Ad Widget

ಗುತ್ತಿಗಾರು : ಲಾಸ್ಯ ಕಲಾ ಶಾಲೆಯಲ್ಲಿ ನೃತ್ಯ ತರಬೇತಿ ಆರಂಭ

ಗುತ್ತಿಗಾರಿನ ಲಾಸ್ಯ ಕಲಾ ಶಾಲೆಯಲ್ಲಿ ಜ.3 ರಿಂದ ಪ್ರತಿ ಆದಿತ್ಯವಾರ ನೃತ್ಯ ತರಗತಿಗಳು ಆರಂಭವಾಗಲಿದೆ. ಆಸಕ್ತರು ದೂರವಾಣಿ ಮುಖಾಂತರ (ಮೊ: 94805 30310) ಸಂಪರ್ಕಿಸಬಹುದು ಎಂದು ಶಿಕ್ಷಕಿ ಶ್ರೀಮತಿ ರೇಶ್ಮಾ ಕಡ್ಯ ತಿಳಿಸಿದ್ದಾರೆ.

ನೆಲ್ಲೂರುಕೆಮ್ರಾಜೆ : ಮಂಟಮೆ ಶಿರಾಡಿ ದೇವಸ್ಥಾನದಲ್ಲಿ ಶ್ರಮದಾನ

ನೆಲ್ಲೂರುಕೆಮ್ರಾಜೆ ಗ್ರಾಮದ ಪಂಚಸ್ಥಾಪನೆಗೆ ಒಳಪಟ್ಟ ಮಂಟಮೆ ಶ್ರೀ ಶಿರಾಡಿ ದೇವಸ್ಥಾನ ಇದರ ಪ್ರತಿಷ್ಟ ಕಲಶೋತ್ಸವ ಕಾರ್ಯಕ್ರಮ ಅಂಗವಾಗಿ ನಾರ್ಣಕಜೆ,ದಾಸನಕಜೆ,ಸುಳ್ಳಿ ಭಾಗದ ಭಕ್ತಾಭಿಮಾನಿಗಳ ವತಿಯಿಂದ ಜ.3 ಶ್ರಮದಾನ ನಡೆಯಿತು.ಈ ಶ್ರಮದಾನದಲ್ಲಿ ಜಯಪ್ರಸಾದ್ ಸುಳ್ಳಿ, ಕೃಷ್ಣ ನಾರ್ಣಕಜೆ,ಬಾಬು ದಾಸನಕಜೆ , ಮಾಧವ ದಾಸನಕಜೆ, ಬಾಬು ನಾರ್ಣಕಜೆ, ಪ್ರಭಾಕರ ಸುಳ್ಳಿ, ಪ್ರಶಾಂತ ದಾಸನಕಜೆ, ಪುರುಷೋತ್ತಮ ನಾರ್ಣಕಜೆ, ಕುಶಾಲಪ್ಪ ದಾಸನಕಜೆ, ಶಿವ...
Ad Widget

ಪೆರುವಾಜೆ : ಭಾವೈಕ್ಯ ಯುವಕ ಮಂಡಲದಿಂದ ಕ್ಯಾಪ್ಟನ್ ಸುದಾನಂದ್ ರವರಿಗೆ ಅಭಿನಂದನೆ

ಭಾವೈಕ್ಯ ಯುವಕ ಮಂಡಲ (ರಿ) ಪೆರುವಾಜೆ ಇದರ ವತಿಯಿಂದ ಭೂಸೇನೆಯಿಂದ ನಿವೃತ್ತರಾದ ಕ್ಯಾಪ್ಟನ್ ಸುದಾನಂದ್ ಪೆರುವಾಜೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೆಂಕಟಕೃಷ್ಣ ರಾವ್, ಪೆರುವಾಜೆ ಬೂತಿನಿಂದ ಆಯ್ಕೆಯಾದ ಪದ್ಮನಾಭ ಶೆಟ್ಟಿ, ಮಾಧವ ಮುಂಡಾಜೆ ಹಾಗೂ ರೇವತಿ ಡಿ, ಯುವಕ ಮಂಡಲ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಹಲವಾರು ಏಳುಬೀಳುಗಳನ್ನು ಕಂಡ ಜೀವನದ ಪಾಠವನ್ನು ಕಲಿಸಿದ ವರ್ಷ 2020

