹೆಬ್ಬಾರ್ ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಲ್ಡಿಂಗ್ ಮಾಲಕ ತಿಮ್ಮಪ್ಪ ಗೌಡ ಮಲ್ಲಾರ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಗಿರಿಧರ ಗೌಡ ಕೀಲಾಡಿ, ಶ್ರೀಮತಿ ಮೋಹಿನಿ ಗಿರಿಧರ ಗೌಡ, ಮೋಹನದಾಸ್ ಕೀಲಾಡಿ, ರಾಮಚಂದ್ರ ಗೌಡ ಕೊಡೆಂಚಿಕಾರ್, ,ಮಾಧವ ಗೌಡ ಅಜ್ಜಿಹಿತ್ತು ಹೇಮಂತ್ ಕುಳ್ಳಂಪಾಡಿ, ಮೋಹನ್ ಪಂಜ, ನಿತಿನ್ ಕೀಲಾಡಿ, ಶ್ರೀಮತಿ ಹರ್ಷಿತಾ,ಮಧುಶ್ರೀ ಕೀಲಾಡಿ, ಶ್ರೀಮತಿ ಹರಿಣಾಕ್ಷಿ ಕೀಲಾಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
- Thursday
- October 31st, 2024