Ad Widget

ಸುಬ್ರಹ್ಮಣ್ಯ :-ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಸನ್ಮಾನ – ರವಿ ಕಕ್ಕೆಪದವು ಕುರಿತ “ಬೆಂಕಿಯಲ್ಲಿ ಅರಳಿದ ಹೂವು” ಕೃತಿ ಬಿಡುಗಡೆ

ಸಮಾಜ ಸೇವಕ, ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು ಅವರ ಕುರಿತು ಡಾ| ರಾಜೇಶ್ವರಿ ಗೌತಮ್ ರವರು ಬರೆದ “ಬೆಂಕಿಯಲ್ಲಿ ಅರಳಿದ ಹೂವು” ಕೃತಿ ಬಿಡುಗಡೆ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಅಭಿನಂದನಾ ಸಮಾರಂಭವು ನ.24 ರ ಬುಧವಾರದಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.
ಜೇಸಿಐ ಸುಬ್ರಹ್ಮಣ್ಯ ಕುಕ್ಕೇಶ್ರೀ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಜೇಸಿಐ ಅದ್ಯಕ್ಷ ದೀಪಕ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಡಾ| ರಾಜೇಶ್ವರಿ ಗೌತಮ್ ರವರು ಬರೆದ ರವಿ ಕಕ್ಕೆಪದವು ಅವರ ಕುರಿತ “ಬೆಂಕಿಯಲ್ಲಿ ಅರಳಿದ ಹೂವು” ಕೃತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬರವರು ಬಿಡುಗಡೆ ಮಾಡಿದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಪುತ್ತೂರು ಸಹಾಯಕ ಆಯುಕ್ತರಾದ ಡಾ| ಯತೀಶ್ ಉಳ್ಳಾಲ್ ಸನ್ಮಾನಿಸಿ, ಅಭಿನಂದಿಸಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಕೃತಿ ಪರಿಚಯ ಹಾಗೂ ಅಭಿನಂದನಾ ಭಾಷಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಜಿ ಪದ್ಮಪ್ರಸಾದ್, ಜೇಸಿಐ ವಲಯಾದ್ಯಕ್ಷೆ ಸೌಜನ್ಯ ಹೆಗ್ಡೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ವನಜಾ.ವಿ ಭಟ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ, ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್, ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಗಣೇಶ್ ಪ್ರಸಾದ್.ಎನ್, ಅಭಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ನೆಕ್ರಾಜೆ, ಎಸ್.ಎಸ್.ಪಿ.ಯು.ಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್.ಎನ್.ಎಸ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅದ್ಯಕ್ಷರಾದ ವಿಜಯಕುಮಾರ್ ಅಮೈ, ಜೇಸಿಐ ಪೂರ್ವ ರಾಷ್ಟ್ರೀಯ ನಿರ್ದೇಶಕರಾದ ಚಂದ್ರಶೇಖರ ನಾಯರ್, ಜೇಸಿಐ ಸುಬ್ರಹ್ಮಣ್ಯ ಕುಕ್ಕೇಶ್ರೀ ಸ್ಥಾಪಕಾಧ್ಯಕ್ಷರಾದ ವಿಶ್ವನಾಥ ನಡುತೋಟ, ಐನೆಕಿದು-ಸುಬ್ರಹ್ಮಣ್ಯ ಸೊಸೈಟಿ ಮಾಜಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ, ಕುಕ್ಕೇಶ್ರೀ ಜೇಸಿಐ ಕಾರ್ಯದರ್ಶಿ ಸೌಮ್ಯ ಭರತ್, ಉಪಾಧ್ಯಕ್ಷೆ ಸವಿತಾ ಭಟ್, ನಿಕಟಪೂರ್ವ ಅದ್ಯಕ್ಷರಾದ ಮಣಿಕಂಠ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!