- Tuesday
- April 1st, 2025

ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ, ಪಶು ಚಿಕಿತ್ಸಾಲಯ ಬೆಳ್ಳಾರೆ ವತಿಯಿಂದ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವು ಜ.30 ರಂದು ಬೆಳ್ಳಾರೆಯಲ್ಲಿ ನಡೆಯಿತು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ವಿಶ್ವನಾಥರವರು ನಾಯಿಗಳಿಗೆ ಲಸಿಕೆ ನೀಡಿದರು.

ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ಮತ್ತು ಶಿಶು ಕಲ್ಯಾಣ ಇಲಾಖೆಯ ವತಿಯಿಂದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಾಹಿತಿ ಶಿಬಿರ ನಡೆಯಿತು. ಶಿಬಿರದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಜಯಮಣಿ ಮಾಧವ ವಹಿಸಿದ್ದರು. ಇಲಾಖೆಯ ಅಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ದೀಪ ಬೆಳಗಿಸಿದರು. ಡಾ.ವೀಣಾ ಪಾಲಚಂದ್ರ ಕಿಶೋರಿಯವರಿಗೆ ಯೌವನಾವಸ್ಥೆಯಲ್ಲಿ ಬೇಕಾದ ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್...

ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ಇದರ ಮಹಾಸಭೆಯು ಜ.28 ರಂದು ಬೆಳ್ಳಾರೆಯ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ2021- 22ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಹೊಸ ಸದಸ್ಯರ ಸೇರ್ಪಡೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಿಥುನ್ ಶೆಣೈ, ಅಧ್ಯಕ್ಷರಾಗಿ ಸಚಿನ್ ರೈ ಪೂವಾಜೆ, ಕಾರ್ಯದರ್ಶಿಯಾಗಿ ರಂಜನ್ ತಡಗಜೆ,ಕೋಶಾಧಿಕಾರಿಯಾಗಿ ಮಂಜುನಾಥ ಹೆಗ್ಡೆ ತಡಗಜೆ,ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ...

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ‘ಅಯ್ಯನಕಟ್ಟೆ ಜಾತ್ರೆ’ ಜ. 26 ರಂದು ಆರಂಭಗೊಂಡಿದ್ದು ಜ. 29 ರಂದು ಸಂಪನ್ನಗೊಂಡಿತು.ಜ. 29ರಂದು ಬೆಳಗ್ಗೆ ತಂಟೆಪ್ಪಾಡಿಯಿಂದ ಶಿರಾಡಿ ದೈವ, ಕಳಂಜ ಗುತ್ತಿನಿಂದ ಧೂಮಾವತಿ ದೈವ ಹಾಗೂ ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು, ಕಳಂಜ ಕಲ್ಲಮಾಡದ ಬಳಿ ಶಿರಾಡಿ ,...

ಮಾಜಿ ಕೇಂದ್ರ ಸಚಿವ ದಿ.ಜಾರ್ಜ್ ಫೆರ್ನಾಂಡೀಸ್ ರವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಜ.29 ರಂದು ಮಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಮಿಕರಿಗಾಗಿ ದುಡಿಯುತ್ತಿರುವ ಜಿಲ್ಲೆಯ ಮೂವರನ್ನು ಗುರುತಿಸಿ ಸನ್ಮಾನಿಸಲಾಗಿದ್ದು, ಸುಳ್ಯದ ಇಂಟಕ್ ಅಧ್ಯಕ್ಷ, ಉದ್ಯಮಿ ಶಾಫಿ ಕುತ್ತಮೊಟ್ಟೆ ಯವರನ್ನು ಸನ್ಮಾನಿಸಲಾಯಿತು

ಸುಳ್ಯ : ಕೆಲವು ದಿನಗಳಿಂದ ಪ್ಲಾಸ್ಟಿಕ್ ನಿಷೇಧದ ಕೂಗು ಕೇಳಿಬರುತ್ತಿದ್ದಾರು ಯಾರು ಇದನ್ನು ಪರಿಗಣಿಸದೇ ಇರುವುದನ್ನು ನಿಷೇಧ ಹೇರಿದರೂ ಕಂಡಕಂಡಲ್ಲಿ ಪ್ಲಾಸ್ಟಿಕ ನ್ನು ಬಿಸಾಡುವುದನ್ನು ವಿರೋಧಿಸಿ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿಯನ್ನು ಸುಳ್ಯ ಎಸ್ ಕೆ ಎಸ್ಎಸ್ಎಫ್ ವಿಖಾಯ ಸುಳ್ಯ ವಲಯ ವತಿಯಿಂದ 'ಶುಚಿಯಾದ ಪರಿಸರಕ್ಕಾಗಿ ನಾಳಿನ ತಲೆಮಾರಿಗಾಗಿ ಪ್ಲಾಸ್ಟಿಕ್ ಮುಕ್ತರಾಗೋಣ'ಎಂಬ ಧ್ಯೇಯ ವಾಕ್ಯದೊಂದಿಗೆ ಜ.31ರಿಂದ ಫೆ.7...

ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ಬೈಲಿನ ಹತ್ತು ಮಂದಿ ಸಮಸ್ತರಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ಜಾತ್ರೋತ್ಸವ ಜ.25,26,27 ರಂದು ಗಣಹೋಮ, ನಾಗತಂಬಿಲ ಹಾಗೂ ದೈವ ನರ್ತನ ಸೇವೆಯೊಂದಿಗೆ ನಡೆಯಿತು. ಜ.25 ರಂದು ರಾತ್ರಿ ನಡೆದ ಭಕ್ತಾದಿಗಳ ಸಭೆ ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಮಡಪ್ಪಾಡಿಯವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಆಡಳಿತ ಮಂಡಳಿ...

ಸುಳ್ಯ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ 33/11ಕೆವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ ಗಳಾದ ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ, ಅರಂತೋಡು ಕೋಲ್ಚಾರ್, ಕಾವು, ಅಜ್ಜಾವರ,ಕೇನ್ಯ, ಸುಬ್ರಹ್ಮಣ್ಯ ಫೀಡರ್ ಗಳಲ್ಲಿ ಜ.30 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸುಳ್ಯ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಭಾವೈಕ್ಯ ಯುವಕ ಮಂಡಲ (ರಿ)ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ ಮತ್ತು ಗ್ರಾಮ ಪಂಚಾಯತ್ ಪೆರುವಾಜೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ಮೇಳ ಕಾರ್ಯಕ್ರಮವು ಜ. 28 ರಂದು ಗ್ರಾಮ ಪಂಚಾಯತ್ ಪೆರುವಾಜೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಭಾವೈಕ್ಯ ಯುವಕ ಮಂಡಲ (ರಿ) ಪೆರುವಾಜೆ ಇದರ...

All posts loaded
No more posts