- Tuesday
- December 3rd, 2024
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುದ್ಪಾಜೆ ರಸ್ತೆ ಕೆಲವೆಡೆ ಡಾಮರು ಕಾಣದೇ ಹಾಗೂ ಕೆಲವೆಡೆ ಹಾಕಿದ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ದುಸ್ಥರವಾಗಿದೆ. ಈ ರಸ್ತೆಗೆ ಸುಮಾರು 27ವರ್ಷಗಳ ಹಿಂದೆ ಹಾಕಿದ ಡಾಮರು ಎದ್ದು ಹೋಗಿದೆ. ಮತ್ತೆ ಯಾರು ಕೂಡ ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿ ಸುಮಾರು 33 ಮನೆಗಳಿದ್ದು ವಾಹನ...
ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಮಾ.17 ರಿಂದ ಆರಂಭಗೊಂಡಿತು. ಮೊಗ್ರದಲ್ಲಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನದ ನಿರ್ಮಾಣ ಹಾಗೂ ದೈವಸ್ಥಾನಗಳ ಅಭಿವೃದ್ದಿ ಕಾರ್ಯ ನಡೆಯಲಿದೆ....
https://youtu.be/xxYWgrNqtsE ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ ಹಾಗೂ ಚೌಕಿಮನೆ ಪಂಜ ಇದರ ಜಂಟಿ ಸಹಯೋಗದೊಂದಿಗೆ ಮನೆ ಮನೆ ಯಕ್ಷಗಾನ ಪ್ರದರ್ಶನ ಗುತ್ತಿಗಾರು ಗ್ರಾಮದ ವಿವಿಧೆಡೆ ಆರಂಭಗೊಂಡಿದೆ. ಈ ತಿರುಗಾಟದ ಯಕ್ಷಗಾನ ತಂಡ ಕಳೆದ ಆರು ವರ್ಷಗಳಿಂದ 'ಸಂಸ್ಕಾರದಿಂದ ಸಂಸ್ಕೃತಿಯ ಉಳಿವಿಗಾಗಿ' ಯಕ್ಷಗಾನ ಪ್ರದರ್ಶನ ನೀಡುತ್ತಿದೆ.
ಆಧುನಿಕ ಮಾಧ್ಯಮಗಳು ಪ್ರಬಲವಾಗುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿಯನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಬದ್ಧತೆಯಿಂದ ರಂಗಭೂಮಿಯನ್ನೇ ಬದುಕಾಗಿಸಿಕೊಂಡು ದುಡಿಯುತ್ತಿರುವ ಜೀವನರಾಂ ಓರ್ವ ಮಹಾನ್ ಸಾಧಕ' ಎಂದು ಹಿರಿಯ ರಂಗ ಕರ್ಮಿ, ಚಲನ ಚಿತ್ರ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಸುಳ್ಯದ...