Ad Widget

ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರ ವಿರುದ್ಧ ಕಾನೂನು ಕ್ರಮ : ತಹಶೀಲ್ದಾರ್ ಅನಿತಾಲಕ್ಷ್ಮೀ

ಪಡಿತರ ಚೀಟಿ ಪಡೆದಿರುವ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿದ್ದು, ಪ್ರಸ್ತುತ ಆರ್ಥಿಕವಾಗಿ ಮುಂದುವರಿದಿರುವವರು ಹಾಗೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವವರು ತಮ್ಮ ಪಡಿತರ ಚೀಟಿಯನ್ನು ಇಲಾಖೆಗೆ ಹಿಂದಿರುಗಿಸಿ ಎಪಿಎಲ್ ಪಡಿತರ ಚೀಟಿ ಪಡೆಯದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ತಿಳಿಸಿದ್ದಾರೆ.

ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು (ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ಮೇಲ್ಪಟ್ಟವರು, ನಾಲ್ಕು ಚಕ್ರದ ವಾಹನ ಸ್ವಂತಕ್ಕಾಗಿ ಬಳಸುವವರು, ಸರಕಾರಿ/ ಅರೆ ಸರಕಾರಿ/ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹೊಂದಿರುವವರು, ನಗರ ಪ್ರದೇಶದಲ್ಲಿ 1000 ಚದರ ಅಡಿ ವಿಸ್ತೀರ್ಣ ಅಥವಾ ಹೆಚ್ಚಿನ ವಿಸ್ತೀರ್ಣದ ವಾಸದ ಮನೆ ಹೊಂದಿರುವ ಕುಟುಂಬಗಳು) ಕೂಡಲೇ ತಮ್ಮ ಬಿಪಿಎಲ್/ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳನ್ನು ಆಹಾರ ಇಲಾಖೆಗೆ ಹಾಜರುಪಡಿಸಬೇಕು.

ಮರಣ ಹೊಂದಿದ ಪಡಿತರ ಚೀಟಿ ಸದಸ್ಯರ ಹೆಸರನ್ನು ಸಹ ಚೀಟಿಯಿಂದ ಕೂಡಲೇ ತೆಗೆಸಿ ದಾಖಲೆಯನ್ನು ಇಲಾಖೆಗೆ ಹಾಜರುಪಡಿಸಲು ಮಾ.15 ರವರೆಗೆ ಕೊನೆಯ ಅವಕಾಶ ನೀಡಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!