Ad Widget

ಜ.27ಕ್ಕೆ ಸುಳ್ಯ, ಜ.28 ಕ್ಕೆ ಕಡಬ ತಾಲೂಕಿನ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ

ಗ್ರಾಮ ಪಂಚಾಯತ್ ಚುನಾವಣೆ ಬಳಿಕ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲು ಈ ಹಿಂದೆ ನಿಗದಿಪಡಿಸಲಾಗಿದ್ದ ಸ್ಥಳ ಮತ್ತು ದಿನಾಂಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸುಳ್ಯ ಹಾಗೂ ಕಡಬ ತಾಲೂಕಿನ ಮೀಸಲಾತಿ ಪ್ರಕ್ರಿಯೆ ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ಜ.23 ರಂದು ಆಯೋಜಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಇದಕ್ಕೆ ಜನಪ್ರತಿನಿಧಿ ಹಾಗೂ ಪಕ್ಷಗಳಿಂದ ವಿರೋಧ ವ್ಯಕ್ತವಾಗಿ...

ಸುಬ್ರಹ್ಮಣ್ಯ ಕಿರುಷಷ್ಠಿ ಧರ್ಮ ಸಮ್ಮೇಳನ : ಬಂದ ದಾರಿಯನ್ನು ಮರೆಯುವುದಿಲ್ಲ. ನೀವು ಮರೆಯಬೇಡಿ, ಆಡಳಿತವನ್ನು ಪ್ರೀತಿ ಮತ್ತು ವಿಶ್ವಾಸದಿಂದ ನಡೆಸುತ್ತೇನೆ – ಸಚಿವ ಅಂಗಾರ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿಯ ಪ್ರಯುಕ್ತ ಧರ್ಮ ಸಮ್ಮೇಳನ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಜ.19 ರಂದು ನಡೆಯಿತು ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಂಗಾರ ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಹಣ ಅಗತ್ಯ ಬಿದ್ದಿಲ್ಲ. ಇಲ್ಲಿ...
Ad Widget

ಕೇರ್ಪಳ : ಮಹಿಳೆ ಕಾಣೆ – ಪೋಲೀಸ್ ದೂರು

ಸುಳ್ಯದ ಕೇರ್ಪಳದಲ್ಲಿ ಸುಮಾರು 5 ವರ್ಷದಿಂದ ನೆಲೆಸಿರುವ ಆನಂದ ಎಂಬವರ ಪತ್ನಿ ಚಂದ್ರಾವತಿ (49)ಎಂಬವರು ಜ.18 ರಂದು ಮನೆಯಿಂದ ಕಾಣೆಯಾಗಿದ್ದರು. ಮನೆಯವರು ಹುಡುಕಾಟ ಆರಂಭಿಸಿದಾಗ ಪರ್ಸ್ ಮತ್ತು ಮೊಬೈಲ್ ಪಯಸ್ವಿನಿ ಹೊಳೆಯ ಬದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಹೊಳೆಗೆ ಬಿದ್ದಿರಬಹುದೆಂದು ಶಂಕಿಸಲಾಗಿತ್ತು. ಹಾಗಾಗಿ ಪೋಲೀಸರು,ಅಗ್ನಿಶಾಮಕ ದಳದವರು,ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ . ಯಾವುದೇ...

ಸುಳ್ಯ : ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ; ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಆರೋಪ

ಸುಳ್ಯದ ಜೂನಿಯರ್ ಕಾಲೇಜು ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಸುಳ್ಯದ ಜೂನಿಯರ್ ಕಾಲೇಜ್ ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್...

ಸುಳ್ಯ : ವಿಶೇಷ ಕಾರ್ಯಾಗಾರ ಮತ್ತು ಯೋಗ ಪ್ರದರ್ಶನ

ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ಮಂಗಳೂರು ವಿಭಾಗ, ಸುಳ್ಯ ನಗರ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರ ಮತ್ತು ಯೋಗ ಪ್ರದರ್ಶನವು ಸುಳ್ಯದ ಶಿವಕೃಪಾ ಕಲಾ ಮಂದಿರ ನಡೆಯಿತು. ಕಾರ್ಯಕ್ರಮವನ್ನು ಸುಳ್ಯದ ಆನಂದ್ ಇಲೆಕ್ಟ್ರಿಕಲ್ಸ್ ನ ಮಾಲಕ ಆನಂದ್ ಪೂಜಾರಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತ್...

