Ad Widget

ಕಳಂಜ ಗ್ರಾಮ ಪಂಚಾಯತ್ ಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಕಳಂಜ ಗ್ರಾಮ ಪಂಚಾಯತ್ ಗೆ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರದ ಅಂಗವಾಗಿ ಇಂದು ಕೋಟದಲ್ಲಿ ನಡೆಯುತ್ತಿರುವ ಹೊಳಪು ಕ್ರೀಡಾಕೂಟದಲ್ಲಿ 2021ನೇ ಸಾಲಿನ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸ್ವೀಕರಿಸಿದರು.

ಏನೆಕಲ್ಲು : ತಾ.ಪಂ.ಅನುದಾನದಿಂದ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಯೇನೆಕಲ್ಲು ಗ್ರಾಮದ ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ರಸ್ತೆಗೆ ಸುಬ್ರಹ್ಮಣ್ಯ ಕ್ಷೇತ್ರದ ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆಯವರ ರೂ 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ರಸ್ತೆಯನ್ನು ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆ ಇಂದು ಉದ್ಘಾಟಿಸಿದರು. ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ...
Ad Widget

ಮಾವಿನಕಟ್ಟೆ : ಮಹಿಳಾ ದಿನಾಚರಣೆ

ಗ್ರಾಮ ಪಂಚಾಯತ್ ದೇವಚಳ್ಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜ್ಯೋತಿ ಸ್ತ್ರೀ ಶಕ್ತಿ ಗೊಂಚಲು ಸಂಘದ ವತಿಯಿಂದ ಮಾ12 ರಂದು ಮಹಿಳಾ ದಿನಾಚರಣೆ ದೇವಚಳ್ಳ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಾ ದೇವ ವಹಿಸಿದ್ದರು. ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ರಶ್ಮಿ ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಪಯಸ್ವಿನಿ ಜೆಸಿ...

ಕೊಲ್ಲಮೊಗ್ರು : ದೊಡ್ಡಣ್ಣ ಶೆಟ್ಟಿ ಕೆರೆಯ ಹೂಳೆತ್ತುವ ಕಾರ್ಯಕ್ರಮ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ). ಧರ್ಮಸ್ಥಳ ಇದರ ಆರ್ಥಿಕ ಸಹಕಾರದೊಂದಿಗೆ ಕೊಲ್ಲಮೊಗ್ರು ಗ್ರಾಮಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ ಮಲ್ಲಾಜೆ, ಗೆಳೆಯರ ಬಳಗ ತಂಬಿನಡ್ಕ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು, ವಿಪತ್ತು ನಿರ್ವಹಣಾ ಸಮಿತಿ ಸುಬ್ರಹ್ಮಣ್ಯ ವಲಯ, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ...

ಮಡಪ್ಪಾಡಿ ಹಿ.ಪ್ರಾ. ಶಾಲೆಯಲ್ಲಿ ಬೀಳ್ಕೊಡುಗೆ – ಸನ್ಮಾನ ಕಾರ್ಯಕ್ರಮ

ಮಡಪ್ಪಾಡಿ ಹಿ.ಪ್ರಾ.ಶಾಲೆಯಿಂದ ಪದೋನ್ನತಿಗೊಂಡು ಏನೆಕಲ್ಲು ಪ್ರೌಢಶಾಲೆಗೆ ವರ್ಗಾವಣೆಗೊಂಡಿರುವ ದೀಪಾ ಕಠಾರೆಯವರಿಗೆ ಹಾಗೂ ಈ ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಗ್ರಾಮದ ಅತಿಥಿ ಶಿಕ್ಷಕರಿಗೆ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರುಗಳಿಗೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವು ಮಾ.11 ರಂದು ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗೇಶ ಕುಚ್ಚಾಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ...

ಇಲಿಪಾಷಾಣ ಸೇವಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿನಿ ಮೃತ್ಯು

ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನ ಆಸ್ಪತ್ರೆಯಲಿ ಮೃತಪಟ್ಟ ಘಟನೆ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಯಿಂದ ವರದಿಯಾಗಿದೆ.ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಈಶ್ವರ ಎಂಬವರ ಪುತ್ರಿ ಯಶಸ್ವಿ ಮೃತ ದುರ್ದೈವಿ ಈಕೆ ಕಳೆದ ಶುಕ್ರವಾರ ಅಂಗಡಿಯೊಂದರಿಂದ ಇಲಿಪಾಷಾಣ ಖರೀದಿಸಿ ಸೇವಿಸಿ ಶಾಲೆಗೆ ತೆರಳಿದ್ದಳೆನ್ನಲಾಗಿದೆ. ಶಾಲೆಯಲ್ಲಿ ವಾಂತಿ...

ಏನೆಕಲ್ಲು : ಹೈಮಾಸ್ಟ್ ಸೋಲಾರ್ ದೀಪ ಉದ್ಘಾಟನೆ

ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆಯ ದ್ವಾರದ ಬಳಿ ತಾ.ಪಂ‌. ಅನುದಾನದಲ್ಲಿ 1 ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ಹೈಮಾಸ್ಟ್ ದೀಪ ಉದ್ಘಾಟನೆ ಮಾ.12 ರಂದು ನಡೆಯಿತು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಇದರ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉದಯಕುಮಾರ್ ಬಾನಡ್ಕ, ರಾಧಾಕೃಷ್ಣ ಪೂಜಾರಿಮನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್...

ಜೇಸಿಐ ಸುಳ್ಯ ಸಿಟಿ ವತಿಯಿಂದ ಜೂನಿಯರ್ ಜೇಸೀ ಕಾರ್ಯಚಟುವಟಿಕೆಗಳ ಉದ್ಘಾಟನೆ

ಜೇಸಿಐ ಸುಳ್ಯ ಸಿಟಿಯ ವತಿಯಿಂದ ಘಟಕದ ಅವಿಭಾಜ್ಯ ಅಂಗವಾದ ಜೆಜೇಸಿಯ ದೈನಂದಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮವನ್ನು ಮಾ.11 ರಂದು ಮ್ಯಾಟ್ರಿಕ್ಸ್ ಎಜ್ಯುಕೇಷನ್ ಇನ್ಸ್ಟಿಟ್ಯೂಷನ್ ಸುಳ್ಯ ಇಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ವಲಯ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಪ್ರದೀಪ್ ಅವರು ನೆರವೇರಿಸಿದರು. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಜೇಸಿಯ ಅಧ್ಯಕ್ಷ ಪ್ರಜ್ವಲ್ ಎಸ್ ಐ ಅವರು ವಹಿಸಿದ್ದರು. ವೇದಿಕೆಯಲ್ಲಿ...

ಗುತ್ತಿಗಾರು : ಸಿದ್ಧಿದಾತ್ರಿ ಸಂಜೀವಿನಿ ಸ್ವಸಹಾಯ ಸಂಘ ಉದ್ಘಾಟನೆ – ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, ಕಾರ್ಯದರ್ಶಿ ಪವಿತ್ರ ತುಪ್ಪದಮನೆ

ಮಹಿಳೆಯರ ಸ್ವಾವಲಂಬನೆ ಯ ಪರಿಕಲ್ಪನೆಯ ಉದ್ದೇಶದಿಂದ ರೂಪಿತಗೊಂಡಿರುವ ಸಂಜೀವಿನಿ ಸ್ವಸಹಾಯ ಸಂಘ ಗ್ರಾಮೀಣ ಮಹಿಳೆಯರ ಆರ್ಥಿಕ ಬದುಕನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ  ಪ್ರತಿ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸ್ವ-ಉದ್ಯೋಗದ ಮೂಲಕ ಗ್ರಾಮೀಣ ಮಹಿಳೆಯರು ತಾವೆ ಸ್ವ ಪ್ರೇರಣೆ ಯಿಂದ ಗುಂಪಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಗುತ್ತಿಗಾರು ಸಿದ್ಧಿದಾತ್ರಿ ಸಂಜೀವಿನಿ...

ಏ.4 ರಂದು ಸಜ್ಜನ ಟ್ರೋಫಿ- 2021

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ.) ಇದರ ವತಿಯಿಂದ 30 ಗಜಗಳ ಮುಕ್ತ 24 ತಂಡಗಳ ಕ್ರಿಕೆಟ್ ಪಂದ್ಯಾಕೂಟ, ಸಜ್ಜನ ಟ್ರೋಫಿ-2021 ಏಪ್ರಿಲ್ 4 ರಂದು ನಡೆಯಲಿದೆ. ಸಜ್ಜನ ಟ್ರೋಫಿ- 2021 ಈ ಪಂದ್ಯಾಕೂಟವು ಟರ್ಲೀಸ್ ಕೆಟರಿಂಗ್ & ಈವೆಂಟ್ ಮೇನೇಜ್‌ಮೆಂಟ್ ಪ್ರಾಯೋಜಕತ್ವದಲ್ಲಿ ಸಜ್ಜನ ಪ್ರತಿಷ್ಠಾನ ಸಭಾಂಗಣ ಮೈದಾನ ಗೂನಡ್ಕದಲ್ಲಿ(ಸಂಪಾಜೆ) ನಡೆಯಲಿದೆ. ಪ್ರಥಮ ಬಹುಮಾನ 15,000/- ಹಾಗೂ...
Loading posts...

All posts loaded

No more posts

error: Content is protected !!