- Thursday
- October 31st, 2024
ಮೆಸ್ಕಾಂ ಕಛೇರಿ ಎದುರು ನಗರ ಪಂಚಾಯತ್ ವತಿಯಿಂದ ಇಂಟರ್ ಲಾಕ್ ಅಳವಡಿಸಲಾಗಿದ್ದು ಅಲ್ಲಿರುವ ವಿದ್ಯುತ್ ಕಂಬ ತೆಗೆಯದೇ ಇಂಟರ್ ಲಾಕ್ ಅಳವಡಿಸಿದ್ದಾರೆ. ಇಲ್ಲಿ ರಸ್ತೆ ತಿರುವಿನಿಂದ ಕೂಡಿದ್ದು ಎಚ್ಚರ ತಪ್ಪಿದರೆ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಲು ಸ್ಥಳೀಯಾಡಳಿತ ಹಾಗೂ ಮೆಸ್ಕಾಂ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗುತ್ತಿಗಾರು ಭಾಗದಲ್ಲಿ ಅಂಬ್ಯುಲೆನ್ಸ್ ಇಲ್ಲದೇ ತುರ್ತು ಸೇವೆಗಳಿಗೆ ಪರದಾಡುವಂತ ಸ್ಥಿತಿ ಇತ್ತು. ಇದೀಗ ಖಾಸಗಿಯವರು ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ. ಶಿವ ಆಂಬ್ಯುಲೆನ್ಸ್ ಸೇವೆಆರಂಭವಾಗಿದ್ದು, ಗುತ್ತಿಗಾರು ಪೇಟೆಯ ಜೀಪು ಸ್ಟಾಂಡ್ ಬಳಿ ಈ ಆಂಬ್ಯುಲೆನ್ಸ್ ಇರಲಿದ್ದು ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿಈ ನಂಬರ್ ಗಳನ್ನು 9481327944, 6360251248ಸಂಪರ್ಕಿಸಲು ಕೋರಲಾಗಿದೆ.
ಅಚ್ರಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಾದ ಸುಳ್ಯದ ಸೀ ಫುಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮಂಗಳೂರಿನ 4 ಹೆಚ್ ಟ್ರಸ್ಟ್ ವತಿಯಿಂದ ಬ್ಯಾಗ್,ಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.ಈ ಕಾರ್ಯಕ್ರಮದಲ್ಲಿ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಹರೀಶ್ ಕಡಪಳ, ಉಪಾಧ್ಯಕ್ಷರಾದ ಜಯಶ್ರೀ, ಮುಖ್ಯಶಿಕ್ಷಕಿ ಶ್ರೀಮತಿ ಶ್ವೇತಾ, ಸಹಶಿಕ್ಷಕರಾದ ಚಿನ್ನಸ್ವಾಮಿ, ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಅಚ್ರಪ್ಪಾಡಿ...
ಪಂಜ ಹೋಬಳಿ ನಾಡ ಕಛೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಜು.19 ರಂದು ಸಚಿವ ಎಸ್ ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಕಂದಾಯ ನಿರೀಕ್ಷಕ ಎಂ ಎಲ್ ಶಂಕರ, ಡಾ. ರಾಮಯ್ಯ ಭಟ್ , ಶಿವರಾಮಯ್ಯ ಕರ್ಮಜೆ ,ತಾಲೂಕು ಪಂಚಾಯತ್ ಮಾಜಿ ಸದಸ್ಯ...
ಮರ್ಕಂಜದ ಬಿಎಸ್ಎನ್ಎಲ್ ಕೇಂದ್ರವು ಕಳೆದ ಕೆಲವು ವರ್ಷಗಳಿಂದ ಸ್ವಚ್ಚಗೊಳಿಸದೆ ಅರಣ್ಯ ಪ್ರದೇಶದ ಮಧ್ಯೆ ಇದ್ದಂತ್ತಿತ್ತು. ಇದನ್ನು ಮರ್ಕಂಜ ಗ್ರಾ.ಪಂ. ಸದಸ್ಯರಾದ ರಾಜೇಂದ್ರ ಕೊಚ್ಚಿ ನೇತೃತ್ವದಲ್ಲಿ ಸ್ವಚ್ಚಗೊಳಿಸಲಾಯಿತು. ಈ ಸಂದರ್ಭದಲ್ಲಿ ಡಿಲ್ಲಿಕುಮಾರ ಕಾಯರ,ಪುಂಡರೀಕ ನಾಯಕ್ ಗೂಡಂಬೆ,ಚೆನ್ನಕೇಶವ ದೋಳ,ಯತೀಶ್ ಕಂಜಿಪಿಲಿ,ಹರೀಶ್ ಕಾಯಿಪಳ್ಳ,ಗಗನ್ ಅಲ್ಪೆ,ಸೋಮಶೇಖರ್ ಅಡಿಗೈ ದೋಳ ಮೊದಲಾದವರು ಬೆಳೆದಿದ್ದ ಗಿಡ ಗಂಟೆ ಕಡಿದು ಸ್ವಚ್ಚ ಮಾಡಿದರು. ಗಿರಿಜಾ ಅಡಿಗೈ...
ಗುತ್ತಿಗಾರು : ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದಿನಿಂದ ಆರಂಭಗೊಂಡಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಮುನ್ನೆಚ್ಚರಿಕೆಯ ವ್ಯವಸ್ಥೆಗಳೊಂದಿಗೆ ಆರಂಭಗೊಂಡಿದೆ. ಗುತ್ತಿಗಾರು ಸ.ಪ.ಪೂ ಕಾಲೇಜಿನ ಪರೀಕ್ಷಾ ಕೊಠಡಿಗಳ ಸ್ಯಾನಿಟೈಷಿಂಗ್ ಮಾಡಿ ಪ್ರತಿ ವಿದ್ಯಾರ್ಥಿಗಳ ಟೆಂಪರೇಷರ್ ಪರೀಕ್ಷಿಸಿ,ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಯಿತು.
ಸವಣೂರಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡೀಲು ಬಿದ್ದಿದ್ದು, ಸವಣೂರಿನ ಸಮಾನ ಮನಸ್ಕ ಯುವಕರ ತಂಡ ಅಂಬಾ ಬ್ರದರ್ಸ್ ಇದರ ವತಿಯಿಂದ ಈ ಗದ್ದೆಯಲ್ಲಿ ಈ ಬಾರಿ ಬೇಸಾಯ ಆರಂಭವಾಗಿದೆ.ಅಂಬಾ ಬ್ರದರ್ಸ್ ತಂಡವು ಈಗಾಗಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಬೇಸಾಯಕ್ಕೆ ಮುಂದಾಗಿದ್ದು ಈ...