Ad Widget

ಸಂಪಾಜೆ : ಬೈಲೆ – ಶಿರಾಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ

ಸಂಪಾಜೆ ಗ್ರಾಮದ ಬೈಲೆ ಶಿರಾಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ ಜು.8 ರಂದು ನಡೆಯಿತು.ತೆಕ್ಕಿಲ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಉಪಾಧ್ಯಾಯರಾದ ದಾಮೋದರ ಮಾಸ್ಟರ್ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಗ್ರಾ.ಪಂ. ಉಪಾಧ್ಯಕ್ಸರಾದ ಲಿಸ್ಸಿ ಮೊನಾಲಿಸಾ, ಗ್ರಾ. ಪಂ. ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ,...

ಐಸಾಕ್ ಸುಳ್ಯಕೋಡಿ ನಿಧನ

ಸಂಪಾಜೆ ಗ್ರಾಮದ ಸುಳ್ಯಕೋಡಿ ನಿವಾಸಿ ಐಸಾಕ್ (72) ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು .ಮೃತರು ಪತ್ನಿ, ಪುತ್ರ ಮಾಜಿ ಗ್ರಾ. ಪಂ.ಸದಸ್ಯ ಲೂಕಾಸ್. ಟಿ. ಐ. ಪುತ್ರಿಯರಾದ ಪ್ರಮೀಳಾ, ಹಾಗೂ ಮಿನಿ ಮತ್ತು ಬಂಧುಗಳನ್ನು ಅಗಲಿದ್ದಾರೆ
Ad Widget

ಗುತ್ತಿಗಾರು : ವಿಶ್ವ ಜನಸಂಖ್ಯಾ ದಿನಾಚರಣೆ

ಗುತ್ತಿಗಾರು ಪ್ರಾ.ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಚೈತ್ರಭಾನು, ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.

ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ಸ್ಮೃತಿ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇದರ ಸಂಸ್ಥಾಪಕರಾದ ನೆಟ್ಟಾರು ವೆಂಕಟಸುಬ್ಬರಾವ್ ಇವರ ಸ್ಮೃತಿ ದಿನಾಚರಣೆಯನ್ನು ಜು.7ರಂದು ಕೋವಿಡ್ ನಿಯಮಗಳನ್ನು ಅನುಸರಿಸಿ ಸರಳವಾಗಿ ಆಚರಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನೆಟ್ಟಾರು ವೆಂಕಟ್ರಮಣ ಭಟ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಐದು ದಶಕಗಳ ಹಿಂದೆ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಲಭಿಸುವಂತೆ ಮಾಡಿದ ಮಹಾಚೇತನ ವೆಂಕಟಸುಬ್ಬರಾವ್ ಸ್ಮರಣೀಯರಾಗಿದ್ದಾರೆ ಎಂದರು. ಶಾಲಾ...

ಡಿವಿಗೆ ಕೋಕ್ – ಶೋಭಗೆ ಲಕ್ : ಕೇಂದ್ರ ಸಚಿವೆಯಾಗಲಿದ್ದಾರೆ ಶೋಭ ಕರಂದ್ಲಾಜೆ

ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ ರಾಜೀನಾಮೆ‌ ನೀಡಿದ್ದು ಶೋಭ ಕರಂದ್ಲಾಜೆಯವರಿಗೆ ಕೇಂದ್ರ ಸಚಿವ ಸ್ಥಾನ ದೊರೆಯಲಿದೆ. ನರೇಂದ್ರ ಮೋದಿ‌ ನೇತೃತ್ವದ ಸಚಿವ ಸಂಪುಟ ಪುನರ್ ರಚನೆ ಹಿನ್ನೆಲೆಯಲ್ಲಿ ಕೆಲವು ಹೊಸಮುಖಗಳಿಗೆ ಮಣೆ ಹಾಕಲಾಗಿದೆ. ಸಚಿವ ಸಂಪುಟದಿಂದ ಕೈ ಬಿಡುವವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ಬಂದ ಹಿನ್ನೆಲೆಯಲ್ಲಿ ಸದಾನಂದ ಗೌಡರವರು‌ ಸಚಿವ ಸಂಪುಟ...

