ಸುಳ್ಯ ವಿಧಾನ ಸಭಾ ಕ್ಷೇತ್ರದ ಎನ್.ಎಸ್.ಯು.ಐ ವತಿಯಿಂದ ಮಾ. 6ರಂದು ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನವನ್ನು ತಾಲೂಕಿನ ವಿವಿಧ ಕಾಲೇಜು ಗಳಾದ ಕೆವಿಜಿ ಡೆಂಟಲ್ , ಮೆಡಿಕಲ್ ಕಾಲೇಜ್, ಸರಕಾರಿ ಜೂನಿಯರ್ ಕಾಲೇಜ್, ಕೆವಿಜಿ ಐ ಟಿ ಐ ,ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ ಇದರ ಕ್ಯಾಂಪಸ್ ನ ಹೊರಗಡೆ ಮಾಡಲಾಯಿತು.
ಈ ಅಭಿಯಾನದಲ್ಲಿ ಎನ್. ಎಸ್.ಯು.ಐ ಪದಾಧಿಕಾರಿಗಳು ವಿವಿಧ ಕಾಲೇಜ್ ಕ್ಯಾಂಪಸ್ ಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಯಿತು. ಅಲ್ಲದೆ,ಮುಂದೆ ಸ್ಕಾಲರ್ ಶಿಪ್, ರ್ಯಾಗಿಂಗ್, ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ನಡೆಯಲಿದೆ ಎಂದು ಕೀರ್ತನ್ ಗೌಡ ಕೊಡಪಾಲ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಳ್ಯ ಎನ್ ಎಸ್ ಯು ಐ ನೂತನ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ,ಆಶಿಕ್ ಅರಂತೋಡು , ಆಸಿಫ್ ಬಾಳಿಲ, ಪವನ್ ಅಂಬೇಕಲ್ಲು, ಯಶವಂತ್ ಅಡ್ಯಡ್ಕ,ರಿಯಾಜ್ ಸುಳ್ಯ ,ಧನುಷ್ ಕುಕ್ಕೆಟಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.