

ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷ ಜಿ. ಕೆ. ಹಮೀದ್ ರವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಿತಿ ಸಭೆ ಹಾಗೂ ಮನೆ ಮನೆಗೆ ಗಂಗೆ ಕಾರ್ಯಕ್ರಮದ ಬಗ್ಗೆ ವಿಶೇಷ ಗ್ರಾಮ ಸಭೆ ಮಾ.15 ರಂದು ನಡೆಯಿತು. ಅಧ್ಯಕ್ಷರಾದ ಜಿ. ಕೆ. ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಕುಡಿಯುವ ಬೇಡಿಕೆಯ ಬಗ್ಗೆ ಮಾಜಿ ಸದಸ್ಯ ನಾಗೇಶ್, ಮಾಜಿ ಅಧ್ಯಕ್ಷ ಜಗದೀಶ್ ಕೆ. ಪಿ., ಅಂಗನವಾಡಿ, ಶಾಲೆ, ಸಮುದಾಯಗಳಿಂದ ಹಾಗೂ ಸಾರ್ವಜನಿಕರು ಬೇಡಿಕೆಯನ್ನು ಸಲ್ಲಿಸಿದರು. ಜಲಜೀವನ್ ತಂಡದವರು ಎಲ್ಲ ವಿಚಾರಗಳ ಪರಿಶೀಲಿಸಿ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಲಿಸಾ, ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ , ಸವಾದ್, ವಿಮಲ, ಸುಂದರಿ ಮುಂಡಡ್ಕ, ಹನೀಫ್ ಎಸ್. ಕೆ., ಅನುಪಮ, ವಿಜಯ ಅಲಡ್ಕ, ಸುಮತಿ, ರಜನಿ, ಅಬೂಸಾಲಿ, ಉಪಸ್ಥಿತರಿದ್ದರು. ಜಿ.ಕೆ.ಹಮೀದ್ ಸ್ವಾಗತಿಸಿ, ಪಿಡಿಓ ಸರಿತಾ ಡಿಸೋಜಾ ವಂದಿಸಿದರು. ಸಭೆಯಲ್ಲಿ 1 ಕೋಟಿಗೂ ಮಿಕ್ಕಿ ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ ಸಲ್ಲಿಸಲಾಯಿತು.