2020 ಹಲವಾರು ಏಳುಬೀಳುಗಳನ್ನು ಕಂಡ ಜೀವನದ ಪಾಠವನ್ನು ಕಲಿಸಿದ ವರ್ಷ ಎಂದು ಹೇಳಿದರೆ ತಪ್ಪಾಗಲಾರದು. ಈಗ ಆ 2020 ನೇ ವರ್ಷವನ್ನು ಕಳೆದು ನಾವು 2021 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಪ್ರತಿ ವರ್ಷದಂತೆ ಇರಲಿಲ್ಲ. ವರ್ಷದ ಆರಂಭದಲ್ಲೇ ಕೊರೋನಾ ಎಂಬ ಭೀಕರ ಮಹಾಮಾರಿ ವಕ್ಕರಿಸಿತು. ಜನರ ಜೀವನವೆಲ್ಲ ಬದಲಾಗಿ ಹೋಯಿತು. ಪ್ರತಿನಿತ್ಯ ಶಾಲಾ...

ಕೊಲ್ಲಮೊಗ್ರ : ಕಟ್ಟ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರುದ್ರಾಭಿಷೇಕ

ಕೊಲ್ಲಮೊಗ್ರ ಗ್ರಾಮದ ಕಟ್ಟ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ರುದ್ರಾಭಿಷೇಕ ಜ. 2 ರಂದು ನಡೆಯಿತು. ಈ ಸಂದರ್ಭದಲ್ಲಿ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆಡಳಿತಾಧಿಕಾರಿ,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು,ಸದಸ್ಯರು, ಉತ್ಸವ ಸಮಿತಿಯ ಸದಸ್ಯರು ಮತ್ತು ಊರ ಭಕ್ತಾದಿಗಳು ಭಾಗವಹಿಸಿದ್ದರು.

“ಉಗ್ಗವನ ಮುದ್ದುನ ಬಾಬೆ” ಅರೆಭಾಷೆ ಹಾಡು ಬಿಡುಗಡೆ

ಕೊಲ್ಲಮೊಗ್ರದ ತೇಜು ಹಾಡಿರುವ "ಉಗ್ಗವನ ಮುದ್ದುನ ಬಾಬೆ" ಅರೆಭಾಷೆ ಹಾಡು ಜ.1 ರಂದು ಬಿಡುಗಡೆ ಗೊಂಡಿತು. ರಮ್ಯಶ್ರೀ ನಡುಮನೆ ಬರೆದಿರುವ ಈ ಹಾಡು ಯೂಟ್ಯೂಬ್ ನಲ್ಲಿ ಲಭ್ಯವಿದೆ. ಹಾಡನ್ನು ಕೇಳಲು ಈ ಲಿಂಕ್ ಬಳಸಿ. https://youtu.be/KJvOfhhuCO8

ಪೈಕ : ಶ್ರೀ ಉಳ್ಳಾಕುಲು ಮತ್ತು ಮಲೆದೈವ ಅಜ್ಜಿ ದೈವದ ಸಾನಿಧ್ಯಗಳ ಪುನರ್ ಪ್ರತಿಷ್ಠೆ ಆಮಂತ್ರಣ ಬಿಡುಗಡೆ

ಗುತ್ತಿಗಾರು ಗ್ರಾಮದ ಪೈಕ ಶ್ರೀ ಉಳ್ಳಾಕುಲು ಮತ್ತು ಮಲೆದೈವ ಅಜ್ಜಿ ದೈವದ ಸಾನಿಧ್ಯಗಳ ಪುನರ್ ಪ್ರತಿಷ್ಠೆ ಹಾಗೂ ಶ್ರೀ ದೈವಗಳ ನೇಮೊತ್ಸವದ ಆಮಂತ್ರಣ ಪತ್ರಿಕೆ ಇಂದು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಡಿ ಯಂ ರಾಮಣ್ಣ ಗೌಡ ಅಧ್ಯಕ್ಷರಾದ ಬಿ ನಾಗಪ್ಪ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಲೋಕೇಶ್ವರ ಡಿ ಆರ್ ಹಾಗೂ ಎಲ್ಲಾ...

