- Thursday
- October 31st, 2024
ನಾಲ್ಕೂರು 1ನೇ ವಾರ್ಡ್ ನಡುಗಲ್ಲು ಭಾಗದ ಕಲ್ಲಾಜೆ, ಅಂಬೆಕಲ್ಲು, ಎರ್ದಡ್ಕ, ಅಂಜೇರಿ, ಕಾಯರ್ ಮುಗೆರ್, ಮರಕತ, ಇಜ್ಜಿನಡ್ಕ, ಚಾರ್ಮತ ಭಾಗದ ರಸ್ತೆಗಳು ವಿಪರೀತ ಮಳೆಯಿಂದ ಕೆಸರಾಗಿದ್ದರಿಂದ ಸಂಚಾರಕ್ಕೆ ಕಷ್ಟವಾಗುತ್ತಿತ್ತು. ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಜು.27 ರಂದು ಗ್ರಾಮಸ್ಥರ ಸಹಕಾರದೊಂದಿಗೆ ಶ್ರಮದಾನವನ್ನು ಮಾಡಲಾಯಿತು. ✍ವರದಿ :- ಉಲ್ಲಾಸ್ ಕಜ್ಜೋಡಿ
ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಬುಲೆರೋ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಪೆರಾಜೆ ಬಂಗಾರಕೋಡಿಯ ಗೋಪಾಲ ಕಜೆಮೂಲೆಯವರು ರಸ್ತೆ ದಾಟುತ್ತಿದ್ದ ವೇಳೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಅದೇ ಬೊಲೆರೋದಲ್ಲಿ ಸರಕಾರಿ ಆಸ್ಪತ್ರೆಗೆ ತಂದು ಮಂಗಳೂರಿನ ಕೆ.ಎಸ್.ಹೆಗ್ಡೆ...
ಅಧಿಕಾರಿಗಳ ಬೇಜವಾಬ್ದಾರಿಯಿಂದ ನೀರಿನ ಬಿಲ್ ಅನ್ನು ಹಲವು ವರ್ಷಗಳಾದರೂ ನ.ಪಂ. ನಿಂದ ವಸೂಲಿ ಮಾಡಲು ಸಾಧ್ಯವಾಗಿಲ್ಲ. ೧.೫ ಕೋಟಿ ನೀರಿನ ಬಿಲ್ ಸೇರಿದಂತೆ ಹಲವು ಬಿಲ್‌ಗಳು ವಸೂಲಿಯಾಗಲು ಬಾಕಿಯಿದೆ. ಇನ್ನು ಒಂದು ತಿಂಗಳೊಳಗೆ ಬಿಲ್ ವಸೂಲಾತಿಯಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಎಚ್ಚರಿಕೆ ನೀಡಿದರು.ಸುಳ್ಯ ನ.ಪಂ. ಸಾಮಾನ್ಯ...
ಸುಳ್ಯ ಬಿಜೆಪಿ ಯುವ ಮೋರ್ಚಾದ ಪ್ರಭಾರಿಗಳಾದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಸುಧಾಕರ್ ಧರ್ಮಸ್ಥಳ ನಮ್ಮ ಸುಳ್ಯ ಮಂಡಲಕ್ಕೆ ಜು.29 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಸುಳ್ಯ ಮಂಡಲ ಯುವಮೋರ್ಚಾ ಪ್ರಭಾರಿಗಳಾದ ಶಿವಾನಂದ ಕುಕ್ಕುಂಬಳ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕಿಶನ್...
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸಭೆಯು ಜು.28 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ಅದ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಕೃಷಿ-ಬೆಳೆಗಳ ಸಮಸ್ಯೆ(ಹಳದಿರೋಗ) ಪರಿಹಾರದ ಚರ್ಚೆ, ಅರಣ್ಯ ಕಾನೂನು-ರೈತರ ಸಮಸ್ಯೆಗಳ ಪರಿಹಾರ ಮತ್ತು ಪ್ರತೀ ಗ್ರಾಮ ಬೇಟಿ ಮಾಡಿ ಜನಜಾಗೃತಿ ಮೂಡಿಸುವುದು ಹಾಗೂ ಇತರ...
ಸಾಹಿತಿ, ಕಿರಣ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೋಳಿಕೆ ಮತ್ತು ಸರ್ವೇಯರ್ ಜಯಶ್ರೀ ವೈ. ಹೊಸೋಳಿಕೆ ಯವರ ಪುತ್ರ ವಿದ್ವತ್.ವೈ. ಹೊಸೋಳಿಕೆ ಯವರ ಪ್ರಥಮ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಸಂಪ್ರದಾಯದಂತೆ ದೀಪ ಉರಿಸಿ, ಮಗುವಿಗೆ ಆರತಿ ಎತ್ತಿ, ಸೋಬಾನೆ ಹಾಡಿನೊಂದಿಗೆ ಆಚರಿಸಲಾಯಿತು. ಪ್ರಥಮ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಕುಟುಂಬಸ್ಥರು, ಊರಿನವರು ಭಾಗವಹಿಸಿದ್ದರು. ಯೋಗೀಶ್ ಹೊಸೋಳಿಕೆ ಸ್ವಾಗತಿಸಿ,...