ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ಸ್ಮೃತಿ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇದರ ಸಂಸ್ಥಾಪಕರಾದ ನೆಟ್ಟಾರು ವೆಂಕಟಸುಬ್ಬರಾವ್ ಇವರ ಸ್ಮೃತಿ ದಿನಾಚರಣೆಯನ್ನು ಜು.7ರಂದು ಕೋವಿಡ್ ನಿಯಮಗಳನ್ನು ಅನುಸರಿಸಿ ಸರಳವಾಗಿ ಆಚರಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನೆಟ್ಟಾರು ವೆಂಕಟ್ರಮಣ ಭಟ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಐದು ದಶಕಗಳ ಹಿಂದೆ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಲಭಿಸುವಂತೆ ಮಾಡಿದ ಮಹಾಚೇತನ ವೆಂಕಟಸುಬ್ಬರಾವ್ ಸ್ಮರಣೀಯರಾಗಿದ್ದಾರೆ ಎಂದರು. ಶಾಲಾ ಸಂಚಾಲಕರಾದ ಎನ್ ವಿಷ್ಣುಭಟ್ ಮತ್ತು ಕೋಶಾಧಿಕಾರಿಗಳಾದ ಸತೀಶ ನೆಟ್ಟಾರು, ಪ್ರೌಢಶಾಲಾ ಸಿಬ್ಬಂದಿವರ್ಗ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು, ಅಂಗನವಾಡಿ ಶಿಕ್ಷಕಿ ಮತ್ತಿತರರು ಉಪಸ್ಥಿತರಾಗಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು. ಮುಖ್ಯೋಪಾಧ್ಯಾಯರಾದ ಯಶೋಧರ ನಾರಾಲು ಸ್ವಾಗತಿಸಿದರು. ಸಂಸ್ಕೃತ ಶಿಕ್ಷಕ ವೆಂಕಟೇಶ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದಗಳನ್ನಿತ್ತರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading