Ad Widget

ಕಳಂಜ ಗ್ರಾಮ ಪಂಚಾಯತ್ – ಸತತ ನಾಲ್ಕನೇ ಬಾರಿಗೆ ಶೇ. 100 ತೆರಿಗೆ ಸಂಗ್ರಹಣೆ

ಕಳಂಜ ಗ್ರಾಮ ಪಂಚಾಯತ್ ಈ ಬಾರಿಯೂ ಕೂಡ ಶೇ.100 ರಷ್ಟು ಕಟ್ಟಡ/ಭೂಮಿ ತೆರಿಗೆ ವಸೂಲಾತಿಯನ್ನು ದಾಖಲಿಸಿದೆ. ಸತತ ನಾಲ್ಕು ವರ್ಷಗಳಿಂದ ಈ ಸಾಧನೆಯನ್ನು ಕಳಂಜ ಗ್ರಾಮ ಪಂಚಾಯಿತಿಯು ಮಾಡುತ್ತಾ ಬಂದಿದೆ. ಕಳೆದ ವರ್ಷ ತೆರಿಗೆಯನ್ನು ಪರಿಷ್ಕರಿಸಿ ತನ್ನ ಸ್ವಂತ ಆದಾಯವನ್ನು ಶೇ.126 ರಷ್ಟು ಹೆಚ್ಚಿಸಿಕೊಂಡಿದ್ದು, ಈ ಮೂಲಕ ಗ್ರಾಮದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ....

ದರ್ಖಾಸ್ತು : ಮಹಿಳಾ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮ

ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇದರ ವತಿಯಿಂದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇವುಗಳ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮವು ದರ್ಖಾಸ್ತು ಸ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಶ್ವಥಿಯವರು...
Ad Widget

ಬೆಳ್ಳಾರೆ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿಜಯೋತ್ಸವ

ದ.ಕ.ಜಿಲ್ಲಾಡಳಿತ, ತಾಲೂಕು ಆಡಳಿತ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ನೆಹರೂ ಯುವ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಮರ ಬೆಳ್ಳಾರೆ ವಿಜಯೋತ್ಸವ ಕಾರ್ಯಕ್ರಮ ಮಾ.27ರಂದು ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ...

ಪೆರಾಜೆ : ಕರವೇ ಸ್ವಾಭಿಮಾನಿ ಬಣದ ವತಿಯಿಂದ ಸ್ವಚ್ಛತಾ ಕಾರ್ಯ

ಪೆರಾಜೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕರವೇ ಸ್ವಾಭಿಮಾನಿ ಬಣ ಪೆರಾಜೆ ಘಟಕದ ವತಿಯಿಂದ ಮಾ 26 ರಂದು ಕಾಸ್ಪಾಡಿಯಿಂದ ಪೆರಾಜೆಯ ಮೂಲಕ ದಾಸರಹಿತ್ಲು ವರೆಗೆ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭು, ಕನ್ನಡ ಪೆರಾಜೆ ವಾರ್ಡ್ ಸದಸ್ಯ ಸುರೇಶ್ ಪೆರುಮುಂಡ, ಕರವೇ ಕೊಡಗು ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಮತ್ತು ಪೆರಾಜೆ...

ಗುಡ್ಡಪ್ಪ ಗೌಡ ಪುರ್ಲುಮಕ್ಕಿ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಪುರ್ಲುಮಕ್ಕಿ ನರಿಯೂರು ಗುಡ್ಡಪ್ಪ ಗೌಡ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರವಿಪ್ರಕಾಶ್, ಚೇತನ್, ಪುತ್ರಿ ಶ್ರೀಮತಿ ರೂಪಲತಾ, ಮೂವರು ಸಹೋದರರು, ಒರ್ವ ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಳಲಂಬೆ : ಕಲಾ ಪೋಷಕ ವೇಣುಗೋಪಾಲ ದೇರಪಜ್ಜನಮನೆ ಅವರಿಗೆ ಸನ್ಮಾನ

ಕಳೆದ ಎಂಟು ವರ್ಷಗಳಿಂದ ವಳಲಂಬೆ ದೇವಸ್ಥಾನದ ಜಾತ್ರಾ ಸಮಯದಲ್ಲಿ ಯಕ್ಷಗಾನ ಪ್ರದರ್ಶನವನ್ನು ಪ್ರಾಯೋಜಿಸುತ್ತಿರುವ ಕಲಾ ಪೋಷಕ ವೇಣುಗೋಪಾಲ ದೇರಪಜ್ಜನಮನೆ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಮಾ.24 ರಂದು ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ...

ಎಪ್ರಿಲ್ 5 : ಬೆಳ್ಳಾರೆಯಲ್ಲಿ ಮದನಿಯಂ ಸ್ವಲಾತ್ ಮಜ್ಲೀಸ್

ಬೆಳ್ಳಾರೆ: ಅಂತರ್ಜಾಲದಲ್ಲಿ ಲಕ್ಷಾಂತರ ವಿಶ್ವಾಸಿಗಳ ಮನಗೆದ್ದ ಮದನೀಯಂ ಸ್ವಲಾತ್ ಮಜ್ಲೀಸ್ ಎಪ್ರಿಲ್ 5 ರಂದು ಬೆಳ್ಳಾರೆಯ ತೆರೆದ ವೇದಿಕೆಯಲ್ಲಿ ನಡೆಯಲಿದೆ.. ಲತ್ತೀಪ್ ಸಖಾಫಿ ಕಾಂತಪುರಂ ನೇತ್ರತ್ವದಲ್ಲಿ ನಡೆಯುವ ಈ ಬ್ರಹತ್ ಸ್ವಲಾತ್ ಮಜ್ಲೀಸ್ ಕಾರ್ಯಕ್ರಮಕ್ಕೆ ಸಾವಿರಾರು ವಿಶ್ವಾಸಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಚಯರ್ಮೇನ್ ಮಹಮೂದ್ ಬಿ.ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಎಣ್ಮೂರು: ಕೋಟೆ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಕೋಟೆ ಫೌಂಡೇಶನ್ (Right to live)ಇದರ ವತಿಯಿಂದ ಎಣ್ಮೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮವು ಮಾ.26 ರಂದು ನಡೆಯಿತು.ಅಕ್ಷರ, ಆರೋಗ್ಯ ಮತ್ತು ಆಶ್ರಯ ಎಂಬ ಉದಾತ್ತ ಧ್ಯೇಯಗಳೊಂದಿಗೆ ಕಾರ್ಯಾಚರಿಸುತ್ತಿರುವ ಕೋಟೆ ಫೌಂಡೇಶನ್ ಮೂಲಕ ಶಾಲಾ ಮಕ್ಕಳಿಗೆ ಈ ದಿನ ಉಚಿತ ಶಾಲಾ ಬ್ಯಾಗ್ ವಿತರಿಸಲಾಯಿತು.ಹಿರಿಯರು ಯೋಗ ಗುರುಗಳೂ ಆದ ಕೆ. ಗಣಪಯ್ಯ ಕಾರ್ಯಕ್ರಮವನ್ನು ದೀಪ...
error: Content is protected !!