- Friday
- November 22nd, 2024
ನಿಂತಿಕಲ್ಲು ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ನಿಂತಿಕಲ್ಲಿನಲ್ಲೇ ಪ್ರಪ್ರಥಮ ಬಾರಿಗೆ 'ಲಕ್ಕೀ ಡ್ರಾ' ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದ್ದು, ಈ ಯೋಜನೆಯ ಪ್ರಥಮ ಲಕ್ಕೀ ಡ್ರಾ ವಿಜೇತರಾದ ಸುರೇಶ್ ದೇವರಗದ್ದೆ ಕೊಡಿಕಾಜೆಇವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನವನ್ನು ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ಹಾಗೂ ಬಿಪಿನ್ ಯೇನೆಕಲ್ಲು ಹಸ್ತಾಂತರಿಸಿದರು....
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ, ತಾಲೂಕಿನ ಎಲ್ಲಾ ಮಹಿಳಾ ಮಂಡಲಗಳು, ರೋಟರಿ ಕ್ಲಬ್ ಸುಳ್ಯ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾ. 21 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಮುಂಭಾಗದ ಜೆಓಸಿ ಗ್ರೌಂಡ್ ನಲ್ಲಿ ನಡೆಯಲಿದೆ. ಪಂದ್ಯಾಟದ ಉದ್ಘಾಟನೆಯನ್ನು ತಾ.ಪಂ.ಉಪಾಧ್ಯಕ್ಷೆ ಶ್ರೀಮತಿ...
ಸಂಪಾಜೆ ಶ್ರೀ ರಾಮಕೃಷ್ಣ ಭಜನಾ ಮಂದಿರಕ್ಕೆ, ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ನೀರಿನ ಟ್ಯಾಂಕ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಾಸುದೇವ ಕಟ್ಟೆಮನೆ, ಕಾರ್ಯದರ್ಶಿ ಶ್ರೀಮತಿ ಶುಭಾ ರವೀಂದ್ರ, ಲಯನ್ಸ್ ಸದಸ್ಯರಾದ ವೆಂಕಪ್ಪ ಬೊಳ್ಳೂರು, ಪಿ.ಬಿ. ಕಿಶೋರ್ , ಶ್ರೀ ವಿ.ಬಿ. ಪ್ರಶಾಂತ್, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ರೈ ಸಂಪಾಜೆ,...
ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷ ಜಿ. ಕೆ. ಹಮೀದ್ ರವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಿತಿ ಸಭೆ ಹಾಗೂ ಮನೆ ಮನೆಗೆ ಗಂಗೆ ಕಾರ್ಯಕ್ರಮದ ಬಗ್ಗೆ ವಿಶೇಷ ಗ್ರಾಮ ಸಭೆ ಮಾ.15 ರಂದು ನಡೆಯಿತು. ಅಧ್ಯಕ್ಷರಾದ ಜಿ. ಕೆ. ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಕುಡಿಯುವ ಬೇಡಿಕೆಯ ಬಗ್ಗೆ ಮಾಜಿ...
ಮೇನಾಲ ಅಭಿವೃದ್ಧಿ ಬಳಗ ಇದರ ವತಿಯಿಂದ ಕರಿಯಮೂಲೆಯಿಂದ ಮೇನಾಲ ಶಾಲಾ ವಠಾರದವರೆಗೆ ಮಾರ್ಗದ ಎರಡು ಬದಿಯಲ್ಲಿ ಕಾಡು ಕಡಿದು ಸ್ವಚ್ಛ ಮಾಡಲಾಯಿತು ಮತ್ತು ಮೇನಾಲ ಶಾಲೆಯ ತೆಂಗಿನ ಮರದ ಬುಡಕ್ಕೆ ಸೊಪ್ಪು ಹಾಕಿ ಶ್ರಮದಾನ ಮಾಡಲಾಯಿತು. ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಪ್ರಸಾದ್ ರೈ ಮೇನಾಲ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಸುಧೀರ್...
ಕೊಡಿಯಾಲ: ಇಲ್ಲಿನ ಸ್ನೇಹಿತರ ಬಳಗ (ರಿ )ಕಲ್ಪಡ ಇದರ ಸದಸ್ಯರಿಂದ ಕೊಡಿಯಾಲ ಗ್ರಾಮದ ಮೂವಪ್ಪೆ ಸ.ಕಿ.ಪ್ರಾ.ಶಾಲೆ ಕ್ರೀಡಾಂಗಣದಲ್ಲಿ ಶ್ರಮದಾನ ನಡೆಯಿತು.ಇವರೊಂದಿಗೆ ಶಾಲಾ ಎಸ್ ಡಿಎಂಸಿ ಸದಸ್ಯರು,ಶ್ರೀ ಕ್ಷೇತ್ರ ಧ.ಗ್ರಾ.ಯೋ.ಜ್ಞಾನವಿಕಾಸ ಕೇಂದ್ರ ಹಾಗೂ ಮಾರಿಯಮ್ಮದೇವಸ್ಥಾನ ಕಲ್ಪಡ ಇಲ್ಲಿನ ಸದಸ್ಯರು ಮತ್ತು ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಯುವವಾಹಿನಿ ಕಡಬ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.೧೪ರಂದು ದುರ್ಬಾಂಬಿಕಾ ಅಮ್ಮನವರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗೀತಾರವಿ ಕಕ್ಕೆಪದವು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಅಧ್ಯಕ್ಷ ಶಿವಪ್ರಸಾದ್ ನೂಚಿಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಯುವವಾಹಿನಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಜನಾರ್ಧನ್,...
ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಇಂದು ಆರಂಭಗೊಂಡಿತು.ಇಂದು ಬೆಳಿಗ್ಗೆ ಗೊನೆ ಮುಹೂರ್ತ, ಜಾಗದ ಪಂಜುರ್ಲಿಗೆ ತಂಬಿಲ, ಸಂಜೆ ಗುಳಿಗ ದೈವದ ಎಣ್ಣೆ ಬೂಳ್ಯ ನಡೆದು ಗುಳಿಗ ದೈವದ ನೇಮೋತ್ಸವ ನಡೆಯಿತು. ಆ ಬಳಿಕ ಶ್ರೀ ಮೊಗೇರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆ...
ಕರ್ನಾಟಕ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಅಡಿಕೆಯ ಹಳದಿರೋಗ ಕುರಿತ ಸಂಶೋಧನೆಗೆ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ ಕವಾಗಿ 25 ಕೋಟಿ ರೂ ಪ್ಯಾಕೇಜನ್ನು ಘೋಷಿಸಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಪ್ಯಾಕೇಜ್ ನ ರೂಪುರೇಷೆ ಸಿದ್ಧವಾಗುವ ಮೊದಲೇ ಅದರೊಳಗೆ ಹುಳುಕು ಹುಡುಕುವ ಕೆಲಸವನ್ನು ಬಿಟ್ಟು ರಾಜ್ಯದಲ್ಲಿ ಮೊದಲ...
ರಾಷ್ಟ್ರೀಯ ಪ್ರಾಕೃತ ವಿದ್ಯಾಪೀಠ(ರಿ), ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಧವಳತೀರ್ಥ, ಶ್ರವಣಬೆಳಗೊಳ ಇವರು ನಡೆಸಿದ ಪ್ರಾಕೃತ ಪರೀಕ್ಷೆಯಲ್ಲಿ ವೈಷ್ಣವಿ ರೋಹಿತಾಶ್ವ ಮೋಟ್ನೂರುರವರಿಗೆ ಚಿನ್ನದ ಪದಕ ಲಭಿಸಿದೆ. ನಗದು ಬಹುಮಾನ ಮತ್ತು ಚಿನ್ನದ ಪದಕವನ್ನು ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ 15ನೇ ಘಟಿಕೋತ್ಸವದಲ್ಲಿ ಮಾ.14ರಂದು ಪ್ರದಾನ ಮಾಡಲಾಯಿತು.ವೈಷ್ಣವಿ ಗುತ್ತಿಗಾರು ಗ್ರಾಮದ ವಳಲಂಬೆ...
Loading posts...
All posts loaded
No more posts