- Thursday
- November 21st, 2024
ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1994ರಲ್ಲಿ ಮದ್ಯದಂಗಡಿ ವಿರೋಧಿ ಚಳುವಳಿ ಪ್ರಾರಂಭಗೊಂಡು ಸರ್ಕಾರದ ಪರವಾನಗಿ ಹೊಂದಿದ್ದ ಶರಾಬು ಅಂಗಡಿ ನಾಗರಿಕರ ಹೋರಾಟದ ಫಲವಾಗಿ 1994 ಜುಲೈ ತಿಂಗಳಿನಿಂದ ತೆರವುಗೊಂಡಿರುತ್ತದೆ. ಅಲ್ಲಿಂದ ಇದುವರೆಗೆ ಗ್ರಾಮದ ನಾಗರಿಕರು ನೆಮ್ಮದಿ ಹಾಗೂ ಶಾಂತಿಯುತ ಮತ್ತು ಅಭಿವೃದ್ಧಿಶೀಲ ಜೀವನವನ್ನು ನಡೆಸುತ್ತಿದ್ದಾರೆ....
ಜೇಸಿಐ ಸುಳ್ಯ ಸಿಟಿಯ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾ.08 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ ಇಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಶ್ರೀಮತಿ ಶೀತಲ್ ಶಾಲಾ ಮುಖ್ಯೋಪಾಧ್ಯಾಯರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪದ್ಮಿನಿ ದೈಹಿಕ ಶಿಕ್ಷಕಿ ಹಾಗೂ ಅಬ್ದುಲ್ ಸಮಾದ್ ಪ್ರಾಂಶುಪಾಲರು ಮತ್ತು ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷ ಜೇಸಿ ಚಂದ್ರಶೇಖರ ಕನಕಮಜಲು, ಸ್ಥಾಪಕರಾದ ಜೇಸಿ...
ಗುತ್ತಿಗಾರು ಗ್ರಾಮದ ಮೊಟ್ಟೆಮನೆ ಜನಾರ್ದನ ಗೌಡ ಮಾ.10. ರಂದು ಬೆಳಿಗ್ಗೆ ಮನೆಯ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇವರು ಪತ್ನಿ,ಮಗು ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಕನಕಮಜಲು ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಕಾರ್ಯಕರ್ತ, ಕಾಂಗ್ರೇಸ್ ಮುಖಂಡ ಕನಕಮಜಲು ನಿವಾಸಿಯಾದ ಹಾಜಿ ಬೀರಾ ಮೋಯ್ದಿನ್‌ರವರು ಇಂದು ಮುಂಜಾನೆ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.ಮೃತರು ಕನಕಮಜಲು ಪ್ರಾ.ಕೃ.ಪ.ಸ.ಸಸಂಘದ ಅಧ್ಯಕ್ಷರು ಹಾಗೂ ಗ್ರಾ.ಪಂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಾಗೂ ಹಲವು ಸಂಘ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಮೃತರು ಪತ್ನಿ,...