ಪೆಟ್ರೋಲ್ ಬೆಲೆ ಏರಿಕೆಯಿಂದ ಜನಸಾಮಾನ್ಯ ಹೈರಾಣು- ಪಿಸಿ ಜಯರಾಮ್

ಸುಳ್ಯ: ಪೆಟ್ರೋಲ್ ಹಾಗೂ ಡಿಸೇಲ್ ದರ ಪ್ರತಿನಿತ್ಯ ಏರಿಕೆಯಾಗುತ್ತಿದೆ. ಜೊತೆಗೆ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು ಜನ ಸಾಮಾನ್ಯರಿಗೆ ಬದುಕಲು ಕಷ್ಟವಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಅವರು ಹೇಳಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಸುಳ್ಯದಲ್ಲಿ ನಡೆದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುಳ್ಯದ ಓಡಬಾಯಿ-...

ಪೆಟ್ರೋಲ್ ಬೆಲೆ ಏರಿಕೆಯಿಂದ ಜನಸಾಮಾನ್ಯ ಹೈರಾಣು- ಪಿಸಿ ಜಯರಾಮ

ಸುಳ್ಯ: ಪೆಟ್ರೋಲ್ ಹಾಗೂ ಡಿಸೇಲ್ ದರ ಪ್ರತಿನಿತ್ಯ ಏರಿಕೆಯಾಗುತ್ತಿದೆ. ಜೊತೆಗೆ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು ಜನ ಸಾಮಾನ್ಯರಿಗೆ ಬದುಕಲು ಕಷ್ಟವಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಅವರು ಹೇಳಿದರು. ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಸುಳ್ಯದಲ್ಲಿ ಜು.೭ ರಂದು ನಡೆದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು....

ಬಾಲ್ಯದ ಜೀವನ

ಪುಟ್ಟ-ಪುಟ್ಟ ಮನಸುಗಳು,ಚಿಕ್ಕ-ಪುಟ್ಟ ಕನಸುಗಳು…ಬಾಲ್ಯದ ಜೀವನ ಎಷ್ಟೊಂದು ಚಂದ…ಬದುಕಿನ ತುಂಟಾಟ, ಗೆಳೆಯರ ಒಡನಾಟ…ಬಾಲ್ಯದ ಬದುಕಿನ ಆ ದಿನಗಳು,ಎಂದೂ ಮರೆಯದ ಆ ಕ್ಷಣಗಳು… ಅರಿಯದ ವಯಸ್ಸಿನಲ್ಲಿ, ತಿಳಿಯದ ಮನಸ್ಸಿನಲ್ಲಿಕಳೆದುಹೋದದ್ದೇ ಬಾಲ್ಯ….ಮರಳಿ ಬಾರದು ಆ ಬಾಲ್ಯ…ಸುಂದರ ದಿನಗಳಸವಿ-ಸವಿ ನೆನಪುಗಳ,ಎಂದೂ ಸವೆಯದ ಆ ಪಯಣ…ಬಾಲ್ಯದ ಬದುಕಿನ ಆ ಪಯಣ… ಶಾಲೆಯ ಮೊದಲ ದಿನ, ಗುರುಗಳ ಕಂಡ ಕ್ಷಣಮನದಲ್ಲಿ ಏನೋ ಒಂದು ಅಳುಕು…ದಿನಗಳು...

ಅರಂತೋಡು : ಹೃದಯಾಘಾತದಿಂದ ಯುವಕ ಮೃತ್ಯು

ಅರಂತೋಡು ಗ್ರಾಮದ ಓಟೆಡ್ಕ ದಿ. ವೆಂಕಟ್ರಮಣ ಗೌಡರ ಪುತ್ರ ಯತೀಶ್ ( ಗುರು) ಹೃದಯಾಘಾತದಿಂದ ಜು.6 ರಂದು ನಿಧನರಾದರು. ಅವರಿಗೆ 26 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಹಾಲೆಮಜಲು : ಯುವಕ ನೇಣುಬಿಗಿದು ಆತ್ಮಹತ್ಯೆ

ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿ ನಿವಾಸಿ ವಿನಯ್ ಬಾಳಿಲ (ಕುಕ್ಕುತ್ತಡಿ) ಅವರು ಕಳೆದ ರಾತ್ರಿ ಮನೆ ಸಮೀಪದ ಮರವೊಂದಕ್ಕೆ ಜು.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. 6 ತಿಂಗಳ ಹಿಂದೆ ವಿವಾಹವಾಗಿದ್ದ ಇವರು ಪತ್ನಿ, ತಂದೆ ಬ‍ಾಬು ಗೌಡ, ತಾಯಿ ಚಂದ್ರಾವತಿ, ಸಹೋದರ ಸುರೇಶ, ಸಹೋದರಿ ಶ್ರೀಮತಿ ನವೀನ...
Loading posts...

All posts loaded

No more posts

error: Content is protected !!