ಸುಳ್ಯ ಸಮೀಪದ ದುಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ
ಧಾರ್ಮಿಕ ಉಪನ್ಯಾಸವನ್ನು ನೀಡಿದ ಕುಂಟಾರು ರವೀಶ ತಂತ್ರಿಗಳು ‘ಹಿಂದೂ ಸಂಸ್ಕೃತಿಯಲ್ಲಿ ಎಲ್ಲರೂ ಒಂದೇ ಎನ್ನುವ ವಿಶಾಲ ಹೃದಯವಿದೆ. ಹಿಂದುಗಳ ಭಾವನೆಗೆ,ಸಂಸ್ಕೃತಿಗೆ ಧಕ್ಕೆ ಬಂದಾಗ ಪ್ರತಿಭಟಿಸುವ ಮನಸ್ಥಿತಿಯೂ ಇದೆ’ ಎಂದು ಹೇಳಿದರು.
ಮೀನುಗಾರಿಕೆ,ಬಂದರು ಮಥತು ಒಳನಾಡು ಸಾರಿಗೆ ಖಾತೆಯ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಅಂಗಾರರನ್ನು ಹಾಗೂ ಹಿರಿಯ ಯಕ್ಷಗಾನ ಕಲಾವಿದ, ನಾಟ್ಯಗುರು ಬಾಲಕೃಷ್ಣ ನಾಯರ್ ದುಗಲಡ್ಕ ಇವರನ್ನು ಸನ್ಮಾನಿಸಲಾಯಿತು.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆ ಭಾಗವಹಿಸಿದ್ದರು.
ಸಚಿವ ಅಂಗಾರ ಮಾತನಾಡಿ ‘ಧರ್ಮದ ನೆಲೆಗಟ್ಟಿನಲ್ಲಿ ಬದುಕಿದರೆ ಜೇವನದಲ್ಲಿ ಸಾರ್ಥಕತೆ ಲಭಿಸುತ್ತದೆ’ ಎಂದರು.
ದುಗ್ಗಲಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದಯೋನ್ಮುಖ ಚಿತ್ರ ಕಲಾವಿದ ಅಮೃತ್ ಸಾಲಿಯಾನ್ ರಚಿಸಿದ ರುಧಿರ ಚಾಮುಂಡಿ ದೈವದ ಕಲಾಕೃತಿಯನ್ನು ದೈವಸ್ಥಾನಕ್ಕೆ ಅರ್ಪಿಸಲಾಯಿತು. ಅವರು ರಚಿಸಿದ ಸಚಿವ ಅಂಗಾರರ ಕಲಾಕೃತಿಯನ್ನು ಸಚಿವರಿಗೆ ನೀಡಿದರು.
ಲೋಹಿತ್ ಮಾಣಿಬೆಟ್ಟು ಸ್ವಾಗತಿಸಿ, ಯತೀಶ್ ರೈ ದುಗಲಡ್ಕ ವಂದಿಸಿದರು.