Ad Widget

ಪೆರುವಾಜೆ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ಭಾವೈಕ್ಯ ಯುವಕ ಮಂಡಲ (ರಿ) ಪೆರುವಾಜೆ ಇದರ ವತಿಯಿಂದಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ವಾಸುದೇವ ಪೆರುವಾಜೆ, ಪದಾಧಿಕಾರಿಗಳು, ಸದಸ್ಯರು ಹಾಗೂ ಶ್ರೀ ಜಲದುರ್ಗಾದೇವೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೆಗೆ ಗೊನೆ ಮುಹೂರ್ತ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಜ.24.ರಂದು ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ಕುದ್ವ ತೋಟದಲ್ಲಿ ಗೊನೆ ಕಡಿದು ಪೂರ್ವ ಸಂಪ್ರದಾಯದಂತೆ ಬ್ಯಾಂಡ್ ವಾಲಗ ಮೆರವಣಿಗೆ ಮೂಲಕ‌ ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು.ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ. ಎಂದು...
Ad Widget

ಮತ್ತೆ ಬಂತು ತುಳುನಾಡಿನ ಅಯ್ಯನಕಟ್ಟೆ ಜಾತ್ರೆ….. ✍ಚಂದ್ರಶೇಖರ ಬೇರಿಕೆ

✍️ಚಂದ್ರಶೇಖರ ಬೇರಿಕೆ ಮನುಷ್ಯ ಸಾಧ್ಯತೆಯನ್ನು ಮೀರಿದ ಶಕ್ತಿಯೊಂದು ಮಾನವ ಬದುಕಿನ ಅನುಭವಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆಯ ಮೇಲೆ ತುಳುನಾಡಿನ ದೈವಾರಾಧನಾ ಜಗತ್ತು ಆವೃತ್ತವಾಗಿದೆ. ಪರಶುರಾಮ ಸೃಷ್ಟಿಯ ತುಳುನಾಡು ದೈವ ನೆಲೆಯ ಬೀಡು. ತುಳುನಾಡಿನ ದೈವಾರಾಧನೆಯು 14ನೇ ಶತಮಾನದ ಚರಿತ್ರೆಯನ್ನು ಹೊಂದಿದ್ದು, ಕಾರ್ಕಳ ತಾಲ್ಲೂಕಿನ ಕಾಂತೇಶ್ವರದಲ್ಲಿ ದೊರೆತ 1379ರ ಶಾಸನವು ದೈವಾರಾಧನೆಗೆ ಅಧಿಕೃತ ಲಿಖಿತ ಆಧಾರ...

ಸಚಿವ ಅಂಗಾರರಿಂದ ಮಾಜಿ ಎಂ.ಎಲ್.ಸಿ ಅಣ್ಣಾ ವಿನಯಚಂದ್ರರ ಭೇಟಿ

ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್. ಅಂಗಾರರವರು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಣ್ಣಾ ವಿನಯಚಂದ್ರರು ನೂತನ ಸಚಿವರನ್ನು ಸ್ವಾಗತಿಸಿ, ಅಭಿನಂದಿಸಿದರು. ಈ ವೇಳೆ ತಾ.ಪಂ. ಸದಸ್ಯೆ ಶ್ರೀಮತಿ ಜಾಹ್ನವಿ ಕಾಂಚೋಡು, ಕಳಂಜ ಗ್ರಾ.ಪಂ. ಸದಸ್ಯರಾದ ಪ್ರಶಾಂತ್...

ಕುಲ್ಕುಂದ ಒತ್ತೆಕೋಲ ಆಮಂತ್ರಣ ಬಿಡುಗಡೆ

ಸುಬ್ರಹ್ಮಣ್ಯದ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ವಾರ್ಷಿಕ ಸಭೆ ರವೀಂದ್ರ ರುದ್ರಪಾದ ರವರ ಅಧ್ಯಕ್ಷತೆಯಲ್ಲಿ ಕುಲ್ಕುಂದ ದೈವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂಬರುವ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಾರ್ಷಿಕ ಒತ್ತೆಕೋಲ ಮತ್ತು ನೇಮೋತ್ಸವಗಳ ಆಮಂತ್ರಣ ಪತ್ರಿಕೆಯನ್ನು ದೈವದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವೆಂಕಟ್ರಾಜ್,ಚಂದ್ರಹಾಸ ಭಟ್, ಹರೀಶ...

ಕಳಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಮತ್ತು ಕಳಂಜ ಗ್ರಾಮ ಪಂಚಾಯತ್ ನ ಜಂಟಿ ಸಹಯೋಗದಲ್ಲಿ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರವು ಜ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಕಳಂಜ ಪಶುಸಂಗೋಪನ ಇಲಾಖೆಯ ವೈದ್ಯರಾದ ಡಾ. ಮೇಘಶ್ರೀ, ಪರೀಕ್ಷಕರಾದ...

ಬಳ್ಪ : ಎಣ್ಣೆಮಜಲು ಶಾಲೆಯಲ್ಲಿ ಶ್ರಮದಾನ

ಬಳ್ಪದ ಎಣ್ಣೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.22 ರಂದು ಶ್ರಮದಾನ ನಡೆಸಲಾಯಿತು. ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಹಾಗೂ ಶಿಕ್ಷಕ ವೃಂದದವರು ಶ್ರಮದಾನದಲ್ಲಿ ಭಾಗವಹಿಸಿದರು.

ಕಳಂಜ ಸಹಕಾರಿ ಸಂಘದಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನಾ ಕಾರ್ಯಕ್ರಮ

ಕಳಂಜ‌ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಪಿ.ಜಿ.ಎಸ್.ಎನ್. ಪ್ರಸಾದರಿಗೆ ಅಭಿನಂದನಾ ಕಾರ್ಯಕ್ರಮ ಜ. 21ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು.ನಿವೃತ್ತರನ್ನು ಸಂಘದ ಮಾಜಿ ಉಪಾಧ್ಯಕ್ಷ ಕೆದ್ಲ...

ಜ.27 : ಹರಿಹರಪಲ್ಲತ್ತಡ್ಕ ಶ್ರೀ ಗುಳಿಗರಾಜ ದೈವಸ್ಥಾನ ಎಲ್ಲಪಡ್ಕ ವಾರ್ಷಿಕ ನೇಮೋತ್ಸವ

ಹರಿಹರ ಪಲ್ಲತ್ತಡ್ಕ ಗ್ರಾಮದ ಎಲ್ಲಪಡ್ಕ ದಲ್ಲಿರುವ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.27 ಬುಧವಾರ ದಂದು ವಾರ್ಷಿಕ ನೇಮೋತ್ಸವ ನಡೆಯಲಿದೆ ಹಾಗೂ ಮಧ್ಯಾಹ್ನ 1:00 ಗಂಟೆಯಿಂದ ದೈವಸ್ಥಾನದ ವಠಾರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ವರದಿ:-✍ಉಲ್ಲಾಸ್ ಕಜ್ಜೋಡಿ

ಗುತ್ತಿಗಾರು : ಪೈಕ ಶ್ರೀ ಉಳ್ಳಾಕುಲು ಮತ್ತು ಮಲೆದೈವ ಗಳ ಹಾಗೂ ಅಜ್ಜಿ ದೈವದ ಸಾನ್ನಿಧ್ಯಗಳ ಪುನರ್ ಪ್ರತಿಷ್ಠೆ

ಪೈಕ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ಹಾಗೂ ಅಜ್ಜಿ ದೈವದ ಸಾನ್ನಿಧ್ಯಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಜ .19 ಹಾಗೂ 20 ರಂದು ನಡೆಯಿತು . ಜ.19 ರಂದು ತಂತ್ರಿಗಳ ಸ್ವಾಗತ ಕಾರ್ಯಕ್ರಮ ,ಶಿಲ್ಪಿಗಳಿಂದ ದೈವಸ್ಥಾನ ಬಿಟ್ಟುಕೊಡುವ ಕಾರ್ಯಕ್ರಮ ,ಸಾಯಂಕಾಲ ದೇವತಾ ಪ್ರಾರ್ಥನೆ ,ಪುಣ್ಯಾಹವಾಚನ ಸಪ್ತಶುದ್ದಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ,...
Loading posts...

All posts loaded

No more posts

error: Content is protected !!