Ad Widget

ನ.ಪಂ.ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಲಂಚ ಪಡೆಯುತ್ತಾರೆಂದು ಜಾಲತಾಣದಲ್ಲಿ ಆರೋಪ – ಕರ್ಪ್ಯೂ ಅವಧಿ ಮೀರಿ ವ್ಯಾಪಾರ ನಡೆಸಿದವರಿಗೆ ದಂಡ ಹಾಕಿದ್ದೇವೆ ಎಂ.ಆರ್.ಸ್ವಾಮಿ ಸ್ಪಷ್ಟನೆ

ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ. ಆರ್ ಸ್ವಾಮಿಯವರು ಕೋವಿಡ್ ನಿಯಮದ ನೆಪದಲ್ಲಿ ದಂಧೆ ಮಾಡುತ್ತಿದ್ದಾರೆ. ಇವರ ಫೈನ್ ಕೇವಲ ಬಡ ವ್ಯಾಪಾರಿಗಳ ಮೇಲೆ, ಲಂಚ ಪಡೆದು ಅಕ್ರಮವೆಸಗುತ್ತಿದ್ದಾರೆ ಎಂದು ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣದ ಬರಹ

ಮಾನ್ಯ ಸುಳ್ಯದ ಶಾಸಕರಾದ ನಮ್ಮ ಹೆಮ್ಮೆಯ ಸಚಿವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎಸ್. ಅಂಗಾರ ಅವರೇ…ನಿಮ್ಮ ಕ್ಷೇತ್ರದಲ್ಲಿ ಈ ತರ ಅನ್ಯಾಯವಾಗುತ್ತಿದ್ದರು ಕಣ್ಣು ಮುಚ್ಚಿಕೊಂಡು ಕುಳಿತಿರುವುದರಿಂದ ನಮ್ಮಗೆ ತುಂಬ ಬೇಸರ ತಂದಿದೆ. ಸುಳ್ಯ ನಗರದಾದ್ಯಂತ ಇರುವ ಹೋಟೆಲ್ ಮಾಲಕರ ಪರವಾಗಿ ನಿಮ್ಮ ಜೊತೆಗೆ 2 ಮಾತನಾಡಲು ಬಯಸುತ್ತೇನೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್
ಅಂಗಾರ ಸರ್ ಅವರೇ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೋವಿಡ್ 19 ನಿಂದ ಲೋಕ್ ಡೌನ್ ಕುರಿತು ಕುರಿತು ಶನಿವಾರ ಮತ್ತು ಆದಿತ್ಯವಾರ ಅಗತ್ಯವಸ್ತು ಖರೀದಿ ಮತ್ತು ಹೋಟೆಲ್ ನಲ್ಲಿ ಪಾರ್ಸೆಲ್ ಸರ್ವಿಸ್ ಗೆ ಮಾತ್ರ ಅನುಮತಿ ನೀಡುತ್ತಿದ್ದಾರೆ. ಆದರೆ ಸುಳ್ಯ ದಲ್ಲಿ 2 ಗಂಟೆಯ ಮೇಲೆ ನಾವು ಹೋಟೆಲ್ ನಲ್ಲಿ ಪಾರ್ಸೆಲ್ ಸರ್ವಿಸ್ ನಡೆಸುತ್ತಾ ಬಂದಿದ್ದೇವೆ ಆದರೆ ಇವತ್ತು ಏಕಾಎಕಿ ಸುಳ್ಯದ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ. ಆರ್ ಸ್ವಾಮಿ ಅವರು ಎಲ್ಲಾ ಹೋಟೆಲ್ ಗೆ ತೆರಳಿ 1000, 2000, 3000 ಪೈನ್ ಹಾಕಿರುತ್ತಾರೆ. ನೋಡಿ ಸರ್ ನಾವು ಬಿಲ್ಡಿಂಗ್ ಬಾಡಿಗೆ ಕೊಡಬೇಕು. ಕರೆಂಟ್ ಬಿಲ್ ನೀರು ಬಿಲ್ ಕೆಲಸದವರ ಸಂಬಳ, ಗ್ಯಾಸ್ ಇನ್ನಿತರ ಕೊಡಬೇಕು. ನಾವು 2 ಗಂಟೆ ಯವರೆಗೆ ನಾವು 50 ಪರೋಟ ಸ್ವಯ ಸಾರು, ಸ್ವಲ್ಪ ಮಟ್ಟದಲ್ಲಿ ಊಟ ವನ್ನು ತಯಾರು ಮಾಡುತ್ತೇವೆ. ಆದರೆ ಕೋವಿಡ್ 19 ನಿಂದ ಜನಸಾಮಾನ್ಯರು ಭಯಪಟ್ಟು ಯಾರು ಕೂಡ ಟೌನ್ ಗೆ ಬರುತ್ತಿಲ್ಲ. ಆದರೆ ನಾವು ತಯಾರು ಮಾಡಿದ ಊಟ ತಿಂಡಿ ಯಾರಿಗೆ ಕೊಡಲಿ, ನೀವೇ ಹೇಳಿ ಏಕಾಎಕಿ ಬಂದು ಅಧಿಕಾರಿ ಅವರು ಈ ತರ ಫೈನ್ ಹಾಕಿದರೆ ನಾವು ಎನ್ ಮಾಡಲಿ ಸರ್ ನಾವು ಇಲ್ಲಿ ಲಕ್ಷ ರೂಪಾಯಿ ವ್ಯವಹಾರ ನಡೆಸಿದ್ದಾರೆ. ಲಂಚ ಕೊಟ್ಟು ವ್ಯಾಪಾರ ನಡೆಸಬಹುದು….. ನೋಡಿ ನಮ್ಮ ಮುಖ್ಯಾಧಿಕಾರಿ ಅವರೇ ನೀವು ಸುಳ್ಯ ದಲ್ಲಿ ಓಪನ್ ಆಗಿ ರಾತ್ರಿ 12 ಗಂಟೆ ತನಕ, ವೈನ್ ಶಾಪ್ ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ ನಿಮ್ಮ ಕಣ್ಣಿಗೆ ಕಣ್ಣುತಿಲ್ಲ. ನೋಡಿ ಸ್ವಾಮಿ ಅವರೇ, ಗೋಪಿಕಾ ಬಿಲ್ಡಿಂಗ್ ಮೋರ್ ಸೂಪರ್ ಮಾರ್ಕೆಟ್ ಮೇಲೆ ಅನುಮತಿ ಇಲ್ಲದೆ ಲಂಚ ಪಡೆದು ಅಕ್ರಮ ಕಟ್ಟಡ ಕಟ್ಟಲು ಅನುಮತಿ ನೀಡಿದ್ದೀರಿ ಈ ಕುರಿತು ನಾವು ಯಾವುದೇ ವಿಷಯ ಮಾತನಾಡುತ್ತಿಲ್ಲ. ಯಾಕೆಂದರೆ ಸುಳ್ಯ ದ ಜನರಿಗೆ ನಿಮ್ಮ ವಿಷಯ ಗೊತ್ತು ಮುಂದೆ ಬಂದು ಮಾತನಾಡಲು ಯಾರು ಎದುರು ಬರುತ್ತಿಲ್ಲ. ನಿಮ್ಮ ತರ ನಾವು ಕೂಡ ಫ್ಯಾಮಿಲಿ ಇರೋ ಅವರು ನಮಗೂ ಹೆಂಡತಿ ಮಕ್ಕಳು ಇದ್ದಾರೆ. ನಾವು ಕೂಡ 1ಕೆಜಿ ಅಕ್ಕಿ ಗೆ ಈ ತರ ಕಷ್ಟ ಪಟ್ಟು, ಹೆಂಡತಿಯ ಒಡವೆ ಯನ್ನು ಬ್ಯಾಂಕ್ ನಲ್ಲಿ ಇಟ್ಟು ಸಾಲ ಮಾಡಿ ವ್ಯವಹಾರ ಮಾಡುತ್ತಿದ್ದೇವೆ. ದಯಾ ಮಾಡಿ ನಮ್ಮಂತ ಸಾಮಾನ್ಯರ ಹೊಟ್ಟೆಗೆ ಕಲ್ಲು ಹಾಕೋಕ್ಕೆ ಬರಬೇಡಿ. ಸುಳ್ಯ ದ ನಮ್ಮ ಹೆಮ್ಮೆಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಅವರೇ ನಿಮ್ಮ ಮೇಲೆ ನಮಗೆ ಹೆಮ್ಮೆ ಇದೆ ಲಂಚ ಮುಕ್ತ ಅಧಿಕಾರಿ ಎಂದರೆ ನಿಮ್ಮ ಹೆಸರು ಹೇಳೋಕ್ಕೆ ಇಷ್ಟ ಪಡುತ್ತೇವೆ. ನೋಡಿ ಮೇಡಂ ಗಾಂಧಿನಗರದಲ್ಲಿ ಗೋಪಿಕಾ ಬಿಲ್ಡಿಂಡ್ ನಲ್ಲಿ ಮೋರ್ ಸೂಪರ್ ಮಾರ್ಕೆಟ್ ನ ಮೇಲೆ ಅಕ್ರಮ ವಾಗಿ ಕಟ್ಟಡ ಕಟ್ಟುತ್ತಿದ್ದಾರೆ. ಲಂಚ ಪಡೆದು ಅನುಮತಿ ನೀಡದಿದ್ದಾರೆ. ಸರಕಾರಿ ಹಾಸ್ಪಿಟಲ್ ನ ಬಳಿಗೆ ಬರುವ ರೋಗಿ ಗಳಿಗೆ ಉಪಯೋಗ ಆಗಲಿ ಎಂದು ಅಂಗವಿಕಲರಿಗೆ ಮೀಸಲಾತಿ ಗೊಂಡ ಉಪಯೋಗ ಆಗಲಿ ಎಂದು ಕ್ಯಾಂಟೀನ್ ನಡೆಸಲು ಕೊಟ್ಟ ರೂಮ್ ಅನ್ನು ಸುಳ್ಯ ದ ಬಿಜೆಪಿ ನಾಯಕ ಅಂಗವಿಕಲರ ಹೆಸರಿ ನಲ್ಲಿ ಪಡೆದು ಅಧಿಕ ಬಾಡಿಗೆ ನೀಡುತ್ತಿದ್ದರೆ
ಈ ಕುರಿತು ತನಿಖೆ ನಡೆಸಿ ಅದು ಬಿಟ್ಟು ಜನ ಸಾಮಾನ್ಯ ರಾದ ನಾವು ವ್ಯಾಪಾರ ಇಲ್ಲದೆ ನರಕ ಅನುಭವಿಸುತ್ತಿದ್ದೇವೆ
ಆದರೆ ಇಂತ ಅಧಿಕಾರಿ ಅವರನ್ನು ಸುಳ್ಯ ದಿಂದ ಅತೀ ಬೇಗ ಕಳುಹಿಸಿ ಎಂದು ಬೇಸರ ದಿಂದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಸರ್ ರವರ ಜೊತೆ ಕೇಳಿಕೊಳ್ಳುತ್ತೇವೆ ಎಂದು ಜಾಲತಾಣದಲ್ಲಿ ಅಳಲನ್ನು ತೋಡಿದ್ದಾರೆ.

ಈ ಬಗ್ಗೆ ಅಮರ ಸುದ್ದಿಗೆ ಎಂ.ಆರ್.ಸ್ವಾಮಿ‌ ಪ್ರತಿಕ್ರಿಯೆ ನೀಡಿದ್ದು “ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ಫೈನ್ ಹಾಕಲಾಗಿದೆ. 2 ಗಂಟೆ ನಂತರ ಕರ್ಫ್ಯೂ ಇದ್ದರೂ ಒಪನ್ ಮಾಡಿದ್ದ 7 ಅಂಗಡಿಗಳಿಗೆ 500,1000,2000 ಫೈನ್ ಹಾಕಿದ್ದೇವೆ. ಇದಕ್ಕೆ ಸಂಬಂಧಿಸಿ ರಸೀದಿಯನ್ನು ನೀಡಲಾಗಿದೆ ಎಂದಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!