Ad Widget

ಕಲ್ಮಡ್ಕ : ಅಧ್ಯಕ್ಷೆಯಾಗಿ ಹಾಜಿರಾ ಗಫೂರ್, ಉಪಾಧ್ಯಕ್ಷರಾಗಿ ಮಹೇಶ್ ಕರಿಕ್ಕಳ

ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷೆಯಾಗಿ ಹಾಜಿರಾ ಗಫೂರ್, ಉಪಾಧ್ಯಕ್ಷರಾಗಿ ಮಹೇಶ್ ಕರಿಕ್ಕಳ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಒಟ್ಟು 9 ಸ್ಥಾನಗಳಲ್ಲಿ 5 ಕಾಂಗ್ರೆಸ್, 3 ಪಕ್ಷೇತರರು, 1 ಜೆಡಿಎಸ್ ಪಡೆದುಕೊಂಡಿತ್ತು.

ಫೆ.16-17 : ಕುಕ್ಕಂದೂರು ಶ್ರೀ ಮುರುಗನ್ ದೇವಸ್ಥಾನದ ಬ್ರಹ್ಮಕಲಶೋತ್ಸವ

ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಮುರುಗನ್ ದೇವಸ್ಥಾನದ ಅಷ್ಟಬಂಧ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ. 16 ಮತ್ತು 17 ರಂದು ನಡೆಯಲಿದೆ.
Ad Widget

ಬೆಳ್ಳಾರೆ : ಅಧ್ಯಕ್ಷರಾಗಿ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆಯಾಗಿ ಗೌರಿ

ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರಾಗಿ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆಯಾಗಿ ಗೌರಿ ಆಯ್ಕೆಯಾಗಿದ್ದಾರೆ. ಇಲ್ಲಿ 14 ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 4, ಎಸ್ ಡಿ ಪಿ ಐ 2 ಸ್ಥಾನ ಪಡೆದಿತ್ತು.

ಗುತ್ತಿಗಾರು : ಅಧ್ಯಕ್ಷೆಯಾಗಿ ರೇವತಿ ಪುಲ್ಲಡ್ಕ ಉಪಾಧ್ಯಕ್ಷೆಯಾಗಿ ಪ್ರಮೀಳಾ ಎರ್ದಡ್ಕ

ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೇವತಿ ಪುಲ್ಲಡ್ಕ, ಉಪಾಧ್ಯಕ್ಷೆಯಾಗಿ ಪ್ರಮೀಳಾ ಎರ್ದಡ್ಕ ಆಯ್ಕೆಯಾಗಿದ್ದಾರೆ. ಇಲ್ಲಿ 17 ಸ್ಥಾನಗಳ ಪೈಕಿ ಬಿಜೆಪಿ 13 ರಲ್ಲಿ ಜಯಗಳಿಸಿತ್ತು.

ಮಂಡೆಕೋಲು : ಅಧ್ಯಕ್ಷೆಯಾಗಿ ವಿನುತಾ ಪಾತಿಕಲ್ಲು – ಉಪಾಧ್ಯಕ್ಷರಾಗಿ ಅನಿಲ್ ತೋಟಪ್ಪಾಡಿ

ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ವಿನುತಾ ಪಾತಿಕಲ್ಲು ಮತ್ತು ಉಪಾಧ್ಯಕ್ಷರಾಗಿ ಅನಿಲ್ ತೋಟಪ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಇಲ್ಲಿ ಅವಿರೋಧ ಆಯ್ಕೆ ನಡೆದಿದೆ.

ಸಂಪಾಜೆ ಗ್ರಾ.ಪಂ.ಅಧ್ಯಕ್ಷರಾಗಿ ಜಿ.ಕೆ.ಹಮೀದ್ – ಉಪಾಧ್ಯಕ್ಷೆಯಾಗಿ ಲಿಸ್ಸಿ ಮೊನಾಲಿಸಾ

ಸಂಪಾಜೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜಿ.ಕೆ.ಹಮೀದ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಲಿಸ್ಸಿ ಮೊನಾಲಿಸಾ ಆಯ್ಕೆಯಾಗಿದ್ದಾರೆ. ಇಲ್ಲಿ ಕಾಂಗ್ರೆಸ್ 13 ಮತ್ತು ಬಿಜೆಪಿ 1 ಸ್ಥಾನ ಪಡೆದುಕೊಂಡಿತ್ತು.

ಕಾಂಚೋಡು ಜಾತ್ರೋತ್ಸವ ಸಂಪನ್ನ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ. 11 ರಿಂದ ಫೆ. 14 ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಫೆ. 14 ರಂದು ಬೆಳಗ್ಗೆ ಬೆಳಗ್ಗಿನ ಪೂಜೆ, ಶ್ರೀ ದೇವಳದಲ್ಲಿ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು...
error: Content is protected !!