ಬೆಳ್ಳಾರೆ : ಸ್ವಚ್ಚತಾ ಕಾರ್ಯಕ್ರಮ

ಬೆಳ್ಳಾರೆ ಪೇಟೆಯಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿಯ ಪಟ್ಟಣ ಸವಾರಿಯ ಸಲುವಾಗಿ ಸ್ವಚ್ಛತಾ ಕಾರ್ಯ ಇಂದು ನಡೆಸಲಾಯಿತು. ಗ್ರಾ.ಪಂ.ನ ನೂತನ ಸದಸ್ಯರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಈ ಸ್ವಚ್ಚತಾ ಕಾರ್ಯ ನಡೆಯಿತು.

ಉಬರಡ್ಕ : ಗುದ್ದಲಿಪೂಜೆಗೆ ಸೀಮಿತವಾದ ಉರುಂಡೆ ಕಿರು ಸೇತುವೆ

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುಂಡೆ ಎಂಬಲ್ಲಿ ಕಿರು ಸೇತುವೆ ಕಾಮಗಾರಿ ಅರ್ಧದಲ್ಲಿ ಉಳಿದಿದ್ದು ಗ್ರಾಮಸ್ಥರ ಹಲವು ವರ್ಷಗಳ ಕನಸು ಕನಸಾಗಿಯೇ ಉಳಿದಿದೆ. ಸುಳ್ಯ - ಉಬರಡ್ಕ ಮುಖ್ಯ ರಸ್ತೆಯಲ್ಲಿ ಸಿಗುವ ಹುಳಿಯಡ್ಕದಿಂದ ಮಿತ್ತೂರು(ಕೆದಂಬಾಡಿ)ಗೆ ಸಂಪರ್ಕ ಸಾಧಿಸುವ ರಸ್ತೆಗೆ ಕಳೆದ ಕೆಲವು ವರುಷಗಳ ಹಿಂದೆ ಉರುಂಡೆ ಎಂಬ ಪ್ರದೇಶದಲ್ಲಿ ಉಬರಡ್ಕ ಗ್ರಾಮ ಪಂಚಾಯತಿ ವತಿಯಿಂದ...

ಶುಭವಿವಾಹ ಜಯಪ್ರಕಾಶ್- ಧನ್ಯ

ಉಬರಡ್ಕ‌ ಮಿತ್ತೂರು ಗ್ರಾಮದ ಉರುಂಡೆ ದಿ. ದುಗ್ಗಪ್ಪ‌ ಗೌಡರವರ ಪುತ್ರ ಜಯಪ್ರಕಾಶ ರವರ ವಿವಾಹವು ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಕೃಷ್ಣಪ್ಪ ಗೌಡರ ಪುತ್ರಿ ಧನ್ಯಾರೊಂದಿಗೆ ಗೌಡ ಸಮುದಾಯ ಭವನ ಕೊಡಿಯಾಲ ಬೈಲು ಇಲ್ಲಿ ಜ.18 ರಂದು ‌ನಡೆಯಿತು.

ಜ.21 : ಕಳಂಜ ಸಹಕಾರಿ ಸಂಘದಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನಾ ಕಾರ್ಯಕ್ರಮ

ಕಳಂಜ‌ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಪಿ.ಜಿ.ಎಸ್.ಎನ್. ಪ್ರಸಾದರಿಗೆ ಅಭಿನಂದನಾ ಕಾರ್ಯಕ್ರಮ ಜ. 21ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತರನ್ನು ಸಂಘದ ಮಾಜಿ ಉಪಾಧ್ಯಕ್ಷ...

ಪೆರುವಾಜೆ : ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಅಂಗಾರ – ಸನ್ಮಾನ

ಪೆರುವಾಜೆ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಬೆಂಗಳೂರಿನಿಂದ ಇಂದು ಆಗಮಿಸಿದ ಸಚಿವ ಅಂಗಾರರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪಟ್ಲ ಫೌಂಡೇಶನ್ ಸುಳ್ಯ ಘಟಕದ ವತಿಯಿಂದ ಸಚಿವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾಭಿಮಾನಿಗಳು ಇದ್ದರು
Loading posts...

All posts loaded

No more posts

error: Content is protected !!