ಜ.2 ರಂದು ಪ್ರಥಮ ಬಾರಿ ಅಧಿಕಾರಕ್ಕೇರಿದ ಬೆಳ್ಳಾರೆಯಲ್ಲಿ ಬಿಜೆಪಿ ವಿಜಯೋತ್ಸವ

ಬೆಳ್ಳಾರೆ ಗ್ರಾಮ ಪಂಚಾಯತ್ ಪ್ರಪ್ರಥಮ ಬಾರಿಗೆ ಬಿಜೆಪಿ ಪಾಲಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿಜಯದ ಹಿನ್ನೆಲೆಯಲ್ಲಿ ಜ. 2 ಶನಿವಾರ ಮಧ್ಯಾಹ್ನ 03 ಗಂಟೆಗೆ ಬೆಳ್ಳಾರೆ ಗ್ರಾಮ ಸ್ವರಾಜ್ಯ ತಂಡದ ಆರ್ ಕೆ ಭಟ್ ಕುರುಂಬುಡೇಲು ಇವರ ನೇತೃತ್ವದಲ್ಲಿ ಬೆಳ್ಳಾರೆಯಲ್ಲಿ ವಿಜೃಂಭಣೆಯ ವಿಜಯೋತ್ಸವ ನಡೆಯಲಿದೆ ಎಂದು ಬೆಳ್ಳಾರೆ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಜ.2 ರಂದು ಗುತ್ತಿಗಾರಿನಲ್ಲಿ ಬಿಜೆಪಿ ವಿಜಯೋತ್ಸವ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜ.2 ಶನಿವಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಎಸ್. ಅಂಗಾರ ಮತ್ತು ಪಾರ್ಟಿಯ ಪ್ರಮುಖರು ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆ ಬಾಕಿಲದಿಂದ ಮುತ್ತಪ್ಪ ನಗರದ ವರೆಗೆ ವಿಜಯೋತ್ಸವದ ಮೆರವಣಿಗೆ ನಡೆಯಲಿದೆ ಎಂದು ಗುತ್ತಿಗಾರು ಬಿಜೆಪಿ ಪ್ರಕಟಣೆ ತಿಳಿಸಿದೆ.

ಮನೆಯ ಟೆರೇಸ್ ಮೇಲಿನಿಂದ ಬಿದ್ದು ಉದ್ಯಮಿ ಕಾವೇರಿ ಸಂತೋಷ್ ಮಡ್ತಿಲ ಮೃತ್ಯು

ಸುಳ್ಯದ ಉದ್ಯಮಿ ಕಾವೇರಿ ಸಂತೋಷ್ ಮಡ್ತಿಲ ದೇವಚಳ್ಳ ಗ್ರಾಮದ ದೇವ ಎಂಬಲ್ಲಿ ಮನೆ ನೋಡಲು ತೆರಳಿದ್ದ ವೇಳೆ ಟೆರೆಸ್ ಮೇಲಿನಿಂದ ಬಿದ್ದು ಗಂಭಿರ ಗಾಯಗೊಂಡು ಆ‌ಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮಹಡಿಯಿಂದ ಸಂಜೆ 5.30 ಕ್ಕೆ ಬಿದ್ದ ಕೂಡಲೇ ಅವರನ್ನು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ,ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ಪಸ್ಟ್...
Loading posts...

All posts loaded

No more posts

error: Content is protected !!