Ad Widget

ಅಮಲೇರಿದ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

ವ್ಯಕ್ತಿಯೋರ್ವ ಅಮಲೇರಿ ಕಾರು ಚಲಾಯಿಸಿದ ಪರಿಣಾಮ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಇನ್ನೊಂದು ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ರಸ್ತೆಯ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಜು. 30 ರಂದು ನಡೆದಿದೆ. ಸುಳ್ಯದಿಂದ ಜಾಲ್ಸೂರು ಕಡೆಗೆ ತೆರಳುತ್ತಿದ್ದ ಪೇರಾಲಿನ ಹುಕ್ರಪ್ಪ ಗೌಡ ಎಂಬವರ ಮಗ ಮಂಜುನಾಥ್ ಚಲಾಯಿಸುತ್ತಿದ್ದ ಮಾರುತಿ...

ಚೊಕ್ಕಾಡಿ ಎಜುಕೇಷನ್ ಸೊಸೈಟಿ ಪುನರ್ ರಚನೆ -ಅಧ್ಯಕ್ಷರಾಗಿ ಎಸ್. ಅಂಗಾರ, ಸಂಚಾಲಕರಾಗಿ ರಾಧಾಕೃಷ್ಣ ಬೊಳ್ಳೂರು ಆಯ್ಕೆ

ಚೊಕ್ಕಾಡಿ ಪ್ರೌಢಶಾಲೆ ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಚೊಕ್ಕಾಡಿ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಸಚಿವರೂ ಆಗಿರುವ ಶಾಸಕ ಎಸ್. ಅಂಗಾರ ಹಾಗೂ ಸಂಚಾಲಕರಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಆಯ್ಕೆಯಾಗಿದ್ದಾರೆ. ಜುಲೈ 27 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪುನರ್ ರಚನೆ...
Ad Widget

ಸುಳ್ಯ : ವಿಷ ಸೇವಿಸಿ ಕೆ.ಎಫ್.ಡಿ.ಸಿ ಉದ್ಯೋಗಿ ಆತ್ಮಹತ್ಯೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸುಳ್ಯ ವಿಭಾಗದ ಫಾರೆಸ್ಟರ್ ಉಮೇಶ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಕಳೆದ ಶನಿವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೂ ಕರೆದೊಯ್ಯಲಾಯಿತಾದರೂ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಕೌಟುಂಬಿಕ...

ಬೆಳ್ಳಾರೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದೇವಿ ಹೈಟ್ಸ್‌ನ ಅನುಗ್ರಹ ಸಭಾಂಗಣದಲ್ಲಿ ಜು.28 ರಂದು ನಡೆಯಿತು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಶುಭಹಾರೈಸಿದರು. ನೂತನ ಅಧ್ಯಕ್ಷರಾಗಿ ಪದ್ಮನಾಭ ಬೀಡು, ಕಾರ್ಯದರ್ಶಿ ಕೆ.ವಿನಯಕುಮಾರ್, ಸರ್ಜೆಂಟ್ ಆರ್ಮ್ ರಾಜಗೋಪಾಲ, ನಿಕಟಪೂರ್ವಾಧ್ಯಕ್ಷ ಮೋನಪ್ಪ ಗೌಡ...

ಸಂಪಾಜೆ : ಗ್ರಾಮದ ಸಮಸ್ಯೆಯ ಬಗ್ಗೆ ಸಹಾಯಕ ಕಮೀಷನರ್ ನೇತ್ರತ್ವದಲ್ಲಿ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ಅವರ ನೇತೃತ್ವದಲ್ಲಿ ಅಧ್ಯಕ್ಷತೆಯಲ್ಲಿ ಸಂಪಾಜೆ ಗ್ರಾಮದ ಸಮಸ್ಯೆ ಬಗ್ಗೆ ಸಭೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ಗ್ರಾಮದ ಸಮಸ್ಯೆಗಳ ಸಂಪೂರ್ಣ ವಿವರ ನೀಡಿದರು. ಸಹಾಯಕ ಕಮಿಷನರ್ ಪ್ಲಾಟಿಂಗ್ ಸಮಸ್ಯೆ ಬಗ್ಗೆ ಪ್ರತಿ ಸರ್ವೆ ನಂಬರ್ ಮಾಹಿತಿ ಪಡೆದು, ಜಂಟಿ ಸರ್ವೆ...

