Ad Widget

ಮುಕ್ಕೂರು : ಆಧಾರ್ ನೋಂದಣಿ ‌ಮತ್ತು‌ ತಿದ್ದುಪಡಿ ಶಿಬಿರ – ಸರಕಾರದ ಸವಲತ್ತು ಗ್ರಾಮ ಮಟ್ಟದಲ್ಲಿ ದೊರೆಯಲು ಶಿಬಿರ ಅನುಕೂಲ : ಮೋಹನ‌ ಬೈಪಡಿತ್ತಾಯ

ಮುಕ್ಕೂರು ಕುಂಡಡ್ಕ ‌ನೇಸರ‌ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ‌ಸಹಯೋಗದಲ್ಲಿ‌ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ವತಿಯಿಂದ ಫೆ.13 ರಂದು ಆಧಾರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿದ ಪ್ರಗತಿಪರ ಕೃಷಿಕ, ಶಿವಳ್ಳಿ ಸಂಪನ್ನ ಬೆಳಂದೂರು ವಲಯ ಅಧ್ಯಕ್ಷ ಮೋಹನ ಬೈಪಡಿತ್ತಾಯ ಮಾತನಾಡಿ, ಸರಕಾರದ ಸವಲತ್ತುಗಳು ಜನರಿಗೆ ದೊರಕಲು ದಾಖಲೆಗಳು ಸಮರ್ಪಕವಾಗಿ ಇರಬೇಕು. ಈ ನಿಟ್ಟಿನಲ್ಲಿ ಆದಾರ್ ನೋಂದಣಿ ಶಿಬಿರ ಗ್ರಾಮಮಟ್ಟದಲ್ಲಿ ಆಯೋಜಿಸುವ ಮೂಲಕ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದರು. ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಹಾಗೂ ಗ್ರಾ.ಪಂ.ಸದಸ್ಯ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ನೇಸರ ಯುವಕ ಮಂಡಲ ಸಮಾಜಮುಖಿ ಕಾರ್ಯಚಟುವಟಿಕೆಗಳ ಅಂಗವಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಮೊದಲ ಹಂತದಲ್ಲಿ ಆಧಾರ್, ಆಯುಷ್ಮಾನ್ ನೋಂದಣಿ ಸೇರಿದಂತೆ ಹತ್ತಾರು ಚಟುವಟಿಕೆಗಳು ನಡೆದು ಎರಡನೆ ಹಂತದ ಕಾರ್ಯಚಟುವಟಿಕೆ ಪ್ರಾರಂಭಗೊಂಡಿದೆ ಎಂದರು.
ಸುಳ್ಯ ಅಂಚೆ ಇಲಾಖೆ ನಿರೀಕ್ಷಕ ಸುದೀಪ್ ಕುಮಾರ್ ಮಾಹಿತಿ ನೀಡಿ, ಎಲ್ಲ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಅಗತ್ಯ. ಅದು ಸಮರ್ಪಕವಾಗಿ ಇರದಿದ್ದರೆ ಸರಕಾರಿ ಸವಲತ್ತು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ‌ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಸಂಘ ಸಂಸ್ಥೆಗಳ ಸಹಯೋಗ ಪಡೆದು ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ಆಯೋಜನೆಗೆ ಒತ್ತು ನೀಡಿದೆ ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ‌ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಹತ್ತಾರು ಕಾರ್ಯಚಟುವಟಿಕೆ ಮೂಲಕ‌ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಮಾಜದ ವಿಶ್ವಾಸಕ್ಕೆ ತಕ್ಕಂತೆ ಮುನ್ನಡೆಯುತ್ತಿದೆ.‌ಈ ನಿಟ್ಟಿನಲ್ಲಿ ಆಧಾರ್ ನೋಂದಣಿ ಶಿಬಿರ ಉತ್ತಮ ಕಾರ್ಯಚಟುವಟಿಕೆ ಯಾಗಿದೆ ಎಂದರು.
ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಮಾತನಾಡಿ, ಸಂಘಟನೆಗಳು ನಿರ್ಧಿಷ್ಟ ಗುರಿಯೊಂದಿಗೆ ಮುಂದಡಿ ಇಟ್ಟಾಗ ಅದರಿಂದ ಸಮಾಜಕ್ಕೆ ಪ್ರಯೋಜನ ದೊರೆಯಲು ಸಾಧ್ಯವಾಗುತ್ತದೆ ಎಂದರು.
ಕುಂಡಡ್ಕ-ಮುಕ್ಕೂರು‌ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪ್ರಸಾದ್ ಎನ್.ಕೆ ಮಾತನಾಡಿ ಈ ಸಂಘಟನೆ ನನ್ನ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗಿದೆ. ಸಂಘಟನೆಯ ಮೂಲಕ ಮುಂದೆ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಪೆರುವಾಜೆ ಗ್ರಾ.ಪಂ.ಸದಸ್ಯರಾದ ಗುಲಾಬಿ ಬೊಮ್ಮೆಮಾರು, ಚಂದ್ರಾವತಿ ಇಟ್ರಾಡಿ, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ಉಪಸ್ಥಿತರಿದ್ದರು.
ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಸ್ವಾಗತಿಸಿ, ನೇಸರ ಯುವಕ ಮಂಡಲ‌ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು. ಅಂಚೆ ಇಲಾಖೆಯ ಸಿಬಂದಿಗಳು ನೋದಾವಣೆ ಕಾರ್ಯ ನಿರ್ವಹಿಸಿದರು. ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಪದ್ಮನಾಭ ನೆಟ್ಟಾರು ಸಹಕಾರ ನೀಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!