ಕೋಟೆ ಫೌಂಡೇಶನ್ (Right to live)
ಇದರ ವತಿಯಿಂದ ಎಣ್ಮೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮವು ಮಾ.26 ರಂದು ನಡೆಯಿತು.
ಅಕ್ಷರ, ಆರೋಗ್ಯ ಮತ್ತು ಆಶ್ರಯ ಎಂಬ ಉದಾತ್ತ ಧ್ಯೇಯಗಳೊಂದಿಗೆ ಕಾರ್ಯಾಚರಿಸುತ್ತಿರುವ ಕೋಟೆ ಫೌಂಡೇಶನ್ ಮೂಲಕ ಶಾಲಾ ಮಕ್ಕಳಿಗೆ ಈ ದಿನ ಉಚಿತ ಶಾಲಾ ಬ್ಯಾಗ್ ವಿತರಿಸಲಾಯಿತು.
ಹಿರಿಯರು ಯೋಗ ಗುರುಗಳೂ ಆದ ಕೆ. ಗಣಪಯ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಕೊಡುವ ಇಂತಹ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಂಡು ಕಲಿಕೆಯಲ್ಲಿ ಯಶಸ್ಸು ಗಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
Right to live ಸಂಸ್ಥೆಯ ಓರ್ಗನೈಸೇಶನ್ ಮ್ಯಾನೇಜರ್ ವೀರೇಶ್ ಸೋಂಡೆ ಮಾತನಾಡಿ ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಮತ್ತು ಪೋಷಕರಿಗೆ ಒಳ್ಳೆಯ ಹೆಸರು ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಣ್ಮೂರು ಪ್ರೌಢಶಾಲಾ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಮುತ್ತಪ್ಪ ಗೌಡ ಇವರು ವಹಿಸಿದ್ದರು. ಎಡಮಂಗಲ ಗ್ರಾಮದ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಗೌಡ , ನಮ್ಮ ಊರು ನಮ್ಮ ಹೊಣೆ ಸಂಘಟನೆಯ ಸಂಚಾಲಕರಾದ ಸುಜೀತ್ ರೈ ಪಟ್ಟೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಣ್ಮೂರು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೀತಲ್ ಯು.ಕೆ.ಅತಿಥಿಗಳನ್ನು ಸ್ವಾಗತಿಸಿದರು. Right to live ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ಶಿಕ್ಷಕರಾದ ಸಂತೋಷ್ ವಂದಿಸಿ, ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಎಣ್ಮೂರು ಪ್ರೌಢಶಾಲೆಯ 209 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ವಿತರಿಸಲಾಯಿತು.
- Sunday
- November 24th, 2024