ಗುತ್ತಿಗಾರು : ಲೋಕಾರ್ಪಣೆಗೆ ಸಿದ್ದವಾದ ವಿದ್ಯುತ್ ಸಬ್ ಸ್ಟೇಷನ್

ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ 33/11 ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಶೀಘ್ರ ಕಾರ್ಯಾರಂಭಗೊಳ್ಳಲಿದೆ. ಇದರಿಂದ ಈ ಭಾಗದ ಕೃಷಿಕರ,ವರ್ತಕರ, ಕಿರು ಇಂಡಸ್ಟ್ರಿಗಳ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಯಶಸ್ವಿಯಾಗಿ ನಡೆದ “ಅರೆಭಾಷೆ ಪದ್ಯ ಕವನಗಳ ಗಮ್ಮತ್” ಆನ್ ಲೈನ್ ಕಾರ್ಯಕ್ರಮ

ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಸಾರಥ್ಯದಲ್ಲಿ ಕಲಾಮಾಯೆ(ರಿ.) ಏನೆಕಲ್, ನೆಗೆ ನೆನ್ನೆಕ್ಕಿ ತಂಡ ಪ್ರಸ್ತುತ ಪಡಿಸಿದ ಅಮರ ಸುಳ್ಯ ಸುದ್ದಿ ಮತ್ತು ಸೋಲಾರ್ ಪಾಯಿಂಟ್ ನಿಂತಿಕಲ್ಲು ಸಹಕಾರದೊಂದಿಗೆ ಸೀನಿಯರ್ ಟಿವಿ ಆನ್ಲೈನ್ "ಅರೆಭಾಷೆ ಪದ್ಯ ಕವನಗಳ ಗಮ್ಮತ್" ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ನಡೆಯಿತು.ಇದು ಕೇವಲ ಸ್ಪರ್ದೆಯಾಗಿ ನಡೆಸದೆ ಬರಹಗಾರರಿಗೆ, ಓದುಗರಿಗೆ, ಕೇಳುಗರಿಗೆ ಒಂದು...

ಬೆಳ್ಳಾರೆ – ಮೊಗ್ರ- ಗುತ್ತಿಗಾರು 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ನೀಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸಲು ಮೆಸ್ಕಾಂ ಸೂಚನೆ

ಗುತ್ತಿಗಾರು ಗ್ರಾಮದ ಮೊಗ್ರ ಎಂಬಲ್ಲಿ ಹೊಸದಾಗಿ ನಿರ್ಮಿಸಲಾದ 33/11 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡಲು ಬೆಳ್ಳಾರೆಯಲ್ಲಿ ಹಾಲಿ ಇರುವ ವಿದ್ಯುತ್ ವಿತರಣಾ ಕೇಂದ್ರದಿಂದ ನೂತನವಾಗಿ ರಚಿಸಲಾದ 5 ಕಿ.ಮೀ. ಭೂಗತ ಕೇಬಲ್ ಹಾಗೂ 17.1 ಕಿ.ಮೀ. ಓವರ್ ಹೆಡ್ ಮಾರ್ಗದಲ್ಲಿ ಜುಲೈ 30 ರಂದು ವಿದ್ಯುತ್ ಸಂಪರ್ಕ ನೀಡಲಾಗುವುದು .ನೆಟ್ಟಾರಿನಿಂದ ಬೆಳ್ಳಾರೆ,...

ಪತ್ರಕರ್ತರಿಗೆ ಸವಾಲುಗಳು ಬಂದಾಗ ಜನತೆ ಅವರ ಬೆಂಬಲಕ್ಕೆ ನಿಲ್ಲಬೇಕು : ಮಹೇಶ್ ಪುಚ್ಚಪ್ಪಾಡಿ

ಪತ್ರಕರ್ತರು ಉತ್ತಮ ಕೆಲಸ ಮಾಡಿದಾಗ ಹಲವಾರು ಸವಾಲುಗಳು ಎದುರಾಗುತ್ತವೆ.ಅವುಗಳನ್ನು ಎದುರಿಸಿ ಮುನ್ನಡೆಯಲು ಪತ್ರಕರ್ತರಿಗೆ ಸಮಾಜದ ಬೆಂಬಲ ಬೇಕಾಗಿದೆ ಎಂದು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹೇಳಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಗಮಯೂರಿ ಕಲಾಶಾಲೆಯ ಸಭಾಭವನದಲ್ಲಿ ಜು.29ರಂದು ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು. ಮಾಧ್ಯಮ ಕ್ಷೇತ್ರವನ್ನು ಪ್ರಜಾ ಪ್ರಭುತ್ವದ...

ಅಕ್ರಮ ಮರ ಸಾಗಾಟ – ಇಬ್ಬರ ಬಂಧನ, ಮರ ವಶ

ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನುಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ. ಮರದ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳಾದ ಕಾಂಞಗಾಡ್ ಕುರಿಚಿಯಲ್ ನಿವಾಸಿ ಪಿ.ದನೇಶ್(28) ಹಾಗೂ ಕಣ್ಣೂರು ನಿವಾಸಿ ಎಂ.ರಾಹುಲ್(26) ಎಂಬುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಅಚ್ಚು (ಅಶ್ರಫ್) ವಿರಾಜಪೇಟೆಯ ನಿವಾಸಿಯಾಗಿದ್ದು,...
Loading posts...

All posts loaded

No more posts

error: Content is protected !!